Gruha Jyothi Registration: ಗೃಹ ಜ್ಯೋತಿ ನಿಯಮದಲ್ಲಿ ಮತ್ತೆ ದೊಡ್ಡ ಬದಲಾವಣೆ, ಸರ್ಕಾರದ ನಿರ್ಧಾರ ಜನರ ಮೆಚ್ಚುಗೆ

ಗೃಹ ಜ್ಯೋತಿ ಯೋಜನೆಯಲ್ಲಿ ಬದಲಾವಣೆ, ಸರ್ಕಾರದ ಆದೇಶ

Gruha Jyothi Registration Rule Change: ಸದ್ಯ ರಾಜ್ಯದಲ್ಲಿ ರಾಜ್ಯ ಸರ್ಕಾರ ಗೃಹ ಜ್ಯೋತಿ (Gruha Jyothi) ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಅನ್ನು ನೀಡುತ್ತಿದೆ. ತಿಂಗಳ ಸರಾಸರಿ ಲೆಕ್ಕಾಚಾರದ ಮೇಲೆ ಫಲಾನುಭವಿಗಳು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ.

ಇದೀಗ ಗೃಹಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಉಚಿತ ವಿದ್ಯುತ್ ಫಲಾನುಭವಿಗಳಿಗೆ ಹೊಸ ನಿಯಮ ಜಾರಿಯಾಗಲಿದೆ. ಅಷ್ಟಕ್ಕೂ ಗೃಹ ಜ್ಯೋತಿ ಯೋಜನೆಯಲ್ಲಿ ಬದಲಾವಣೆ ತರಲು ಕಾರಣವೇನು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Gruha Jyothi Scheme Registration
Image Credit: Wateraidindia

ಗೃಹ ಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯು ರಾಜ್ಯದಲ್ಲಿ ಜುಲೈ ನಿಂದ ಅರ್ಹ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಅನ್ನು ನೀಡುತ್ತಿದೆ. ಸದ್ಯ ಗೃಹ ಜ್ಯೋತಿ ಯೋಜನೆಯ ನೋಂದಣಿಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.

ಈವರೆಗೆ ಗೃಹ ಜ್ಯೋತಿ ಯೋಜನೆಯ ನೋಂದಣಿಯನ್ನು ಸೇವಾ ಸಿಂಧು ಪೋರ್ಟಾಲ್ ನ ಮೂಲಕ ಮಾಡಲಾಗುತ್ತಿತ್ತು. ಆದರೆ ಇನ್ನುಮುಂದೆ ಈ ಪೋರ್ಟಲ್ ನ ಬದಲಾಗಿ ಹೊಸ ಪೋರ್ಟಲ್ ಅಂಲ್ಲಿ ಗೃಹ ಲಕ್ಷ್ಮಿ ನೋಂದಣಿಗೆ ಸರಕಾರ ಅನುಮತಿ ನೀಡಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದೆ.

Gruha Jyothi Registration Rule Change
Image Credit: Kannada News Today

ಇನ್ನುಮುಂದೆ 10 ಯೂನಿಟ್ ಉಚಿತ ವಿದ್ಯುತ್
ಗೃಹ ಜ್ಯೋತಿ ಯೋಜನೆಯಡಿ, ತಿಂಗಳಿಗೆ 48 ಯೂನಿಟ್‌ ಗಿಂತ ಕಡಿಮೆ ವಿದ್ಯುತ್ ಬಳಸುವ 70 ಲಕ್ಷ ಗ್ರಾಹಕರಿಗೆ ತಿಂಗಳಿಗೆ 10% ಹೆಚ್ಚುವರಿ ವಿದ್ಯುತ್ ಬದಲಿಗೆ 10 ಯೂನಿಟ್ ಹೆಚ್ಚುವರಿ ಉಚಿತ ವಿದ್ಯುತ್ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಯಾರು ತಿಂಗಳಿನಲ್ಲಿ 48 ಯುನಿಟ್ ಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುತ್ತಾರೋ ಅಂತವರು ಇನ್ನುಮುಂದೆ ಹೆಚ್ಚುವರಿಯಾಗಿ 10 ಯುನಿಟ್ ಅನ್ನು ಪಡೆಯಬಹುದು. ಇದಕ್ಕಾಗಿ ಸರ್ಕಾರ ಗೃಹ ಜ್ಯೋತಿ ಯೋಜನೆಯ ನೋಂದಣಿಯಲ್ಲಿ ಮಹತ್ವದ ಬದಲಾವಣೆ ತಂದಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group