Govt Scheme: ಇನ್ಮುಂದೆ ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಹಣ ಸಿಗತ್ತೆ , ಹೊಸ ರೂಲ್ಸ್

ಮುಂದಿನ ಕಂತಿನ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಹಣ ಇಂಥವರಿಗೆ ಇನ್ನುಮುಂದೆ ಬರುವುದಿಲ್ಲ, ಹೊಸ ನಿಯಮ ಜಾರಿಗೆ ತಂದ ಸರ್ಕಾರ

Gruha Lakshmi And Anna Bhagya Scheme New Rules: ರಾಜ್ಯದಲ್ಲಿ ಅನ್ನಭಾಗ್ಯ (Anna Bhagya) ಹಾಗು ಗ್ರಹಲಕ್ಷ್ಮಿ (Gruha Lakshmi) ಯೋಜನೆಯ ಹಣ ಕೋಟ್ಯಂತರ ಬಡ ಜನರ ಖಾತೆಯನ್ನು ಸೇರುತ್ತಿದೆ. ರಾಜ್ಯ ಸರಕಾರದ ಐದು ಗ್ಯಾರೆಂಟಿ ಯೋಜನೆಯಲ್ಲಿ ಅನ್ನಭಾಗ್ಯ ಹಾಗು ಗ್ರಹಲಕ್ಷ್ಮಿ ಯೋಜನೆ ಬಹಳ ಜನಪ್ರಿಯತೆಯನ್ನು ಸಹ ಪಡೆದುಕೊಳ್ಳುತ್ತಿದೆ.

ಈಗಾಗಲೇ ಹಲವು ತಿಂಗಳಿಂದ ಈ ಯೋಜನೆಗಳ ಲಾಭವನ್ನು ಜನ ಪಡೆಯುತ್ತಿದ್ದು, ಆದರೆ ಇನ್ನುಮುಂದೆ ಈ ಯೋಜನೆಯಲ್ಲಿ ಕೆಲವು ಬದಲಾವಣೆ ಯನ್ನು ಮಾಡಿದ್ದೂ, ಇಷ್ಟು ದಿನ ಈ ಯೋಜನೆಯ ಹಣ ಪಡೆದವರಿಗೆ ಆಘಾತಕಾರಿ ಸುದ್ದಿವೊಂದಿದೆ. ಇದರ ಮಾಹಿತಿಯನ್ನು ಪಡೆಯುವುದು ಬಹಳ ಮುಖ್ಯ ಆಗಿದೆ.

Gruha Lakshmi Scheme Latest News
Image Credit: Oneindia

ಅನ್ನಭಾಗ್ಯ ಹಾಗು ಗ್ರಹಲಕ್ಷ್ಮಿ ಯೋಜನೆಯಾ ಹಣ ನಿಮ್ಮ ಖಾತೆ ಸೇರಿದೆಯೇ?

ಹಲವು ತಿಂಗಳಿಂದ ಗ್ರಹಲಕ್ಷ್ಮಿ ಯೋಜನೆಯಡಿ ಮಹಿಳೆಯರು ಪ್ರತಿ ತಿಂಗಳು 2000 ರೂಪಾಯಿಗಳಂತೆ ಹತ್ತು ಸಾವಿರ ರೂಪಾಯಿಯನ್ನು ಉಚಿತವಾಗಿ ಪಡೆದಿದ್ದಾರೆ. ಆದರೆ ಎಲ್ಲರೂ ಮುಂದಿನ ಕಂತಿನ ಹಣ ಪಡೆಯುವ ಸಾಧ್ಯೆತೆ ಇಲ್ಲ ಎನ್ನಲಾಗಿದೆ. ಸಣ್ಣ ಪುಟ್ಟ ಖರ್ಚುಗಳಿಗೆ ಈ ಎರಡು ಸಾವಿರ ರೂಪಾಯಿ ಸಹಾಯಕ ಆಗುತ್ತಿತ್ತು ಆದರೆ ಇನ್ನುಮುಂದೆ ಈ ಹಣ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹಾಗೆಯೆ ಅನ್ನಭಾಗ್ಯ ಯೋಜನೆಯ ಮೇಲೆ ಇದು ಪರಿಣಾಮ ಬೀರದೆ ಇರಲು ಸಾಧ್ಯವಿಲ್ಲ.

ಹಲವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿದ ಸರ್ಕಾರ

Join Nadunudi News WhatsApp Group

ಸರ್ಕಾರದಿಂದ ಸಿಗುವ ಯೋಜನೆಯ ಫಲಾನುಭವಿಗಳಾಗಲು ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯ ಆಗಿದ್ದು, ಡಿಬಿಟಿ ಹಣ ಪಡೆಯಲು ರೇಷನ್ ಕಾರ್ಡ್ ಮುಖ್ಯ ಆಗಿದೆ. ರಾಜ್ಯ ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ವಿಚಾರವಾಗಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಅರ್ಹರಲ್ಲದ ಹಾಗು ಅನಗತ್ಯವಾಗಿರುವ ಬಿಪಿಎಲ್ ರೇಷನ್ ಕಾರ್ಡ್ ಅನ್ನು ರದ್ದು ಪಡಿಸುತ್ತಿದ್ದು, ಈಗಾಗಲೇ ಹಲವು ರೇಷನ್ ಕಾರ್ಡ್ ಅನ್ನು ರದ್ದುಪಡಿಸಲಾಗಿದೆ. ಹಾಗಾಗಿ ಹಲವಾರು ಬೇರೆ ಬೇರೆ ಕಾರಣಕ್ಕೆ ತಮ್ಮ ರೇಷನ್ ಕಾರ್ಡ್ ಅನ್ನು ಕಳೆದುಕೊಂಡಿದ್ದು, ಈ ಕುರಿತು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಇನ್ನು ಯಾವ ಯೋಜನೆಯ ಹಣವು ನಿಮ್ಮ ಖಾತೆಯನ್ನು ತಲುಪುವುದಿಲ್ಲ.

Anna Bhagya Scheme Latest Updates
Image Credit: Gizbot

ರೇಷನ್ ಕಾರ್ಡ್ ರದ್ದು ಆಗಿರುವ ಕುರಿತು ಲಿಸ್ಟ್ ಚೆಕ್ ಮಾಡುವ ವಿಧಾನ

ರೇಷನ್ ಕಾರ್ಡ್ ರದ್ದಾಗಿರುವ ಕುರಿತು ತಿಳಿಯಲು ಮೊದಲನೇದಾಗಿ https://ahara.kar.nic.in/Home/EServices ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ಎಡ ಭಾಗದಲ್ಲಿ ಮೂರೂ ಲೈನ್ ಮೇಲೆ ಕ್ಲಿಕ್ ಮಾಡಬೇಕು ಈಗ ಈ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ, ರದ್ದು ಮಾಡಲಾಗಿರುವ ರೇಷನ್ ಕಾರ್ಡ್ ಲಿಸ್ಟ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಇನ್ನು ಮುಂದಿನ ಹಂತದಲ್ಲಿ ನಿಮ್ಮ ಜಿಲ್ಲೆ ತಾಲೂಕು ರದ್ದು ಮಾಡಲಾಗಿರುವ ವರ್ಷ ತಿಂಗಳು ಇವುಗಳನ್ನು ಸೆಲೆಕ್ಟ್ ಮಾಡಬೇಕು ನಂತರ ಗೋ ಎಂದು ಕೊಟ್ಟರೆ ನೀವು ಆಯ್ಕೆ ಮಾಡಿದ ವರ್ಷ ಹಾಗು ತಿಂಗಳಿನಲ್ಲಿ ರದ್ದು ಪಡಿ ಮಾಡಲಾಗಿರುವ ರೇಷನ್ ಕಾರ್ಡ್ ಯಜಮಾನರ ಹೆಸರು ಡಿಸ್ಪ್ಲೇ ಆಗುತ್ತದೆ. ಇದರಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಮುಂದಿನ ತಿಂಗಳಿಂದ ಗ್ಯಾರೆಂಟಿ ಯೋಜನೆಯ ಹಣ ಬಿಡುಗಡೆ ಆಗುವುದಿಲ್ಲ. ನೀವು ಮತ್ತೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಹೊಸದಾಗಿ ಅರ್ಜಿ ನೀಡಬೇಕಾಗುತ್ತದೆ.

Join Nadunudi News WhatsApp Group