Gruha Lakshmi Fraud: ಗೃಹ ಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರಿಗೆ ಸರ್ಕಾರದ ಎಚ್ಚರಿಕೆ, ಈ ತಪು ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ.

ಗೃಹ ಲಕ್ಷ್ಮಿ ಹಣ ಚೆಕ್ ಮಾಡಲು ಹೋಗಿ 64 ಸಾವಿರ ಹಣ ಕಳೆದುಕೊಂಡ ಮಹಿಳೆ

Gruha Lakshmi Scheme Fraud In Karnataka: ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಇನ್ನು ಒಂದು ಯೋಜನೆ ಜಾರಿಯಾಗುವುದು ಬಾಲಿಕಿ ಇದೆ.

ಇನ್ನೇನು 2023 ರ ಕೊನೆಯ ತಿಂಗಳಿನಲ್ಲಿ ಉಚಿಯ ಗ್ಯಾರಂಟಿ ಯೋಜನೆಯ ಐದನೇ ಯೋಜನೆ ಜಾರಿಯಾಗಲಿದೆ. ಇನ್ನು ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿದ್ದಂತೆ ಇದರ ಮೂಲಕ ನಡೆಯುತ್ತಿರುವ ವಂಚನೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ.

Gruha Lakshmi Scheme Amount
Image Credit: News 9 live

ಉಚಿತ ಗ್ಯಾರಂಟಿ ಯೋಜನೆ ಪಡೆಯುತ್ತಿರುವವರ ಗಮನಕ್ಕೆ
ತಂತ್ರಜ್ಞಾನ ಹೆಚ್ಚುತ್ತಿದೆ ವಂಚನೆ ಕೂಡ ಹೆಚ್ಚುತ್ತಿದೆ. ವಂಚಕರು ತಂತ್ರಜ್ಞಾನವನ್ನು ಹೆಚ್ಚಾಗಿ ವಂಚನೆ ಮಾಡಲುಬಳಸುತ್ತಿದ್ದರೆ.ಒಂದು ಕ್ಷಣ ಯಾಮಾರಿದರೂ ಕೂಡ ಖಾತೆಗೆ ಕಣ್ಣ ಹಾಕಲು ವಂಚಕರು ಹೊಂಚು ಹಾಕುತ್ತ ಇರುತ್ತಾರೆ. ಹೀಗಿರುವಾಗ ಉಚಿತ ಗ್ಯಾರಂಟಿ ಯೋಜನೆಗಳನ್ನೇ ಗಾಳವನ್ನಾಗಿಸಿಕೊಂಡು ಮತ್ತಷ್ಟು ವಂಚನೆ ಎಸೆಗಳು ಮುಂದಾಗಿದ್ದಾರೆ. ಇದೀಗ ಇಂತದ್ದೊಂದು ವಂಚನೆಯ ಪ್ರಕರಣ ಕುಂದಗೋಳ ತಾಲೂಕಿನ ಯಾರಗುಪ್ಪಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿದೆಯಾ ಎಂದು ಖಾತೆ ಚೆಕ್ ಮಾಡಲು ಹೋದ ಮಹಿಳೆಗೆ ಬಹು ದೊಡ್ಡ ಶಾಕ್ ಎದುರಾಗಿದೆ. ಈ ಪ್ರಕರಣದ ಬಗೆ ವಿವರ ಇಲ್ಲಿದೆ.

ಗೃಹ ಲಕ್ಷ್ಮಿ ಹಣ ಚೆಕ್ ಮಾಡಲು ಹೋಗಿ 64 ಸಾವಿರ ಹಣ ಕಳೆದುಕೊಂಡ ಮಹಿಳೆ
ಹೌದು ಕುಂದಗೋಳ ತಾಲೂಕಿನ ಯಾರಗುಪ್ಪಿ ಗ್ರಾಮದಲ್ಲಿ ಓರ್ವ ಮಹಿಳೆ ಬರೋಬ್ಬರಿ 64 ಸಾವಿರ ಹಣ ಕಳೆದುಕೊಂಡಿದ್ದಾಳೆ. ತಾನು ಸಂಪಾದಿಸಿದ ವರ್ಷಮಾನದ ಹಣವನ್ನು ಕಳೆದುಕೊಂಡ ದುಕ್ಕದಲ್ಲಿ ಮಹಿಳೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ. ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವ ಎಂದು ಚೆಕ್ ಮಾಡಲು ಹೋದ ಮಹಿಳೆ 64 ಸಾವಿರ ಹಣ ಕಳೆದುಕೊಂಡಿರುವ ವಿಚಾರ ತಿಳಿದುಕೊಂಡಿದ್ದಾಳೆ.

Gruha Lakshmi Scheme Latest News
Image Credit: Economictimes

ಯಾವ OTP ಕೂಡ ಪಡೆಯದೇ ವಂಚಕರು 64 ಸಾವಿರ ಹಣಕ್ಕೆ ಖನ್ನಾ ಹಾಕಿದ್ದಾರೆ. ಮಹಿಳೆಯ 64 ಸಾವಿರ ಹಣವನ್ನು ವಂಚಕರು ಏಳು ಬಾರಿ ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಹಿಂದೆ ಕೊಂದಗೋಳದಲ್ಲಿ ಸ್ಥಳ ಖರೀದಿಗಾಗಿ ಮಹಿಳೆ ಹೆಬ್ಬೆಟ್ಟು ಒತ್ತಿದ್ದಳು. ಇದಲ್ಲೆ ಗಾಳವನ್ನಾಗಿಸಿಕೊಂಡು ವಂಚಕರು ಮಹಿಳೆಯ ಖಾತೆಗೆ ಖನ್ನಾ ಹಾಕಿದ್ದಾರೆ. ಅಕ್ಟೋಬರ್ 24 ರಿಂದ ನವೆಂಬರ್ 3 ರ ವರೆಗೆ ಹಣ ವರ್ಗಾವಣೆ ಆಗಿದೆ. ಹಣ ಕಳೆದುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿ ತನ್ನ ಹಣ ವಾಪಸ್ಸು ನೀಡುವಂತೆ ಕೇಳಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group