Gruha Lakshmi: ಗೃಹಲಕ್ಷ್ಮಿ 4 ನೇ ಕಂತಿನ ಹಣ ಬಿಡುಗಡೆ, ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ ಆಗಲಿದೆ 2000 ರೂ.

ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಗೃಹಲಕ್ಷ್ಮಿ 4 ನೇ ಕಂತಿನ ಹಣ.

Gruha Lakshmi 4th Installment Money Credit: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ (Gruha Lakshmi scheme) ಸಂಬಂಧಿಸಿದಂತೆ ಇನ್ನು ಕೂಡ ಸಮಸ್ಯೆ ಪರಿಹಾರವಾಗಿಲ್ಲ. ಯೋಜನೆ ಅನುಷ್ಠಾನಗೊಂಡು ಐದಾರು ತಿಂಗಳು ಕಳೆದರು ಕೂಡ ಯೋಜನೆಯ ಸಂಪೂರ್ಣ ಲಾಭ ಅರ್ಹರಿಗೆ ತಲುಪುತ್ತಿಲ್ಲ.

ಸರ್ಕಾರ ಎಲ್ಲ ಅರ್ಹರಿಗೂ ಯೋಜನೆಯ ಲಾಭವನ್ನು ನೀಡುವ ಉದ್ದೇಶದಿಂದ ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿದೆ. ಇದಕ್ಕಾಗಿಯೇ ಗೃಹ ಲಕ್ಷ್ಮಿ ಅದಾಲತ್, ಗೃಹ ಲಕ್ಷ್ಮಿ ಕ್ಯಾಮ್ಪ್ ಹೀಗೆ ಅನೇಕ ರೀತಿಯ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಸರ್ಕಾರ ಎಷ್ಟೇ ಪ್ರಯತ್ನಪಟ್ಟರು ಕೂಡ ಅರ್ಹರಿಗೆ ಹಣ ತಲುಪಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣ ಬಿಡುಗಡೆಯಾಗಿದ್ದು, ಈ ಎಲ್ಲ ಜಿಲ್ಲೆಯ ಮಹಿಳೆಯರಿಗೆ ಮಾಸಿಕ ಹಣ ಜಮಾ ಆಗಿದೆ.

Gruha Lakshmi 4th Installment
Image Credit: Hosakannada

ಗೃಹಲಕ್ಷ್ಮಿ 4 ನೇ ಕಂತಿನ ಹಣ ಬಿಡುಗಡೆ
ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಹಣ ಮಾಸಿಕವಾಗಿ ಅರ್ಹರ ಖಾತೆಗೆ ತಲುಪುತ್ತಿದೆ. ತಾಂತ್ರಿಕ ದೋಷದ ಕಾರಣ ಕೆಲವರ ಖಾತೆಗೆ ಹಣ ತಲುಪುತ್ತಿಲ್ಲ. ಇದಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಸದ್ಯದಲ್ಲೇ ಎಲ್ಲ ಕಂತುಗಳ ಹಣ ಅರ್ಹರ ಖಾತೆಗೆ ತಲುಪಲಿದೆ. ರಾಜ್ಯ ಸರ್ಕಾರದಿಂದ ಈವರೆಗೆ ಮೂರು ಕಂತುಗಳ ಹಣ ಬಿಡುಗಡೆಯಾಗಿದ್ದು, ಸದ್ಯ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿದೆ.

ಜನವರಿ ತಿಂಗಳ ಮೊದಲ ವಾರದಲ್ಲಿ Gruha Lakshmi ಯೋಜನೆಯ ನಾಲ್ಕನೇ ಕಂತಿನ ಹಣ ಖಾತೆಗೆ ಜಮಾ ಆಗಲಿದೆ. ಕೆಲವೊಮ್ಮೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದರೂ ಕೂಡ ಮೊಬೈಲ್ ಗೆ ಸಂದೇಶ ಬರದೇ ಇರಬಹುದು. ಹೀಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಪರಿಶೀಲನೆ ಮಾಡಿಕೊಳ್ಳಬಹುದು.

Gruha Lakshmi Money Credit
Image Credit: Deccanherald

ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ ಆಗಲಿದೆ 2000 ರೂ
ಇದೀಗ ರಾಜ್ಯ ಸರ್ಕಾರದಿಂದ Gruha Lakshmi 4th Installment Money ಬಿಡುಗಡೆಯಾಗಿರುವ ಬಗ್ಗೆ ವರದಿಯಾಗಿದೆ. ಜನವರಿ ಮೊದಲ ವಾರದಲ್ಲಿ ಮಹಿಳೆಯರ ಖಾತೆಗೆ 4 ನೇ ಕಂತಿನ 2000 ರೂ. ಹಣ ಜಮಾ ಆಗುವ ಬಗ್ಗೆ ಸರ್ಕಾರದಿಂದ ಅಧಿಕೃತ ಘೋಷಣೆಯಾಗಿದೆ.

Join Nadunudi News WhatsApp Group

ಸದ್ಯ ಈ 15 ರಾಜ್ಯದಲ್ಲಿ ಮಾತ್ರ ಗೃಹ ಲಕ್ಷ್ಮಿ 4 ನೇ ಕಂತಿನ ಹಣ ಜಮಾ ಆಗಿದೆ. ಕೋಲಾರ, ದಾವಣಗೆರೆ, ಮಂಡ್ಯ, ಚಿತ್ರದುರ್ಗ, ಬಾಗಲಕೋಟೆ, ಗದಗ, ಬೆಂಗಳೂರು, ಬೆಳಗಾವಿ, ಧಾರವಾಡ, ಕಲ್ಬುರ್ಗಿ, ಹಾಸನ, ರಾಯಚೂರು, ಮೈಸೂರು, ಬಿಜಾಪುರ ಜಿಲ್ಲೆಯ ಗೃಹ ಲಕ್ಷ್ಮಿ ಅರಹರ ಖಾತೆಗೆ ಹಣ ಜಮಾ ಆಗಿದೆ. ಜನವರಿ 3 ರಿಂದಲೇ ನಾಲ್ಕನೇ ಕಂತಿನ ಹಣ ಈ ಜಿಲ್ಲೆಯ ಅರಹರಿಗೆ ತಲುಪಿದೆ. ಜನವರಿ ಅಂತ್ಯದೊಳಗೆ ಸಂಪೂರ್ಣ 100 % ಅರ್ಹರಿಗೆ ಗೃಹ ಲಕ್ಷ್ಮಿ ಹಣ ತಲುಪುತ್ತದೆ ಎಂದು ಸರ್ಕಾರ ಹೇಳಿಕೆ ನೀಡಿದೆ.

Join Nadunudi News WhatsApp Group