Gruha Lakshmi: ಇಂತಹ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಹಣ ರದ್ದು, ಸರ್ಕಾರದ ಇನ್ನೊಂದು ಆದೇಶ.

ಈ ಮಹಿಳೆಯರ ಗೃಹಲಕ್ಷ್ಮಿ ಹಣ ರದ್ದು ಮಾಡಲು ನಿರ್ಧಾರ ಮಾಡಿದ ಸರ್ಕಾರ

Gruha Lakshmi Amount Cancelled: ರಾಜ್ಯ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ Gruha Lakshmi ಯೋಜನೆ ಅನುಷ್ಠಾನಗೊಂಡು ಆರೇಳು ತಿಂಗಳು ಕಳೆದರು ಕೂಡ ಯೋಜನೆಯು ಸಂಪೂರ್ಣ ಅರ್ಹರಿಗೆ ತಲುಪುತ್ತಿಲ್ಲ. ಸರ್ಕಾರಕೆ ಗೃಹ ಲಕ್ಷ್ಮಿ ಯೋಜನೆಯು ಬಗೆಹರಿಯದ ಸಮಸ್ಯೆಯಾಗಿ ಉಳಿದಿದೆ. ಗೃಹ ಲಕ್ಷ್ಮಿ ಯೋಜನೆಯ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಕ್ರಮ ಕೈಗೊಂಡಿದ್ದರು ಕೂಡ ಅದು ಯಶಸ್ವಿಯಾಗಿರಲಿಲ್ಲ. ಇನ್ನು ಈಗಾಗಲೇ ಗೃಹ ಲಕ್ಷ್ಮಿ ಫಲಾನುಭವಿಗಳು 5 ನೇ ಕಂತಿನ ಹಣ ಪಡೆದಿದ್ದಾರೆ.

Gruha Lakshmi Amount Cancelled
Image Credit: Original News

ಇಂತಹ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಹಣ ರದ್ದು
ಈ ತಿಂಗಳಿನಲ್ಲಿ 6 ನೇ ಕಂತಿನ ಹಣ ಬಿಡುಗಡೆ ಮಾಡಲಿಗಿದ್ದು, 5 ಕಂತುಗಳ ಹಣ ಪಡೆದ 26,000 ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಆಗದೆ ಇರುವ ಬಗ್ಗೆ ವರದಿಯಾಗಿದೆ. ಈ ಹಿಂದಿನ ಕಂತುಗಳಲ್ಲಿ ಹಣ ಪಡೆದ ಮಹಿಳೆಯರಿಗೆ ಹಣ ಜಮಾ ಆಗದೆ ಇರಲು ಕಾರಣವೇನು..? ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಅರ್ಹ 26 ಸಾವಿರ ಮಹಿಳೆಯರ ಹಣ ರದ್ದಾಗಿರಲು ಕಾರಣವಿದೆ.

ಅರ್ಹ 26 ಸಾವಿರ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿಲ್ಲ ಏಕೆ..?
ಇನ್ನು ಗೃಹ ಲಕ್ಷ್ಮಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ಸರ್ಕಾರ ಮೊದಲೇ ನಿಯಮವನ್ನು ಜಾರಿಗೊಳಿಸಿತ್ತು. ತೆರಿಗೆ ಪಾವತಿದಾರರು ಹಾಗೂ ಸರ್ಕಾರೀ ನೌಕರರು ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ ಹಣ ಪಡೆಯಲು ಅರ್ಹರಾಳ ಎನ್ನುವ ಷರತ್ತು ವಿಧಿಸಲಾಗಿತ್ತು. ಆದಾಗ್ಯೂ, 80 ಸಾವಿರ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆದಿದ್ದರು.

Gruha Lakshmi Scheme Amount
Image Credit: tv9kannada

ಅನರ್ಹರನ್ನು ಗೃಹ ಲಕ್ಷ್ಮಿ ಯೋಜನೆಯಿಂದ ತೆಗೆದುಹಾಕುವ ಸಮಯದಲ್ಲಿ ತಾಂತ್ರಿಕ ದೋಷ ಉಂಟಾಗಿ ಅರ್ಹ 26 ಸಾವಿರ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವ ಬಗ್ಗೆ ವರದಿಯಾಗಿದೆ. ಆದಷ್ಟು ಬೇಗ ಅಂತಹ 20 ಸಾವಿರ ಮಹಿಳೆಯರ ಖಾತೆಗೆ 6 ಮತ್ತು 7 ನೇ ಕಂತಿನ ಹಣವನ್ನು ಒಮ್ಮೆಲೇ ಜಮಾ ಮಾಡಲಾಗುವುದು ಎಂದು ಸರ್ಕಾರ ಹೇಳಿಕೆ ನೀಡಿದೆ. ಇನ್ನು ಅನರ್ಹರು ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯುತಿದರೆ ಅಂತವರಿಗೆ ದಂಡ ವಿಧಿಸಲು ಕೂಡ ಸರ್ಕಾರ ನಿರ್ಧರಿಸಿದೆ.

Join Nadunudi News WhatsApp Group

Join Nadunudi News WhatsApp Group