Gruha Jyothi Eligibility: ಗೃಹ ಜ್ಯೋತಿ ಯೋಜನೆಗೆ ಯಾರು ಅರ್ಹರು, ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರ.

ಗೃಹ ಜ್ಯೋತಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಬಗ್ಗೆ ತಿಳಿಯಿರಿ.

Gruha Jyothi Application Eligibility: ರಾಜ್ಯದಲ್ಲಿ ಇದೀಗ ಉಚಿತ ಯೋಜನೆಗಳ ಕುರಿತು ಚರ್ಚೆ ನಡೆಯುತ್ತಿದೆ. ಗೃಹಜ್ಯೋತಿ (Gruha Jyothi) ಯೋಜನೆಯ ಕುರಿತು ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ಬಂದಿದೆ. ಆಗಸ್ಟ್ ತಿಂಗಳಿನಲ್ಲಿ ರಾಜ್ಯದ ಜನತೆಗೆ ಉಚಿತ ವಿದ್ಯುತ್ ಪೂರೈಕೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇನ್ನು 200 ಯೂನಿಟ್ ಫ್ರೀ ವಿದ್ಯುತ್ ಬಾಡಿಗೆದಾರರಿಗೂ ಲಭಿಸುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಇದೀಗ ಗೃಹ ಜ್ಯೋತಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Who is eligible for Griha Jyoti Yojana
Image Credit: Thehindu

ಆಗಸ್ಟ್ 1 ರಿಂದ ಜಾರಿಯಾಗಲಿದೆ ಗೃಹಜ್ಯೋತಿ ಯೋಜನೆ
ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಆಗಸ್ಟ್ 1 ರಿಂದ ಜಾರಿಗೆ ತರಲು ತೀರ್ಮಾನಿಸಿದೆ. 12 ತಿಂಗಳ ಸರಾಸರಿ ಆಧಾರದ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನೀವು ಸರಾಸರಿ 70 ಯೂನಿಟ್ ಕರೆಂಟ್ ಬಳಸಿದ್ದರೆ ಅಥವಾ 199 ಯೂನಿಟ್ ಕರೆಂಟ್ ಬಳಕೆ ಮಾಡಿದ್ದರೆ, ಅಂದರೆ 12 ತಿಂಗಳ ಸರಾಸರಿ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಗೃಹ ಜ್ಯೋತಿ ಯೋಜನೆಗೆ ಯಾರು ಅರ್ಹರು
ಕರ್ನಾಟಕ ರಾಜ್ಯದ ಪ್ರತಿಯೊಬರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇನ್ನು ಸೇವಾ ಸಿಂಧು ಪೋರ್ಟಲ್ ನ ಮೂಲಕ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Information about who is eligible for Griha Jyoti Yojana
Image Credit: Gizbot

ಗೃಹ ಜ್ಯೋತಿ ಯೋಜನೆಯ ನೋಂದಣಿಯು ಜೂನ್ 15 ರಿಂದಲೇ ಪ್ರಾರಂಭವಾಗಲಿದೆ. ಜುಲೈ 2023 ರಲ್ಲಿ ಬಳಸಿದ ವಿದ್ಯುತ್ ಬಿಲ್ ಅನ್ನು ಆಗಸ್ಟ್ ನಲ್ಲಿ ನೀಡುವ ಬಿಲ್ಲಿಗೆ ಅನ್ವಯವಾಗಲಿದೆ. https://sevasindhu.karnataka.gov.in/Sevasindhu ಲಿಂಕ್ ಅನ್ನು ನೀಡಲಾಗಿದೆ. ಈ ಲಿಂಕ್ ನ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ
*ಅಧಿಕೃತ ವೆಬ್ ಸೈಟ್ https://sevasindhu.karnataka.gov.in/Sevasindhu ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

* ನಿಮ್ಮ ಹೆಸರು, ವಿಳಾಸ, ಸಂಪರ್ಕ ವಿವರಗಳು, ಆಧಾರ್ ಕಾರ್ಡ್ ಸಂಖ್ಯೆ ಇತ್ಯಾದಿಗಳನ್ನು ನೋಂದಾಯಿಸಬೇಕು.

Information about who is eligible for Griha Jyoti Yojana
Image Credit: Mangaloretoday

* ನಂತರ ರಚಿಸಿದ ರುಜುವಾತುಗಳನ್ನು ಬಳಸಿಕೊಂಡು ವೆಬ್ ಸೈಟ್ ಗೆ ಲಾಗ್ ಇನ್ ಮಾಡಬೇಕು.

* ಅರ್ಜಿ ನಮೂನೆಯನ್ನು ಪ್ರವೇಶಿಸಲು ಗೃಹಜ್ಯೋತಿ ಯೋಜನೆ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.

* ಅಗತ್ಯವಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಿ. ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

Join Nadunudi News WhatsApp Group