Guarantee Scheme: ಈ ಒಂದು ಕಾರಣಕ್ಕೆ BPL ಮತ್ತು ಅಂತ್ಯೋದಯ ಕಾರ್ಡ್ ಇದ್ದರೂ ಸಿಗುತ್ತಿಲ್ಲ ಗೃಹಲಕ್ಷ್ಮಿ ಯೋಜನೆಯ ಹಣ

BPL ಹಾಗೂ Antyodaya ಕಾರ್ಡ್ ಹೊಂದಿದ್ದರು ಹಣ ಏಕೆ ಜಮಾ ಆಗುತ್ತಿಲ್ಲ...? ಇಲ್ಲಿದೆ ಕಾರಣ

Gruha Lakshmi And Anna Bhagya: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಾದ Gruha Lakshmi ಯೋಜನೆ ಹಾಗೂ Anna Bhagya ಯೋಜನೆಗಳಿಗೆ Ration Card ಮುಖ್ಯವಾಗಿದೆ. BPL ಹಾಗೂ Antyodaya Card ದಾರರಿಗೆ ಸರ್ಕಾರದ ಯೋಜನೆಗಳ ಲಾಭ ದೊರೆಯುತ್ತಿದೆ.

ಗೃಹ ಲಕ್ಷ್ಮಿ ಯೋಜನೆಯಡಿ ಗೃಹಿಣಿಯರಿಗೆ ಮಾಸಿಕ 2000 ಹಾಗೂ ಅನ್ನ ಭಾಗ್ಯ ಯೋಜನೆಯಡಿ 5KG ಅಕ್ಕಿಯ ಪರ್ಯಾಯವಾಗಿ ಕೆಜಿಗೆ 34 ರೂ. ಗಳಂತೆ 170 ರೂ. ಗಳನ್ನೂ ಸರ್ಕಾರ ನೀಡುತ್ತಿದೆ. ಸದ್ಯ ರಾಜ್ಯದಲ್ಲಿ BPL ಹಾಗೂ Antyodaya Card ಹೊಂದಿದ್ದರು ಕೂಡ ಈ ಎರಡು ಯೋಜನೆಯ ಹಣ ಖಾತೆದಾರರಿಗೆ ಜಮಾ ಆಗುತ್ತಿಲ್ಲ. ಹಣ ಜಮಾ ಆಗದೆ ಇರಲು ಕಾರಣವೇನು ಎನ್ನುವ ಬಗ್ಗೆ ನಾವೀಗ ತಿಳಿಯೋಣ.

Gruha Lakshmi And Anna Bhagya
Image Credit: Kannada News Today

BPL ಹಾಗೂ Antyodaya Card ಹೊಂದಿದ್ದರು ಹಣ ಜಮಾ ಆಗುತ್ತಿಲ್ಲ
ರಾಜ್ಯ ಸರ್ಕಾರ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರು ಕೂಡ ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನಗಳು ಸಂಪೂರ್ಣವಾಗಿ ಅರ್ಹರಿಗೆ ತಲುಪುತ್ತಿಲ್ಲ ಎನ್ನಬಹುದು. ತಾಂತ್ರಿಕ ದೋಷಗಳ ಕಾರಣ ಯೋಜನೆಯ ಲಾಭ ದೊರಕದಿರುವುದು ಒಂದು ಕಾರಣವಾದರೆ, ಎಲ್ಲ ಸಮಸ್ಯೆಗಳು ಪರಿಹಾರವಾಗಿದ್ದು, BPL ಹಾಗೂ Antyodaya Card ಹೊಂದಿದ್ದರು ಕೂಡ ಕೆಲವರ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಹಣ ಜಮಾ ಆಗದೆ ಇರಲು ಇದೆ ಕಾರಣವಾಗಿದೆ.

ಹಣ ಜಮಾ ಆಗದೆ ಇರಲು ಕಾರಣವೇನು…?
ಹೌದು, ಕಳೆದ ಆರು ತಿಂಗಳಿನಿಂದ ಯಾರು ಉಚಿತ ಪಡಿತರನ್ನು ಪಡೆಯುತ್ತಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ಸರ್ಕಾರ ರದ್ದು ಪಡಿಸಲು ನಿರ್ಧರಿಸಿದೆ. ಈಗಾಗಲೇ ರಾಜ್ಯದಲ್ಲಿ 3 .26 ಲಕ್ಷ ಪಡಿತರ ಚೀಟಿಗಳು ರದ್ದಾಗಿವೆ. ಇನ್ನು ಕೂಡ ರೇಷನ್ ಕಾರ್ಡ್ ಹೊಂದಿರುವ ಸಾಕಷ್ಟು ಜನರು ಕಳೆದ ಆರು ತಿಂಗಳಿನಲ್ಲಿ ಪಡಿತರ ಪಡೆದಿಲ್ಲ.

Gruha Lakshmi And Anna Bhagya Scheme Latest Update
Image Credit: TV9 Kannada

ಅಂತವರ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸುವಲ್ಲಿ ಸರ್ಕಾರ ತೊಡಗಿಕೊಂಡಿದೆ. ನೀವು BPL ಹಾಗೂ Antyodaya Card ಹೊಂದಿದ್ದು, ಆರು ತಿಂಗಳಿನಿಂದ ಪಂಡಿತರನ್ನು ಪಡೆದಿಲ್ಲ ಎಂದಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ. ರೇಷನ್ ಕಾರ್ಡ್ ರದ್ದಾದರೆ ಯೋಜನೆಯ ಹಣ ಖಾತೆಗೆ ಜಮಾ ಆಗಲು ಸಾಧ್ಯವಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

Join Nadunudi News WhatsApp Group