Gruha Lakshmi: ಗೃಹಲಕ್ಷ್ಮಿ ಹಣ ಬೇಕಾದರೆ ತಕ್ಷಣ ಈ ಕೆಲಸ ಮಾಡಿ, ಈ ಕೆಲಸ ಮಾಡದಿದ್ದರೆ ಸಿಗಲ್ಲ ಗೃಹಲಕ್ಷ್ಮಿ 2000 ರೂ.
ಗೃಹಲಕ್ಷ್ಮಿ ಹಣ ಬೇಕಾದರೆ ತಕ್ಷಣ ಈ ಕೆಲಸ ಮಾಡಿ, ಹೊಸ ನಿಯಮ ಜಾರಿ
Gruha Lakshmi Latest Update: ಪ್ರಸ್ತುತ ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರ ಖಾತೆಗೆ 7 ಕಂತುಗಳ ಹಣ ಯಶಸ್ವಿಯಾಗಿ ಜಮಾ ಆಗಿದೆ. ಆದರೆ ಗೃಹ ಲಕ್ಷ್ಮಿ ಯೋಜನೆಯಲ್ಲಿನ ಸಮಸ್ಯೆ ಏನೆಂದರೆ, ಈವರೆಗೆ ಈ ಯೋಜನೆಯಡಿ ಕೇವಲ 90 % ಮಹಿಳೆರಿಗೆ ಮಾತ್ರ ಯೋಜನನೆಯ ಹಣ ಅಮ ಆಗಿದೆ. ಇನ್ನೂ ಕೂಡ 10 % ಪ್ರತಿಶತದಷ್ಟು ಜನರಿಗೆ ಹಣ ಜಮಾ ಆಗುವುದು ಬಾಕಿದೆ ಇದೆ.
ಆದಷ್ಟು ಬೇಗ ಮಹಿಳೆಯರ ಖಾತೆಗೆ ಹಣ ಜಮಾ ಮಾಡುವುದಾಗಿ ಸರ್ಕಾರ ಸೂಚಿಸಿದೆ. ಇದಕ್ಕಾಗಿ ಸರ್ಕಾರ ಹೊಸ ಹೊಸ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇನ್ನೂ ನೀವು ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ ಯಾವುದೇ ಕಂತಿನ ಹಣವನ್ನು ಪಡೆಯದಿದ್ದರೆ ತಕ್ಷಣೆ ಈ ಕೆಲಸಗಳನ್ನು ಮುಗಿಸಿಕೊಳ್ಳಿ. ಈ ಕೆಲಸಗಳು ಪೂರ್ಣಗೊಂಡರೆ ನಿಮ್ಮ ಖಾತೆಗೆ ಹಣವು ಯಾವುದೇ ತೊಂದರೆ ಇಲ್ಲದೆ ಜಮಾ ಆಗುತ್ತದೆ.
![Gruha Lakshmi New Update](https://nadunudi.in/wp-content/uploads/2024/04/Gruha-Lakshmi-New-Update.jpg)
ಗೃಹಲಕ್ಷ್ಮಿ ಹಣ ಬೇಕಾದರೆ ತಕ್ಷಣ ಈ ಕೆಲಸ ಮಾಡಿ
•ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ KYC ಅಪ್ಡೇಟ್ ಅನ್ನು ಕಡ್ಡಾಯಗಳಿಸಿದೆ. KYC ನವೀಕರಣ ಆಗದ ಮಹಿಳೆಯರ ಖಾತೆಗೆ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ. ನೀಡಿರುವ ಬ್ಯಾಂಕ್ ಖಾತೆಗೆ ನೀವು ಮತ್ತೆ KYC ಮಾಡಬೇಕು. ಅಂದರೆ ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಮಾಡಿ ನಂತರ ಹಣ ಜಮೆಯಾಗುತ್ತದೆ.
•ಇನ್ನು KYC Update ನ ಜೊತೆಗೆ NPCI Link ಕೂಡ ಅಗತ್ಯವಾಗಿದೆ. ಫಲಾನುಭವಿಗಳು ತಕ್ಷಣ NPCI ಲಿಂಕ್ ಮಾಡಬೇಕಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಬಹುದು.
•ಇನ್ನು ನಿಮ್ಮ ಮೊಬೈಲ್ ನಂಬರ್ ಗೆ ಬ್ಯಾಂಕ್ ಅಕೌಂಟ್ ಹಗೂ ಆಧಾರ್ ಲಿಂಕ್ ಆಗುವುದು ಕೂಡ ಮುಖ್ಯವಾಗಿದೆ. ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಆಗದೆ ಇದ್ದರೆ ನಿಮ್ಮ ಖಾತೆಗೆ ಯೋಜನೆಯ ಹಣ ಜಮಾ ಆಗಿದೆಯಾ ಅಥವಾ ಇಲ್ಲವ ಎನ್ನುವ ಬಗ್ಗೆ ನಿಮಗೆ ಸಂದೇಶ ರವಾನೆ ಆಗುವುದಿಲ್ಲ.
•ಇನ್ನು ಅರ್ಜಿ ಸಲ್ಲಿಕೆಯ ವೇಳೆ ನೀವು ನೀಡಿದ ಬ್ಯಾಂಕ್ ಅಕೌಂಟ್ ಸರಿಯಾಗಿದೆಯೇ ಎನ್ನುವುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ನಿಮ್ಮ ಖಾತೆ ಕ್ಲೋಸ್ ಆಗಿದ್ದರೆ ಹಣ ಜಮಾ ಆಗುವುದು ಕಷ್ಟ.
![Gruha Lakshmi Yojana Latest](https://nadunudi.in/wp-content/uploads/2024/04/Gruha-Lakshmi-Yojana-Latest.jpg)