Gruha Lakshmi: ಗೃಹಲಕ್ಷ್ಮಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್, ಈ ಮಹಿಳೆಯರ ಖಾತೆಗೆ ಜಮಾ ಆಗಲ್ಲ 6 ನೇ ಕಂತಿನ ಹಣ

ಈ ಮಹಿಳೆಯರ ಖಾತೆಗೆ ಜಮಾ ಆಗಲ್ಲ ಗೃಹಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ

Gruha Lakshmi Latest Update: ರಾಜ್ಯದ ಅರ್ಹ ಗೃಹಿಣಿಯರು Gruha Lakshmi ಯೋಜನೆಯಡಿ ಆಗಸ್ಟ್ ನಿಂದ ಮಾಸಿಕ 2000 ರೂ. ಹಣವನ್ನು ಪಡೆಯುತ್ತಿದ್ದಾರೆ. ಮಹಿಳೆಯರು ಖರ್ಚಿಗಾಗಿ ಸರ್ಕಾರ ಮಾಸಿಕ 2000 ರೂ. ನೀಡುವ ಮೂಲಕ ಅವರಿಗೆ ಆರ್ಥಿಕ ಬೆಂಬಲ ನೀಡಲು ಮುಂದಾಗಿದೆ.

ಇನ್ನು ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯಡಿ 5 ಕಂತುಗಳ ಹಣ ಬಿಡುಗಡೆಯಾಗಿದ್ದು, 6 ನೇ ಕಂತಿನ ಹಣ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದೀಗ ಗೃಹ ಲಕ್ಷ್ಮಿ ಯೋಜನೆಯ ಕುರಿತು ಮಹಿಳೆಯರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.

Gruha Lakshmi Latest News Updates
Image Credit: Krishijagran

ಗೃಹಲಕ್ಷ್ಮಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್
ಇನ್ನು ರಾಜ್ಯ ಸರ್ಕಾರ ಗೃಹ ಯೋಜನೆಯಡಿ ಬಿಡುಗಡೆ ಮಾಡಿರುವ ಎಲ್ಲ ಕಂತುಗಳ ಹಣ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ . ಇನ್ನೂ ಒಂದು ಕಂತಿನ ಹಣವನ್ನು ಪಡೆಯದ ಸಾಕಷ್ಟು ಮಹಿಳೆಯರಿದ್ದಾರೆ. ಕೆಲ ಮಹಿಳೆಯಯರು ಒಂದೆರಡು ಯೋಜನೆಗಳ ಹಣವನ್ನು ಪಡೆದಿದ್ದು, ಮುಂದಿನ ಕಂತಿನ ಹಣ ಅವರ ಖಾತೆಗೆ ಜಮಾ ಆಗಿಲ್ಲ. ಮುಖ್ಯವಾಗಿ ತಾಂತ್ರಿಕ ದೋಷದ ಕಾರಣ ಎಲ್ಲ ಅರ್ಹ ಫಲಾನುಭವಿಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಮಾಸಿಕ 2000 ರೂ ಹಣ ಜಮಾ ಆಗಿರುವುದಿಲ್ಲ ಎನ್ನುವುದು ನಿಮಗೆ ತಿಳಿದಿದೆ. ಆದರೆ 6 ನೇ ಕಂತಿನ ಹಣ ಇಂತವರ ಖಾತೆಗೆ ಜಮಾ ಆಗುವುದಿಲ್ಲ ಎನ್ನುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿದೆ.

ಈ ಮಹಿಳೆಯರ ಖಾತೆಗೆ ಜಮಾ ಆಗಲ್ಲ 6 ನೇ ಕಂತಿನ ಹಣ
ಗೃಹ ಲಕ್ಷ್ಮಿ ಅರ್ಜಿದಾರರು E -KYC ಮಾಡದಿದ್ದರೆ, Aadhaar Link ಮಾಡದಿದ್ದರೆ, NPCI Link ಮಾಡದಿದ್ದರೆ, ಯೋಜನೆಯ ಹಣ ಜಮಾ ಆಗುವುದಿಲ್ಲ. ಈ ಎಲ್ಲ ಸಮಸ್ಯೆಗಳು ಪರಿಹಾರವಾದರೂ ಕೂಡ ಇಂತವರ ಖಾತೆಗೆ 6 ನೇ ಕಂತಿನ ಹಣ ಜಮಾ ಆಗುವುದಿಲ್ಲ.

ತೆರಿಗೆ ಪಾವತಿದಾರರು ಹಾಗೂ ಸರ್ಕಾರೀ ನೌಕರರು ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ ಹಣ ಪಡೆಯಲು ಅರ್ಹರಲ್ಲ ಎನ್ನುವ ಷರತ್ತು ವಿಧಿಸಲಾಗಿತ್ತು. ಆದಾಗ್ಯೂ, 80 ಸಾವಿರ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆದಿದ್ದರು. ಸದ್ಯ ಅನರ್ಹರನ್ನು ಗೃಹ ಲಕ್ಷ್ಮಿ ಯೋಜನೆಯಿಂದ ಸರಕಾರ ತೆಗೆದು ಹಾಕಿ ಅಂತವರನ್ನು ಅನರ್ಹರ ಪಟ್ಟಿಗೆ ಸೇರಿಸಿದೆ. ತೆರಿಗೆ ಪಾವತಿದಾರರು ಹಾಗೂ ಸರ್ಕಾರೀ ನೌಕರರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಅಂತವರ ಖಾತೆಗೆ 6 ನೇ ಕಂತಿನ ಹಣ ಜಮಾ ಆಗುವುದಿಲ್ಲ.

Join Nadunudi News WhatsApp Group

Gruha Lakshmi 6th Installment Money
Image Credit: Original Source

ನಿಮ್ಮ ಖಾತೆಗೆ 6 ನೇ ಕಂತಿನ ಹಣ ಬಂದಿದೆಯಾ..? ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ
•ಮೊದಲನೇದಾಗಿ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ DBT Karnataka App ಅನ್ನು ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು,

•ನಂತರ ಡೌನ್ಲೋಡ್ ಆದ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.

•ಇದಾದ ನಂತರ ಮಹಿಳೆಯ ಆಧಾರ್ ನಂಬರ್ ಅನ್ನು ನಮೂದಿಸಬೇಕು,

•ಆಗ ನೋಂದಾವಣೆ ಆಗಿರುವ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ, ಅದನ್ನು ನಮೂದಿಸಬೇಕು.

•ನಂತರ Mobile Application ಗೆ Login ಆಗಲು ನೀವು ನಾಲ್ಕು Pin ಬಳಸಬೇಕಾಗುತ್ತದೆ. ನಂತರ ಇದನ್ನು ಮತ್ತೆ ವೆರಿಫಿಕೇಷನ್ ಮಾಡಿಕೊಳ್ಳಬೇಕಾಗುತ್ತದೆ.

•ಕೊನೆಗೆ ಸಬ್ಮಿಟ್ ಆಯ್ಕೆ ಕೊಟ್ಟರೆ ಪೇಮೆಂಟ್ ಪುಟ ತೆರೆದುಕೊಳ್ಳುತ್ತದೆ. ಆಗ ನಿಮ್ಮ ಖಾತೆಗೆ ಯಾವ ಕಂತಿನ ಹಣವೆಲ್ಲ ಬಂದಿದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

Join Nadunudi News WhatsApp Group