Gruha Lakshmi 6th Installment: ಈ ಪಟ್ಟಿಯಲ್ಲಿ ಇರುವವರಿಗೆ ಮಾತ್ರ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಜಮಾ, ಈಗಲೇ ಪಟ್ಟಿ ಚೆಕ್ ಮಾಡಿ

ಫೆ. ತಿಂಗಳ ಹಣ ಖಾತೆಗೆ ಜಮಾ ಆಗಿದೆಯೇ..? ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ

Gruha Lakshmi 6th Installment Credit Update: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಯೋಜನೆಯು ಸದ್ಯ ಅರ್ಹರಿಗೆ ತಲುಪುತ್ತಿದೆ. ಇದೀಗ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 6 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಅರ್ಹ ಫಲಾನುಭವಿಗಳಿಗೆ ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ 2000 ರೂ ಹಣ DBT ಮೂಲಕ ಜಮಾ ಆಗಿದೆ. ಇನ್ನು ರಾಜ್ಯ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ.

Gruha Lakshmi 6th Installment Credit Update
Image Credit: Easemywatch

ಈ ಪಟ್ಟಿಯಲ್ಲಿರುವವರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ
ಸದ್ಯ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2000 ರೂ ಹಣವನ್ನು ಅರ್ಹರ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಜಮಾ ಮಾಡಿದೆ. ಆಹಾರ ಇಲಾಖೆಯ ಅಧಿಕೃತ ವೆಬ್‌ ಸೈಟ್‌ ನಲ್ಲಿ ಪ್ರಕಟಿಸಿರುವ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿರುವ ಅರ್ಜಿದಾರರ ಕುಟುಂಬದ ಯಜಮಾನಿಯರ ಖಾತೆಗೆ ಫೆಬ್ರವರಿ ತಿಂಗಳ ಮಾಸಿಕ 2000 ರೂ ಹಣವನ್ನು ವರ್ಗಾಯಿಸಲಾಗಿದೆ.

ಇ-ಆಡಳಿತ ವಿಭಾಗದ DBT Karnataka Mobile Application ಮೂಲಕ ಫೆಬ್ರವರಿ-2024 ತಿಂಗಳ ಹಣವು ನಿಮ್ಮ ಖಾತೆಗೆ ತಲುಪಿದೆಯೇ ಎಂದು ನೀವು ಪರಿಶೀಲಿಸಬಹುದು. ರಾಜ್ಯದ ಮಹಿಳೆಯರು 6 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಯೋಜನೆಯ ಹಣ ಜಮಾ ಆಗಿದೆಯಾ ಎಂದು ಖಾತೆಯನ್ನು ಪರಿಶೀಲಿಸಿಕೊಳ್ಳುತ್ತಿದ್ದರೆ. ಸದ್ಯ ರಾಜ್ಯ ಸರ್ಕಾರ ಕೆಲವರಿಗೆ 6 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು, ಫಲಾನುಭವಿಗಳು ಖಾತೆಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

Gruha Lakshmi 6th Installment 2024
Image Credit: News Guru Kannada

ಫೆ. ತಿಂಗಳ ಹಣ ಖಾತೆಗೆ ಜಮಾ ಆಗಿದೆಯೇ..? ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ
•ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಲು ಮೊದಲು DBT Karnataka App ಅನ್ನು Download ಮಾಡಿಕೊಳ್ಳಬೇಕು.

•ಅಪ್ಲಿಕೇಶನ್ Download ಮಾಡಿದ ನಂತರ, ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ, ಫಲಾನುಭವಿಯ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಈ ಅಪ್ಲಿಕೇಶನ್‌ ಗೆ ಹಾಕಿ Login ಮಾಡಲು 4-ಅಂಕಿಯ Password ರಚಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ.

Join Nadunudi News WhatsApp Group

•ಲಾಗಿನ್ ಆದ ನಂತರ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು “ಗೃಹ ಲಕ್ಷ್ಮಿ” ಹೆಸರಿನ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಫೆಬ್ರವರಿ-2024 ರ ಗೃಹಲಕ್ಷ್ಮಿ ಹಣವು ಯಾವ ದಿನದಂದು ನಿಮಗೆ ಜಮಾ ಆಗಿದೆ ಹಾಗೆಯೆ UTR ಸಂಖ್ಯೆ ಇತರ ಸಂಪೂರ್ಣ ವಿವರಗಳನ್ನು ತೋರಿಸುತ್ತದೆ.

Join Nadunudi News WhatsApp Group