Gruha Lakshmi: ಗೃಹಲಕ್ಷ್ಮಿ ಹಣ ಇನ್ನೂ ಸಿಗದ ಮಹಿಳೆಯರಿಗೆ ಬಿಗ್ ಅಪ್ಡೇಟ್, ಈ ಕೆಲಸ ಮಾಡಿದರೆ ಖಾತೆಗೆ 8000 ರೂ ಜಮಾ

ಗೃಹ ಲಕ್ಷ್ಮಿ ಹಣ ಸಿಗದ ಮಹಿಳೆಯರು ತಕ್ಷಣ ಈ ಕೆಲಸ ಮಾಡಿ, 4 ಕಂತಿನ ಹಣ ಒಟ್ಟಿಗೆ ಸಿಗಲಿದೆ

Gruha Lakshmi 4th Installmenst: ರಾಜ್ಯದಲ್ಲಿ ‘ಗೃಹಲಕ್ಷ್ಮಿ’ (Gruha Lakshmi)ಯೋಜನೆಯಡಿ ಕೋಟ್ಯಾಂತರ ಮಹಿಳೆಯರು ಪ್ರತಿ ತಿಂಗಳು 2000 ರೂಪಾಯಿ ಹಣ ಪಡೆಯುತ್ತಿದ್ದು, ಇನ್ನು ಹಲವು ಅರ್ಹ ಮಹಿಳೆಯರು ಈ ಯೋಜನೆಯಿಂದ ಹೊರಉಳಿದಿದ್ದಾರೆ. ಈ ಕುರಿತು ಸರ್ಕಾರ ಪ್ರತಿಯೊಬ್ಬ ಮಹಿಳೆಗೂ ಈ ಯೋಜನೆ ತಲುಪವಂತ ಕಾರ್ಯ ಕೈಗೊಂಡಿದೆ.

ಇದುವರೆಗೂ ಮೂರು ಕಂತಿನ ಹಣ ಬಾರದೇ ಇದ್ದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಗೃಹಲಕ್ಷ್ಮಿ ತಂತ್ರಿಕಾ ದೋಷಗಳನ್ನು ಸರಿ ಮಾಡುವ ಪ್ರಯತ್ನದಲ್ಲಿರುವ ಸರಕಾರ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಇ-ಕೆವೈಸಿ ಅಪ್ಡೇಟ್ ಮಾಡಿಸಲು ಸೂಚನೆ ನೀಡಲಾಗಿದೆ.

Gruha Lakshmi Scheme E-kyc
Image Credit: Publictv

ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ಬಾರದೇ ಇರುವವರು ಮುಖ್ಯವಾಗಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಇದನ್ನು ಮಾಡದಿದ್ದರೆ ಗೃಹಲಕ್ಷ್ಮಿ ಹಣ ಖಾತೆಗೆ ಬರುವುದಿಲ್ಲ. ಹೀಗಾಗಿ ಕೂಡಲೇ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ ಎಂದು ಸರಕಾರ ಆದೇಶಿಸಿದೆ .

ಬ್ಯಾಂಕ್ ಖಾತೆಯಲ್ಲಿರುವ ದೋಷವನ್ನು ಸರಿಪಡಿಸಿಕೊಳ್ಳಿ

Join Nadunudi News WhatsApp Group

ಮಹಿಳೆಯರ ಬ್ಯಾಂಕ್ ಖಾತೆಯಲ್ಲಿರುವ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಜಮೆ ಆಗಿಲ್ಲ. ಅದನ್ನು ಸರಿಪಡಿಸಿಕೊಂಡರೆ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುವುದು ಹಾಗಾಗಿ ಬ್ಯಾಂಕ್ ಗೆ ಹೋಗಿ ಖಾತೆ ಆಕ್ಟಿವ್ ಇದೆಯೋ, ಇಲ್ಲವಾ ಎಂದು ಪರಿಶೀಲಿಸಿ.

Gruha Lakshmi New Update
Image Credit: Original Source

ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಡಿಪಿಓ ಅಧಿಕಾರಿಗಳನ್ನು ಭೇಟಿ ಮಾಡಿ

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಬರದಿದ್ದರೆ ಹತ್ತಿರದ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಡಿಪಿಓ ಅಧಿಕಾರಿಗಳನ್ನು ಭೇಟಿಯಾಗಿ ನಿಮ್ಮ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ಸ್ವೀಕೃತಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿಯನ್ನು ನೀಡಿ ಅವರ ಬಳಿ ಸಲಹೆಯನ್ನ ಪಡೆದುಕೊಳ್ಳಿ, ಏಕೆ ಹಣ ಬರಲಿಲ್ಲ, ಏನು ಸಮಸ್ಯೆಯಾಗಿದೆ. ಏನು ಮಾಡಬೇಕು ಎಂಬ ಸಲಹೆ ಪಡೆಯಿರಿ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ನಿಮ್ಮ ಖಾತೆಗೆ ಬರಲಿದೆ ಗೃಹಲಕ್ಷ್ಮಿ ಹಣ.

Join Nadunudi News WhatsApp Group