Gruha Lakshmi: ಗೃಹಲಕ್ಷ್ಮಿ ಹಣ ಖಾತೆಗೆ ಬಂದಿಲ್ಲ ಅನ್ನುವ ಮಹಿಳೆಯರಿಗೆ ಸರ್ಕಾರದಿಂದ ಗುಡ್ ನ್ಯೂಸ್, ಇನ್ನೊಂದು ಘೋಷಣೆ

ಗೃಹ ಲಕ್ಷ್ಮಿ ಹಣ ಜಮಾ ಆಗಲು ಈ ಕೆಲಸ ಮಾಡುದು ಕಡ್ಡಾಯವಾಗಿದೆ

Gruha Lakshmi e-KYC Mandatory: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳುಗಳು ಕಳೆದಿದ್ದು, ಈಗ 6 ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸಲುವಾಗಿ ಗೃಹ ಲಕ್ಷ್ಮಿ ಯೋಜನೆಯ ಮೂಲಕ 2000 ರೂಪಾಯಿಯನ್ನ ಮಹಿಳೆಯರಿಗೆ ನೀಡಲಾಗುತ್ತಿದೆ.

ಸ್ವಾವಲಂಬಿ ಮಹಿಳೆಯರನ್ನು ಉತ್ತೇಜಿಸುವ ಗೃಹ ಲಕ್ಷ್ಮಿ ಯೋಜನೆ ಕೋಟ್ಯಾಂತರ ಮಹಿಳೆಯರ ಪಾಲಿಗೆ ವರದಾನವಾಗಿದೆ. ರಾಜ್ಯದಲ್ಲಿ ಶೇಕಡಾ 90 ರಷ್ಟು ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ 10 ರಷ್ಟು ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯನ್ನು ಪಡೆಯಲು ವಿಫಲರಾಗಿದ್ದಾರೆ.

Gruha Lakshmi Latest News Update
Image Credit: Kannada News

ಗೃಹ ಲಕ್ಷ್ಮಿ ಹಣ ಜಮಾ ಆಗಲು ಈ ಕೆಲಸ ಮಾಡುದು ಕಡ್ಡಾಯವಾಗಿದೆ
e-KYC ಎನ್ನುದು ಇತ್ತೀಚಿನ ದಿನಗಳಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನುದು ಎಲ್ಲರಿಗೂ ತಿಳಿದಿರುವ ವಿಚಾರ. ಒಬ್ಬ ವ್ಯಕ್ತಿಯ ಖಾತೆಗೆ e-KYC ಆಗಿದ್ದರೆ ಮಾತ್ರ ಅದು ಆತನ ಖಾತೆ ಎನ್ನುದಕ್ಕೆ ಸಾಕ್ಷಿಯಾಗಿದೆ. e-KYC ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಕೂಡ ಮೋಸ ಹೋಗಲು ಸಾಧ್ಯವಿಲ್ಲ. ಸದ್ಯ ಮಹಿಳೆಯರು ಗೃಹ ಲಕ್ಷ್ಮಿ ಹಣ ಪಡೆದುಕೊಳ್ಳಲು e-KYC ಮಾಡುವುದು ಕಡ್ಡಾಯವಾಗಿದೆ.

ನೀವು ತಕ್ಷಣ e-KYC, NPCI ಮ್ಯಾಪಿಂಗ್ ಮಾಡಿಸುದು ಉತ್ತಮ. 6 ಕಂತಿನ ಹಣ ಈಗಾಗಲೇ ಅರ್ಹ ಮಹಿಳೆಯರ ಖಾತೆಗೆ ತಲುಪಿದೆ. ಇನ್ನು 7 ನೇ ಕಂತಿನ ಹಣ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು ಮಹಿಳೆಯರು ಆದಷ್ಟು ಬೇಗ ತಮ್ಮ ಖಾತೆಗೆ e-KYC, NPCI ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು.

Gruha Lakshmi e-KYC Mandatory
Image Credit: Deccan Herald

ಗೃಹ ಲಕ್ಷ್ಮಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯ
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಯಾವುದೇ ರೀತಿಯ ವಂಚನೆ ಆಗಬಾರದು ಎನ್ನು ನಿಟ್ಟಿನಲ್ಲಿ ಸರ್ಕಾರ ಹಲವು ರೀತಿಯಲ್ಲಿ ಮಹಿಳೆಯರಿಗೆ ಹಣ ತಲುಪಿಸುವ ಕಾರ್ಯ ಮಾಡುತ್ತಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ಗೃಹ ಲಕ್ಷ್ಮಿ ಅದಾಲತ್, ಹಾಗೆ ಗೃಹ ಲಕ್ಷ್ಮಿ ಶಿಬಿರಗಳನ್ನು ಆಯೋಜಿಸಲಾಗಿತ್ತು.

Join Nadunudi News WhatsApp Group

ಈಗಲೂ ಕೂಡ ಕೆಲವೊಂದು ಜಿಲ್ಲೆಗಳಲ್ಲಿ ಗೃಹ ಲಕ್ಷ್ಮಿ ಯಶಶ್ವಿ ಸಮಾವೇಶವನ್ನು ನೆಡೆಸಲಾಗುತ್ತಿದೆ. ಹಾಗಾಗಿ ಹಣ ಪಡೆದುಕೊಳ್ಳದ ಮಹಿಳೆಯರು ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ, ಸಮಸ್ಯೆಯನ್ನು ಪರಿಹರಿಸಿಕೊಂಡು ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.

Join Nadunudi News WhatsApp Group