Gruha lakshmi: ಈ ದಿನದಂದು ಗೃಹಲಕ್ಷ್ಮಿ 7 ನೇ ಕಂತಿನ ಹಣ ಖಾತೆಗೆ ಜಮಾ, ಮಹಿಳೆಯರೇ ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ

ಈ ದಿನದಂದು ಗೃಹಲಕ್ಷ್ಮಿ 7 ನೇ ಕಂತಿನ ಹಣ ಖಾತೆಗೆ ಜಮಾ

Gruha lakshmi 6th and 7th Installment Money Update: ರಾಜ್ಯ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ Gruha lakshmi ಯೋಜನೆಯ ಅನುಷ್ಠಾನಗೊಂಡು ಹಲವು ತಿಂಗಳುಗಳೇ ಕಳೆದು ಕೂಡ ಈ ಯೋಜನೆಯ ಕುರಿತಾದ ಸಮಸ್ಯೆ ಇನ್ನು ಬಗೆಹರಿದಿಲ್ಲ. ರಾಜ್ಯ ಸರ್ಕಾರಕ್ಕೆ ಗೃಹ ಲಕ್ಷ್ಮಿ ಯೋಜನೆಯು ಒಂದು ರೀತಿಯ ಸಮಸ್ಯೆ ಆಗಿಯೇ ಉಳಿದಿದೆ ಎನ್ನಬಹುದು. ಯೋಜನೆಗೆ ಸಂಬಂಧಪಟ್ಟ ದೋಷಗಳನ್ನು ಸರಿಪಡಿಸಲು ಸರ್ಕಾರ ಎಷ್ಟೇ ಕ್ರಮ ವಹಿಸಿದ್ದರು ಕೂಡ ಯೋಜನೆಯ ಲಾಭ ಎಲ್ಲ ಅರ್ಹರಿಗೂ ತಲುಪುತ್ತಿಲ್ಲ.

Gruha lakshmi 6th and 7th Installment Money
Image Credit: Original Source

6 ಮತ್ತು 7 ನೇ ಕಂತಿನ ಹಣ ಬಿಡುಗಡೆ ಡೇಟ್ ಫಿಕ್ಸ್
ಈಗಾಗಲೇ ಸರ್ಕಾರ ಯೋಜನೆಯ ಸಮಸ್ಯೆಯೇ ಪರಿಹಾರಕ್ಕೆ ಈಗಾಗಲೇ ವಿವಿಧ ರೀತಿಯ ಕ್ರಮ ಕೈಗೊಂಡಿದೆ. ಆದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನಬಹುದು. ಇನ್ನು ಯೋಜನೆಯ ಲಾಭ ಯಾರ ಖಾತೆಗೆ ಜಮಾ ಆಗುತ್ತಿದೆಯೋ ಅಂತವರಿಗೆ ಸರ್ಕಾರ ಮಾಸಿಕ ಹಣ ಬಿಡುಗಡೆ ಮಾಡುತ್ತಲೇ ಇದೆ.

ರಾಜ್ಯದಲ್ಲಿ 80 % ಮಹಿಳೆಯರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು. ಸದ್ಯ ರಾಜ್ಯ ಸರ್ಕಾರ ಆರು ಮತ್ತು 7 ನೇ ಕಂತಿನ ಹಣ ಬಿಡುಗಡೆಗೆ ದಿನಾಂಕವನ್ನು ನಿಗದಿ ಮಾಡಿದೆ. ಈ ದಿನಾಂಕದಂದು ಅರ್ಹ ಫಲಾನುಭವಿಗಳು ತಮ್ಮ ಖಾತೆಗೆ 6 ಮತ್ತು 7 ನೇ ಕಂತಿನ ಹಣ ಜಮಾ ಆಗಿದೆಯಾ ಅಥವಾ ಇಲ್ಲವ ಎನ್ನುವುದು ಪರಿಶೀಲಿಸಿಕೊಳ್ಳಬಹುದು.

Gruha lakshmi 6th and 7th Installment Status Check
Image Credit: Original Source

ಈ ದಿನದಂದು ಗೃಹಲಕ್ಷ್ಮಿ 7 ನೇ ಕಂತಿನ ಹಣ ಖಾತೆಗೆ ಜಮಾ
ಫೆಬ್ರವರಿ ತಿಂಗಳಿನಲ್ಲಿ ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಬಿಡುಗಡೆಯಾಗಿದೆ. ಆದರೆ ಹಲವಾರು ಜನರಿಗೆ ಯೋಜನೆಯ ಹಣ ಜಮಾ ಆಗಿಲ್ಲ ಎನ್ನಬಹುದು. ಹೀಗಾಗಿ ಸರ್ಕಾರ 6 ಮತ್ತು 7 ನೇ ಕಂತಿನ ಹಣ ಜಮಾ ಮಾಡಲು ದಿನಾಂಕ ನಿಗದಿ ಮಾಡಿದೆ. ಎರಡು ಕಂತುಗಳ ಹಣವನ್ನು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಮಾರ್ಚ್ 4 ಸೋಮವಾರ ಬೆಳಿಗ್ಗೆ 10:30 ಕ್ಕೆ 6 ಮತ್ತು 7 ನೇ ಕಂತಿನ ಹಣ ಜಮಾ ಆಗಲಿದೆ. ಅರ್ಹ ಫಲಾನುಭವಿಗಳು ಈ ದಿನದಂದು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group