Gruha Lakhsmi: ಗೃಹಲಕ್ಷ್ಮಿ 2000 ರೂ ಪಡೆಯುವ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, ರಾತ್ರೋರಾತ್ರಿ ಸರ್ಕಾರದ ಆದೇಶ

ಗೃಹ ಲಕ್ಷ್ಮಿ ಸಮಸ್ಯೆ ಪರಿಹಾರಕ್ಕಾಗಿ ಮತ್ತೊಂದು ಮಾರ್ಗ, ಈ ಮಾರ್ಗ ಅನುಸರಿಸಿದರೆ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ

Gruha Lakhsmi Latest News Update: ರಾಜ್ಯದಲ್ಲಿ ಕೋಟ್ಯಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಇದು ಉತ್ತಮ ಯೋಜನೆಯಾಗಿ ಮಾರ್ಪಟ್ಟಿದ್ದು, ಈ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಜಮಾ ಆಗುತ್ತಿದ್ದು, ಮನೆಯ ಸಣ್ಣ ಪುಟ್ಟ ಖರ್ಚುಗಳಿಗೆ ಈ ಯೋಜನೆ ಹಣ ಬಹಳ ಸಹಾಯಕ ಆಗುತ್ತಿದೆ.

ಗೃಹಲಕ್ಷ್ಮಿ ಯೋಜನೆ ಪ್ರಾರಂಭ ಆಗಿ ಐದು ತಿಂಗಳು ಕಳೆದು, ಐದು ಕಂತಿನ ಹಣ ಕೂಡ ಮಹಿಳೆಯರ ಖಾತೆ ಸೇರಿದೆ ಆದರೆ ಇನ್ನು ಒಂದು ಕಂತಿನ ಹಣ ಪಡೆಯದ ಅರ್ಹ ಮಹಿಳೆಯರ ಕಥೆ ಏನು ಎನ್ನುವುದು ಸರ್ಕಾರದ ಸಮಸ್ಯೆ ಆಗಿದೆ. ಈ ಸಮಸ್ಯೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿದೆ. ಇದೀಗ ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ಮತ್ತೊಂದು ಮಾರ್ಗವನ್ನು ಕಂಡುಕೊಂಡಿದೆ.

Gruha Lakhsmi Latest News Update
Image Credit: News9live

ಗೃಹಲಕ್ಷ್ಮಿ ಸಮಸ್ಯೆಗೆ ಹೊಸ ಪರಿಹಾರ
ಗೃಹ ಲಕ್ಷ್ಮಿ ಯೋಜನೆಯ ಹಣ ತಾಂತ್ರಿಕ ಕಾರಣದಿಂದ ಸಹಸ್ರಾರು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಸಮಸ್ಯೆ ಗೆ ಪರಿಹಾರ ನೀಡಲು ಮುಂದಾಗಿದೆ.

ಈ ಮಾರ್ಗ ಅನುಸರಿಸಿದರೆ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ
ಇದೀಗ ಗ್ರಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ವಾಸ್ತವವಾಗಿ ತೆರಿಗೆ ಪಾವತಿಸದಿದ್ದರು IT / GST ಪೋರ್ಟಲ್ ನಲ್ಲಿ ಅವರ ಹೆಸರು ತೋರಿಸುತ್ತಿದೆ. ಈ ಕಾರಣಕ್ಕಾಗಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರು ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಯೋಜನೆಗೆ ಅರ್ಹರಾಗಿರುವವರು ಸಂಬಂಧಪಟ್ಟ IT / GST ಪ್ರಾಧಿಕಾರಗಳಿಂದ ತಾವು ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ದೃಢೀಕರಣ ಪತ್ರ ಪಡೆದು ಆಯಾ ತಾಲೂಕು ತಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಸಲ್ಲಿಸಬೇಕಾಗುತ್ತದೆ.

Gruha Lakshmi Scheme New Rule
Image Credit: Vistaranews

ಈ ಕಚೇರಿಯವರು ತಮ್ಮ ತಾಲೂಕಿಗೆ ಸಂಬಂಧಪಟ್ಟ ಅರ್ಹರ ದಾಖಲೆಗಳನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕು. ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲೆ ವ್ಯಾಪ್ತಿಯ ಪ್ರಕರಣಗಳ ಮಾಹಿತಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸಬೇಕು. ಇಲ್ಲಿಂದ ಇ-ಆಡಳಿತ ಇಲಾಖೆಯ ಕುಟುಂಬ ತಂತ್ರಾಂಶದ ವಿಭಾಗಕ್ಕೆ ರವಾನೆಯಾಗಲಿದ್ದು ಅರ್ಜಿಗಳ ಪುನರ್ ಪರಿಶೀಲನೆ ನಡೆಯಲಿದೆ. ಬಳಿಕ ಅರ್ಹರಿಗೆ ಯೋಜನೆಯ ಹಣ ಜಮೆಯಾಗಲಿದೆ.

Join Nadunudi News WhatsApp Group

Join Nadunudi News WhatsApp Group