Gruha Lakshmi: ಗೃಹಲಕ್ಷ್ಮಿ 11 ನೇ ಕಂತಿನ ಹಣ ಜಮಾ ಆಗಿಲ್ಲವಾ…? ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ.

ಗೃಹ ಲಕ್ಷ್ಮಿ ಹಣ ಬಂದಿಲ್ಲಾ ಅಂದರೆ ಈ ರೀತಿಯಲ್ಲಿ ಚೆಕ್ ಮಾಡಿಕೊಳ್ಳಿ

Gruha Lakshmi New Update: ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈವರೆಗೆ 22.000 ರೂ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ. ಸದ್ಯ ರಾಜ್ಯ ಸರ್ಕಾರ 12 ಕಂತಿನ ಹಣದ ಬಿಡುಗಡೆಗಾಗಿ ಸಿದ್ಧತೆ ಮಾಡಿಕೊಂಡಿದೆ.

ಜುಲೈನಲ್ಲಿ 12 ಕಂತಿನ ಹಣದ ಬರುವಿಕೆಯಲ್ಲಿ ಗೃಹ ಲಕ್ಷ್ಮಿ ಫಲಾನುಭವಿಗಳು ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ 11ನೇ ಕಂತಿನ ಹಣ ಬಿಡುಗಡೆ ಮಾಡಿದ್ದರೂ ಕೂಡ ಫಲಾನುಭವಿಗಳು ಹಣ ಜಮಾ ಆಗಿಲ್ಲ ಎನ್ನುವ ಬಗ್ಗೆ ದೂರುತ್ತಿದ್ದಾರೆ. ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವ ಎಂದು ತಕ್ಷಣ ಚೆಕ್ ಮಾಡಿಕೊಳ್ಳುವುದು ಉತ್ತಮ.

gruha lakshmi amount check
Image Credit: Original Source

ಗೃಹಲಕ್ಷ್ಮಿ 11 ನೇ ಕಂತಿನ ಹಣ ಜಮಾ ಆಗಿಲ್ಲವಾ…?
ಗೃಹ ಲಕ್ಷ್ಮಿ ಫಲಾನುಭವಿಗಳು ಇದೀಗ 11 ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 11 ನೇ ಕಂತಿನ ಹಣದ ಬಿಡುಗಡೆಗೆ ಮಾಡಿದೆ. ಗೃಹ ಲಕ್ಷ್ಮೀ ಪಲಾನುಭವಿಗಳಿಗೆ 11 ನೇ ಕಂತಿನ ಹಣ ಜೂನ್ ಕೊನೆಯ ವಾರದಲ್ಲಿ ಜಮಾ ಆಗಿದೆ. ಜೂನ್ 26 ರಿಂದ ಹಣ ಮಹಿಳೆಯರ ಖಾತೆಗೆ ಸರ್ಕಾರ ಜಮಾ ಮಾಡಿದೆ. ಜೂನ್ ಕೊನೆಯ ವಾರದಲ್ಲಿ ಫಲಾನುಭವಿಗಳು 11 ನೇ ಕಂತಿನ ಹಣ ಪಡೆದಿದ್ದಾರೆ.

ನೀವು ಯೋಜನೆಯ ಹಣ ಜಮಾ ಆಗಿದೆಯಾ..? ಅಥವಾ ಇಲ್ಲವ..? ಎನ್ನುವ ಬಗ್ಗೆ ತಿಳಿಯಲು ಹೆಚ್ಚು ಯೋಚಿಸುವ ಅಗತ್ಯ ಇಲ್ಲ. ಕಾರಣ ಸರ್ಕಾರ ಹಣ ಜಮಾ ಆಗಿರುವ ಬಗೆ ತಿಳಿಯಲು ಆನ್ಲೈನ್ ನಲ್ಲಿ ಅವಕಾಶವನ್ನು ನೀಡಿದೆ. ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

gruha lakshmi status check process
Image Credit: Original Source

ಗೃಹ ಲಕ್ಷ್ಮಿ ಹಣ ಜಮಾ ಆಗಿರುವ ಬಗ್ಗೆ ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ
•Google Play Store ನಿಂದ ಅಧಿಕೃತ DBT Karnataka Mobile App ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

Join Nadunudi News WhatsApp Group

•ನಂತರ ಅರ್ಜಿದಾರರು ತಮ್ಮ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.

•ನಿಮ್ಮ ಆಧಾರ್‌ ನಲ್ಲಿರುವಂತೆ ಹೆಸರನ್ನು ನಮೂದಿಸಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ 6 ಅಂಕಿಯ OTP ಅನ್ನು ನಮೂದಿಸಬೇಕು.

•OTP ಅನ್ನು ನಮೂದಿಸಿದ ನಂತರ, ನಾಲ್ಕು (4) ಅಂಕಿಯ ಪಾಸ್‌ ವರ್ಡ್ ಅನ್ನು ರಚಿಸಿ.

•ನಂತರ ಇಲ್ಲಿ ಅರ್ಜಿದಾರರು ಅಂದರೆ ನಿಮ್ಮ ವೈಯಕ್ತಿಕ ವಿವರಗಳು ತೋರುತ್ತದೆ. ಕೊನೆಯ ಕಲಾಂ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಮತ್ತು “ಸರಿ” ಬಟನ್ ಅನ್ನು ಕ್ಲಿಕ್ ಮಾಡಿ.

•ನಂತರ “ಲಾಗಿನ್” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಈಗಾಗಲೇ ರಚಿಸಲಾದ ಪಾಸ್ವರ್ಡ್ ಅನ್ನು ಹಾಕಿ.

•ನಂತರ “ಪಾವತಿ ಸ್ಥಿತಿ” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಗೃಹ ಲಕ್ಷ್ಮಿ ಎಂಬ ಬಟನ್ ಅನ್ನು ಕ್ಲಿಕ್ ಮಾಡಿದರೆ, ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಯಾವ ದಿನಾಂಕವನ್ನು ಹಣ ಠೇವಣಿ ಮಾಡಲಾಗಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿಯುತ್ತದೆ.

gruha lakshmi money check
Image Credit: Original Source

Join Nadunudi News WhatsApp Group