Gruha Lakshmi: ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗದ ಬಾಕಿ ಇರುವ ಮಹಿಳೆಯರಿಗೆ ಹಣ ಜಮಾ, ಈ ರೀತಿ ಚೆಕ್ ಮಾಡಿಕೊಳ್ಳಿ.

ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗದ ಬಾಕಿ ಇರುವ ಮಹಿಳೆಯರಿಗೆ ಹಣ ಜಮಾ

Gruha Lakshmi Latest Update: ರಾಜ್ಯದಲ್ಲಿ ಈಗಾಗಲೇ ಗೃಹ ಲಕ್ಷ್ಮಿ (Gruha Lakshmi) ಯೋಜನೆಯು ಅನುಷ್ಠಾನಗೊಂಡಿದ್ದು, ಆರು ತಿಂಗಳು ಕಳೆದಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಅರ್ಹ ಫಲಾನುಭವಿಗಳು ಈಗಾಗಲೇ 5 ಕಂತಿನ ಹಣವನ್ನು ಪಡೆದಿದ್ದಾರೆ.

ಗೃಹಿಣಿಯರು ಒಟ್ಟಾಗಿ ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ 10 ಸಾವಿರ ರೂ ಹಣವನ್ನು ಪಡೆದುಕೊಂಡಿದ್ದಾರೆ. ಇನ್ನು ಫೆಬ್ರವರಿಯಲ್ಲಿ 6 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ. ಆದರೆ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು 6 ನೇ ಕಂತಿನ ಹಣವನ್ನು ಪಡೆಯಲು ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

Gruha Lakshmi Latest Updates
Image Credit: Hindustantimes

ಗೃಹ ಲಕ್ಷ್ಮಿ ಯೋಜನೆಯ ಕುರಿತು ಬಿಗ್ ಅಪ್ಡೇಟ್
ಇನ್ನು ಕೂಡ ಗೃಹ ಲಕ್ಷ್ಮಿ ಯೋಜನೆಯಡಿ ಒಂದು ಕಂತಿನ ಹಣವನ್ನು ಪಡೆಯದ ಅದೆಷ್ಟೋ ಅರ್ಹ ಪಲಾನುಭವಿಗಳಿದ್ದಾರೆ. ಯೋಜನೆಯ ಹಣ ಜಮಾ ಆಗಿದೆಯಾ ಎಂದು ತಿಳಿಯಲು ಆಗಾಗ ಖಾತೆ ಚೆಕ್ ಮಾಡುಕೊಳ್ಳುತ್ತಲೇ ಇದ್ದಾರೆ ಎನ್ನಬಹುದು. ಆದರೆ ಮಹಿಳೆಯರ ಖಾತೆ ಹಣ ಜಮಾ ಆಗುತ್ತಲೇ ಇಲ್ಲ.

ಇನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ ನಿಯಮಾನುಸಾರ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡರೆ ತಕ್ಷಣವೇ ಅರ್ಹರ ಖಾತೆಗೆ ಎಲ್ಲ ಕಂತುಗಳ ಹಣ ಜಮಾ ಆಗಲಿದೆ. ಯೋಜನೆಯ ಹಣ ಅರ್ಹರ ಖಾತೆಗೆ ಸೇರಲು ಈ ಎಲ್ಲ ಕೆಲಸಗಳು ಪೂರ್ಣಗೊಂಡಿರಬೇಕು. ಸದ್ಯ ಈ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ ಯೋಜನೆಯ ಹಣ ಸಿಗದ ಬಾಕಿ ಇರುವ ಮಹಿಳೆಯರಿಗೆ ಹಣ ಜಮಾ ಮಾಡಲು ಸರಕಾರ ಮುಂದಾಗಿದೆ.

Gruha Lakshmi Scheme Amount
Image Credit: Original Source

ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗದ ಬಾಕಿ ಇರುವ ಮಹಿಳೆಯರಿಗೆ ಹಣ ಜಮಾ
•ಗೃಹ ಲಕ್ಷ್ಮಿ ಯೋಜನೆಯಡಿ ಹಣ ಜಮಾ ಆಗದೆ ಇದ್ದರೆ, ಮೊದಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

Join Nadunudi News WhatsApp Group

•ಇಲಾಖೆಯವರು ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ ಹಣ ಬಂದಿಲ್ಲ ಎನ್ನುವ ಬಗ್ಗೆ ತಿಳಿಸುತ್ತಾರೆ. ಇದರ ನಂತರ ನೀವು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡು ನಿಮ್ಮ ಖಾತೆಗೆ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದು.

•ಸಿಡಿಪಿಒ ಕಚೇರಿಯಲ್ಲಿ ನಿಮ್ಮ ಅರ್ಜಿ ಅನುಮೋದನೆ ಬಾಕಿಯಿದ್ದರೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇದರ ನಂತರ, ನಿಮ್ಮ ಖಾತೆಗೆ KYC ಪ್ರಕ್ರಿಯೆಯು ಪೂರ್ಣಗೊಂಡರೆ, ಬಾಕಿ ಇರುವ ಮೊತ್ತವನ್ನು ಸಹ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Gruha Lakshmi Scheme Status Check
Image Credit: Krishijagran

•ಮುಖ್ಯವಾಗಿ ಗೃಹ ಲಕ್ಷ್ಮಿ ಅರ್ಜಿದಾರರು KYC , Aadhar Link , ಹಾಗೂ NPCI Link ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು.

•ಇನ್ನು ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದಾರೆ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆದರೆ ಆ ಖಾತೆಗೆ ಹಣ ನೇರವಾಗಿ ಜಮಾ ಆಗಲಿದೆ.

Join Nadunudi News WhatsApp Group