Gruha Jyothi Scheme: ಇನ್ನು ಗೃಹ ಜ್ಯೋತಿ ಯೋಜನೆ ಅರ್ಜಿ ಹಾಕಿಲ್ವಾ, ಈ ಲಿಂಕ್ ಮೂಲಕ ಸುಲಭವಾಗಿ ಅರ್ಜಿ ಹಾಕಿ.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಹೊಸ ವಿಧಾನ.

Gruha Jyothi Scheme New Application Process: ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನೀಡಿರುವ ಭರವಸೆಗಳ ಅನುಷ್ಠಾನದ ಸುದ್ದಿಗಳು ಸಾಕಷ್ಟು ಹರಡುತ್ತಿವೆ.ರಾಜ್ಯದ ಜನತೆ ಭರವಸೆಗಳ ಅನುಷ್ಠಾನಕ್ಕಾಗಿ ಕಾಯುತ್ತಿದ್ದಾರೆ.

ಇನ್ನು ಈಗಾಗಲೇ ಒಂದು ಯೋಜನೆ ಜಾರಿಯಾಗಿದ್ದು, ಇನ್ನು ನಾಲ್ಕು ಯೋಜನೆಗಳ ಅನುಷ್ಠಾನದ ಕುರಿತಾಗಿ ಸರ್ಕಾರ ಸಿದ್ಧತೆಯಲ್ಲಿದೆ. ಇನ್ನು ಗೃಹ ಜ್ಯೋತಿ ಅನುಷ್ಠಾನದ ಕುರಿತು ಸರ್ಕಾರ ಹೊಸ ಹೊಸ ಮಾರ್ಗಸೂಚಿ ಹೊರಡಿಸುತ್ತಿದೆ.

ಗೃಹ ಜ್ಯೋತಿ ಯೋಜನೆ
ಗೃಹ ಜ್ಯೋತಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ಈಗಾಗಲೇ ಜನಸಾಮಾನ್ಯರಲ್ಲಿ ಗೊಂದಲ ಏರ್ಪಟ್ಟಿದೆ. ಅರ್ಹ ಫಲಾನುಭವಿಗಳು ಯಾರು ಎನ್ನುವ ಬಗ್ಗೆ ಸರ್ಕಾರ ಹೊಸ ಹೊಸ ಆದೇಶ ಹೊರಡಿಸುತ್ತಿದೆ.ಇನ್ನು ಸರ್ಕಾರ ಬಾಡಿಗೆದಾರರಿಗೆ ಉಚಿತ ವಿದ್ಯುತ್ ನೀಡುವ ಕುರಿತು ಘೋಷಣೆ ಹೊರಡಿಸಿದೆ.

New way to apply for Gruha Jyoti
Image Credit: Oneindia

ಇದೀಗ ಗೃಹ ಜ್ಯೋತಿ ಯೋಜನೆಯ ಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಆರಂಭವಾಗಿದೆ. ಗೃಹಜ್ಯೋತಿ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬಹುದು ಹಾಗೂ ಯಾವ ಯಾವ ದಾಖಲೆಗಳು ಅಗತ್ಯ ಎನ್ನುವ ಬಗ್ಗೆ ವಿವರಗಳನ್ನು ತಿಳಿಯೋಣ.

ಆಗಸ್ಟ್ 1 ರಿಂದ ಜಾರಿಯಾಗಲಿದೆ ಗೃಹಜ್ಯೋತಿ ಯೋಜನೆ
ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಆಗಸ್ಟ್ 1 ರಿಂದ ಜಾರಿಗೆ ತರಲು ತೀರ್ಮಾನಿಸಿದೆ. 12 ತಿಂಗಳ ಸರಾಸರಿ ಆಧಾರದ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಕೂಡ ಪ್ರಾರಂಭವಾಗಿದೆ. ಆಗಸ್ಟ್ ನಿಂದ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ.

Join Nadunudi News WhatsApp Group

ಜೂನ್ 18 ರಿಂದ ಗೃಹಜ್ಯೋತಿ ಅರ್ಜಿ ಪ್ರಾರಂಭವಾಗಿದ್ದು, ಸಾಕಷ್ಟು ಜನರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ ನಂತರ ಸರ್ವರ್ ಡೌನ್ ಆಗಿರುವುದರಿಂದ ಹಲವು ಜನರಿಗೆ ಅರ್ಜಿ ನೊಂದಾಯಿಸಲು ಆಗಲಿಲ್ಲ.

New way to apply for Gruha Jyoti
Image Credit: Vistaranews

ಇದಕ್ಕಾಗಿ ಸರ್ಕಾರ ಹೊಸ ಲಿಂಕ್ ಬಿಡುಗಡೆ ಮಾಡಿದೆ. ಜನರು ಇನ್ನುಮುಂದೆ ಈ ಹೊಸ ಲಿಂಕ್ ಮೂಲಕ ನೋಂದಣಿ ಮಾಡಬಹುದು. ಈ ಹೊಸ ಲಿಂಕ್ ಮೂಲಕ ಮೊದಲಿಗಿಂತ ಸುಲಭ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿರುವ ವಿಧಾನದ ಬಗ್ಗೆ ತಿಳಿದುಕೊಳ್ಳಿ.

ಗೃಹಜ್ಯೋತಿ ಅರ್ಜಿ ಸಲ್ಲಿಸಲು ಹೊಸ ವಿಧಾನ
https://sevasindhugs.karnataka.gov.in/?utm_source=DH-MoreFromPub&utm_medium=DH-app&utm_campaign=DH ಈ ಹೊಸ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕಾಣಿಸುವ ಗೃಹಜ್ಯೋತಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದರ ನಂತರ ವಿಂಡೋ ತೆರೆಯಲಿದೆ. ಹೊಸ ವಿಂಡೋದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ Get Details ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.

New way to apply for Gruha Jyoti
Image Credit: Informalnewz

ಇದಾದ ನಂತರ ಆಧಾರ್ ಮಾಹಿತಿ ಒಳಗೊಂಡ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ ಗ್ರಾಹಕರ ಐಡಿಯನ್ನು ನಮೂದಿಸಿ, ನಂತರ ಬಾಡಿಗೆಯವರ, ಮಾಲೀಕರ ಎನ್ನುವುದನ್ನು ಆಯ್ಕೆ ಮಾಡಿ, ಸಂಪರ್ಕ ಸಂಖ್ಯೆಯನ್ನು ನಮೂದಿಸಿದರೆ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

ಅದನ್ನು ನಮೂದಿಸಿ ಕೆಳಗಡೆ ನೀಡಿರುವ ಕ್ಯಾಪ್ಚಾ ವನ್ನು ನಮೂದಿಸಿ Submitt ಬಟನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಅರ್ಜಿ ಸ್ವೀಕರಿಸುವ ಮಾಹಿತಿ ಬರುತ್ತದೆ. ಅದನ್ನು ಡೌನ್‌ ಲೋಡ್ ಅಥವಾ ಪ್ರಿಂಟ್‌ಔಟ್ ತೆಗೆದು ಇಟ್ಟುಕೊಳ್ಳಿ.

Join Nadunudi News WhatsApp Group