Gruha Lakshmi: ಗೃಹಲಕ್ಷ್ಮಿ ಹಣ ಸಿಗದ ಮಹಿಳೆಯರ ಎಚ್ಚರ, ಇಂದೇ ಈ ಕೆಲಸ ಮಾಡದಿದ್ದರೆ ಯಾವತ್ತೂ ಬರಲ್ಲ ಗೃಹಲಕ್ಷ್ಮಿ 2000

ಗೃಹ ಲಕ್ಷ್ಮಿ ಸಮಸ್ಯೆ ಬಗೆಹರಿಸಿಕೊಳ್ಳಲು ಇಂದು ಕೊನೆಯ ದಿನ

Gruha Lakshmi Camp Latest Update: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ದಿನಕ್ಕೊಂದು ಅಪ್ಡೇಟ್ ಹೊರಬೀಳುತ್ತಿದೆ. ರಾಜ್ಯದ ಅರ್ಹ ಮಹಿಳೆಯರು ಗೃಹ ಲಕ್ಷ್ಮಿ ಹಣ ಪಡೆಯುವುದಕ್ಕಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರೆ. ಯೋಜನೆ ಅನುಷ್ಠಾನಗೊಂಡು ಸಾಕಷ್ಟು ಸಮಯವಾದರೂ ಕೂಡ ಇನ್ನು ಯೋಜನೆ ಪೂರ್ಣ ಲಾಭ ಎಲ್ಲಾ ಅರ್ಹ ಮಹಿಳೆಯರ ಪಾಲಿಗೆ ಲಭ್ಯವಾಗುತ್ತಿಲ್ಲ. ಗೃಹ ಲಕ್ಷ್ಮಿ ಯೋಜನೆ ಇಂದಿಗೂ ಕೂಡ ಬಗೆಹರಿಯದ ಸಮಸ್ಯೆಯಾಗಿದೆ.

ಗೃಹ ಲಕ್ಷ್ಮಿ ಯೋಜನೆಗೆ ಸಂಭಂದಿಸಿದಂತೆ ಎಲ್ಲ ರೀತಿಯ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ವಿವಿದ ಕ್ರಮ ಕೈಗೊಳ್ಳುತ್ತಿದೆ. ಈವರೆಗೆ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಜಾರಿಗೆ ತಂದಿದೆ. ಹೊಸ ಬದಲಾವಣೆ ಅಲ್ಪ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಸಿದರು ಇನ್ನು ಕೆಲ ಮಹಿಳೆಯರಿಗೆ ಹಣ ಜಮಾ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Gruha Lakshmi Camp Latest Update
Image Credit: Original Source

ಗೃಹಲಕ್ಷ್ಮಿ ಹಣ ಸಿಗದ ಮಹಿಳೆಯರ ಎಚ್ಚರ
ಗೃಹ ಲಕ್ಷ್ಮಿ ಯೋಜನೆಯ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಗೃಹ ಲಕ್ಷ್ಮಿ ಸಮಸ್ಯೆ ಪರಿಹಾರವಾಗುತ್ತಿಲ್ಲ. ಅರ್ಜಿದಾರರರ ದಾಖಲೆಗಳು ಸರಿ ಇದ್ದರು ಕೂಡ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಡಿಸೆಂಬರ್ 27 ರಿಂದ 29 ರ ವರೆಗೆ ಶಿಬಿರಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಅದರಂತೆ ಶಿಬಿರಗಳು ಗ್ರಾಮ ಪಂಚಾಯತ್ ನಲ್ಲಿ ನಡೆಯುತ್ತಿದೆ. ಗೃಹ ಲಕ್ಷ್ಮಿ ಯೋಜನೆಯ ಅಗತ್ಯ ದಾಖಲೆಗಳ ಸಮಸ್ಯೆ ಪರಿಹಾರಕ್ಕಾಗಿ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಏರ್ಪಡಿಸಿ ಸಮಸ್ಯೆಗೆ ಪರಿಹಾರವನ್ನು ಸರ್ಕಾರ ನೀಡುತ್ತಿದೆ.

Gruha Lakshmi Scheme Camp Update
Image Credit: Varthabharati

ಇಂದೇ ಈ ಕೆಲಸ ಮಾಡದಿದ್ದರೆ ಯಾವತ್ತೂ ಬರಲ್ಲ ಗೃಹಲಕ್ಷ್ಮಿ 2000
ಗೃಹ ಲಕ್ಷ್ಮಿ ಹಣ ಇನ್ನು ಸಿಗದ ಮಹಿಳೆಯರು ಗ್ರಾಮ ಪಂಚಾಯತಿಯಲ್ಲಿ ನಡೆಯುವ ಈ ಕ್ಯಾಂಪ್ ಗೆ ಹಾಜರಾಗಿ ತಮ್ಮ ಸಮಸ್ಯೆ ಹೇಳಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಈ ಕ್ಯಾಂಪ್ ಗೆ ಇಂದು ಕೊನೆಯ ದಿನಾಂಕವಾಗಿದೆ. ಯಾರು ಗೃಹ ಲಕ್ಷ್ಮಿ ಹಣವನ್ನು ಪಡೆಯಲು ಸಾದ್ಯವಾಗುತ್ತಿಲ್ಲವೋ ಅಂತವರಿಗೆ ಇಂದು ಮಾತ್ರ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳವು ಕಾಲಾವಕಾಶವಿದೆ. ಇಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ಒಳಗೆ ನೀವು ನಿಮ್ಮ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group