Gruha Lakshmi Latest: ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್, ಇಂತಹ ಮಹಿಳೆಯರ ಖಾತೆಗೆ ಡೈರೆಕ್ಟ್ 8000 ರೂ ಜಮಾ.

ಡಿಸೆಂಬರ್ ಅಂತ್ಯದೊಳಗೆ ಇಂತಹ ಮಹಿಳೆಯರ ಖಾತೆಗೆ ಡೈರೆಕ್ಟ್ 8000 ರೂ ಜಮಾ

Gruha Lakshmi New Update: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ (Gruha Lakshmi Yojana) ಅನುಷ್ಠಾನ ಆಗಿದ್ದರೂ ಕೂಡ ಯೋಜನೆಯ ಲಾಭ ಸಂಪೂರ್ಣ ಅರ್ಹರಿಗೆ ತಲುಪುತ್ತಿಲ್ಲ. ಯೋಜನೆಯ ಹಣ ಅರ್ಹರಿಗೆ ತಲುಪದ ಕಾರಣ ಗೃಹ ಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರಕ್ಕೆ ಬಗೆಹರಿಯದ ಸಮಸ್ಯೆಯಾಗಿದೆ. ಅರ್ಹರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ನಾಲ್ಕು ತಿಂಗಳಾದರೂ ಇನ್ನು ಅರ್ಹರಿಗೆ ತಲುಪುತ್ತಿಲ್ಲ. ಇದಕ್ಕೆ ತಾಂತ್ರಿಕ ಸಮಸ್ಯೆಯಾಗಿದೆ.

Gruha Lakshmi New Update
Image Credit: Original Source

ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್
ಗೃಹ ಲಕ್ಷ್ಮಿ ಮೊದಲ ಕಂತಿನ ಹಣ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದು, ಸದ್ಯ ಮೂರು ಕಂತುಗಳ ಹಣ ಶೇ. 80 ರಷ್ಟು ಅರ್ಹ ಮಹಿಳೆಯರ ಖಾತೆಗೆ DBT ಮೂಲಕ ತಲುಪುತ್ತಿದೆ. ಸದ್ಯ ರಾಜ್ಯ ಸರ್ಕರ ನಾಲಕ್ನೆ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಿದೆ. ಡಿಸೇಂಬರ್ ತಿಂಗಳ ಕೊನೆಯ ವಾರದಲ್ಲಿ ಎಲ್ಲ ಮಹಿಳೆಯರ ಖಾತೆಗೆ ಮಾಸಿಕ 2000 ರೂಪಾಯಿ ಹಣ ಜಮಾ ಆಗುವುದಾಗಿ ಸರ್ಕಾರ ಮಾಹಿತಿ ನೀಡಿದೆ.

ಆದರೆ ಇನ್ನುಕೂಡ ಒಂದು ಕಂತಿನ ಹಣ ಪಡೆಯದೇ ಇರುವ ಮಹಿಳೆಯರು ಸರ್ಕಾರಕ್ಕೆ ಪ್ರಶ್ನೆ ಹಾಕುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಇನ್ನು ಗೃಹ ಲಕ್ಷ್ಮಿ ಹಣ ಜಮಾ ಆಗದಿರುವ ಮಹಿಳೆಯರಿಗೆ ಬಿಗ್ ಅಪ್ಡೇಟ್ ನೀಡಿದೆ. ಇನ್ನುಮುಂದೆ ಗೃಹ ಲಕ್ಷ್ಮಿ ಹಣ ಜಮಾ ಆಗುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮಹಿಳೆಯರ ಖಾತೆಗೆ ಹಣ ಜಮಾ ಮಾಡುವ ಬಗ್ಗೆ ಸರ್ಕಾರ ಇನ್ನೊಂದು ಅಪ್ಡೇಟ್ ನೀಡಿದೆ.

Gruha Lakshmi Amount Credit Updates
Image Credit: kannada News Today

ಇಂತಹ ಮಹಿಳೆಯರ ಖಾತೆಗೆ ಡೈರೆಕ್ಟ್ 8000 ರೂ ಜಮಾ
ಈಗಾಗಲೇ ಗೃಹ ಲಕ್ಷ್ಮಿ ನಾಲ್ಕು ಕಂತುಗಳ ಹಣ ಬಿಡುಗಡೆಯಾಗಿದ್ದು, ಅರ್ಹರ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯಡಿ 8000 ರೂಪಾಯಿ ಹಣ ಪಡೆದಿದ್ದಾರೆ. ಆದರೆ ಇನ್ನೂ ಖಾತೆಯಲ್ಲಿ ಸಮಸ್ಯೆ ಇರುವವರು ಒಂದು ಕಂತಿನ ಹಣವನ್ನು ಕೂಡ ಪಡೆಯಲು ಸಾಧ್ಯವಾಗಿಲ್ಲ ಎನ್ನುವ ಚಿಂತೆಯಲ್ಲಿದ್ದಾರೆ. ಈ ತಿಂಗಳಿನಲ್ಲಿ ಹಣ ಜಮಾ ಆದರೂ 4000 ರೂಪಾಯಿ ಹಣ ಕಳೆದುಕೊಂಡಿರುವ ದುಃಖದಲ್ಲಿದ್ದಾರೆ.

ಆದರೆ ಈವರೆಗೆ ಖಾತೆಗೆ ಜಮಾ ಆಗದ ಮಹಿಳೆಯರು ಹಣ ಕಳೆದುಕೊಳ್ಳುವ ಚಿಂತೆ ಮಾಡುವುದು ಅಗತ್ಯವಿಲ್ಲ. ಏಕೆಂದರೆ ಗೃಹ ಲಕ್ಷ್ಮಿ ಎಲ್ಲ ಕಂತುಗಳ ಹಣವನ್ನು ಒಟ್ಟಗಿ ಅಂದರೆ ಇನ್ನು ಯಾರ ಖಾತೆಗೆ ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲವೋ ಅಂತವರ ಖಾತೆಗೆ ಒಟ್ಟಾಗಿ 8000 ರೂಪಾಯಿ ಜಮಾ ಆಗುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಅಥವಾ ಜನವರಿ ಮೊದಲ ವಾರದಲ್ಲಿ ಗೃಹ ಲಕ್ಷ್ಮಿ ಅಷ್ಟು ಕಂತುಗಳ ಹಣ ಜಮಾ ಆಗಲಿದೆ.

Join Nadunudi News WhatsApp Group

Join Nadunudi News WhatsApp Group