Gruha Lakshmi: ಗೃಹ ಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್, ತಕ್ಷಣ ಈ ಕೆಲಸ ಮಾಡದಿದ್ದರೆ 11 ನೇ ಕಂತಿನ ಹಣ ಬರಲ್ಲ.

ಗೃಹ ಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್, 11 ನೇ ಕಂತಿನ ಹಣ ಬೇಕಾದರೆ ತಕ್ಷಣ ಈ ಕೆಲಸ ಮಾಡಿ

Gruha Lakshmi New Update: ಕಾಂಗ್ರೆಸ್ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 22,000 ರೂಪಾಯಿಗಳನ್ನು ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗಿದೆ. ಗೃಹಿಣಿಯರು ಕಳೆದ ಹತ್ತು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಗೃಹಿಣಿಯರು ಪ್ರತಿ ತಿಂಗಳು 2000 ರೂಪಾಯಿಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಈ ತಿಂಗಳಿನಲ್ಲಿ 11 ನೇ ಕಂತಿನ ಹಣ ಕೂಡ ಬಿಡುಗಡೆಯಾಗಲಿದೆ. ಸದ್ಯ ಗೃಹ ಲಕ್ಷ್ಮಿ ಯೋಜನೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆಯನ್ನು ತಂದಿದೆ. ಈ ಕೆಲಸ ಮಾಡದಿದ್ದರೆ 11 ನೇ ಕಂತಿನ ಹಣ ಜಮಾ ಮಾಡಲ್ಲ ಎಂದು ಸರ್ಕಾರ ಫಲಾನುಭವಿಗಳಿಗೆ ಸೂಚನೆ ನೀಡಿದೆ.

Gruha Lakshmi New Update
Image Credit: Oneindia

ಗೃಹ ಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್
ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನಗೊಂಡು ಹತ್ತು ತಿಂಗಳು ಕಳೆದರು ಕೂಡ ಯೋಜನೆಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿದೆ. ಗೃಹ ಲಕ್ಷ್ಮಿ ಯೋಜನೆಯ ಸಂಪೂರ್ಣ ಲಾಭ ಎಲ್ಲ ಅರ್ಹರಿಗೆ ತಲುಪುತ್ತಿಲ್ಲದ ಕಾರಣ ಸರ್ಕಾರ ಆಗಾಗ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತದೆ.

ರಾಜ್ಯ ಸರ್ಕಾರ ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ 11 ಕಂತಿನ ಹಣವನ್ನು ಜಮಾ ಮಾಡಿದೆ. ಫಲಾನುಭವಿಗಳು ಸದ್ಯ 11 ಕಂತಿನ ಬರುವಿಕೆಯಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರಿಗೆ 11 ನೇ ಕಂತಿನ ಹಣ ಜಮಾ ಆಗಿರಬಹುದು. ಆದರೆ ಇನ್ನು ಜಮಾ ಆಗದೆ ಇರುವವವರು ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು. ಹಣ ಜಮಾ ಆಗಲು ಕೆಲ ಅಗತ್ಯ ಕೆಲಸಗಳನ್ನು ಮಾಡಬೇಕಿದೆ.

Gruha Lakshmi Scheme KYC Update
Image Credit: Needsofpublic

ತಕ್ಷಣ ಈ ಕೆಲಸ ಮಾಡದಿದ್ದರೆ 11 ನೇ ಕಂತಿನ ಹಣ ಬರಲ್ಲ
•ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ KYC ಅಪ್ಡೇಟ್ ಅನ್ನು ಕಡ್ಡಾಯಗಳಿಸಿದೆ. KYC ನವೀಕರಣ ಆಗದ ಮಹಿಳೆಯರ ಖಾತೆಗೆ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ. ನೀಡಿರುವ ಬ್ಯಾಂಕ್ ಖಾತೆಗೆ ನೀವು ಮತ್ತೆ KYC ಮಾಡಬೇಕು.

Join Nadunudi News WhatsApp Group

•ಇನ್ನು KYC Update ನ ಜೊತೆಗೆ NPCI Link ಕೂಡ ಅಗತ್ಯವಾಗಿದೆ. ಫಲಾನುಭವಿಗಳು ತಕ್ಷಣ NPCI ಲಿಂಕ್ ಮಾಡಬೇಕಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಬಹುದು.

•ಇನ್ನು ನಿಮ್ಮ ಮೊಬೈಲ್ ನಂಬರ್ ಗೆ ಬ್ಯಾಂಕ್ ಅಕೌಂಟ್ ಹಗೂ ಆಧಾರ್ ಲಿಂಕ್ ಆಗುವುದು ಕೂಡ ಮುಖ್ಯವಾಗಿದೆ. ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಆಗದೆ ಇದ್ದರೆ ನಿಮ್ಮ ಖಾತೆಗೆ ಯೋಜನೆಯ ಹಣ ಜಮಾ ಆಗಿದೆಯಾ ಅಥವಾ ಇಲ್ಲವ ಎನ್ನುವ ಬಗ್ಗೆ ನಿಮಗೆ ಸಂದೇಶ ರವಾನೆ ಆಗುವುದಿಲ್ಲ.

•ಇನ್ನು ಅರ್ಜಿ ಸಲ್ಲಿಕೆಯ ವೇಳೆ ನೀವು ನೀಡಿದ ಬ್ಯಾಂಕ್ ಅಕೌಂಟ್ ಸರಿಯಾಗಿದೆಯೇ ಎನ್ನುವುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ನಿಮ್ಮ ಖಾತೆ ಕ್ಲೋಸ್ ಆಗಿದ್ದರೆ ಹಣ ಜಮಾ ಆಗುವುದಿಲ್ಲ.

Gruha Lakshmi Scheme New Rules
Image Credit: Starofmysore

Join Nadunudi News WhatsApp Group