Gruha Lakshmi: ಈ ಮಹಿಳೆಯರಿಗೆ ಸಿಗಲಿದೆ ಗೃಹಲಕ್ಷ್ಮಿ 6000 ರೂ, ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್.

ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ 6000 ರೂ. ಹಣ ಜಮಾ ಮಾಡುವುದಾಗಿ ಸರ್ಕಾರ ಘೋಷಿಸಿದೆ.

Gruha Lakshmi New Update: ಕರ್ನಾಟಕ ಸರ್ಕಾರ ಮಹಿಳಾ ಮತ್ತು ಕಲ್ಯಾಣ ಇಲಾಖೆ ವತಿಯಿಂದ ಗೃಹಿಣಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣವನ್ನು ನೇರ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ನಾನಾ ಕಾರಣಗಳಿಂದ ಕಳೆದ ಆರು ತಿಂಗಳಿಂದ ಲಕ್ಷಗಟ್ಟಲೆ ಮಹಿಳೆಯರಿಗೆ ಗೃಹಲಕ್ಷ್ಮಿ ಭಾಗ್ಯ ಲಭಿಸಿಲ್ಲ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಹಣ ಸಿಗದೇ ಇರುವವರು ಹಾಗೂ ಕೆಲ ಕಂತುಗಳು ಹಣ ಸಿಗದವರ ಮಾಹಿತಿಯನ್ನು ಸರ್ಕಾರ ಪಡೆದುಕೊಂಡಿದೆ. ಅಂತವರ ಸಮಸ್ಯೆಗೆ ಸರ್ಕಾರ ಮುಂದಾಗಿದೆ. ಸದ್ಯ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ 6000 ರೂ. ಹಣ ಜಮಾ ಮಾಡುವುದಾಗಿ ಸರ್ಕಾರ ಘೋಷಿಸಿದೆ.

Gruha Lakshmi New Update
Image Credit: Star Of Mysore

ಗೃಹ ಲಕ್ಷ್ಮಿ ಹಣ ಜಮಾ ಆಗದ ಮಹಿಳೆಯರೇ ಈ ಮಾಹಿತಿ ತಿಳಿದುಕೊಳ್ಳಿ
•ಬ್ಯಾಂಕ್‌ ಗಳಲ್ಲಿ ಖಾತೆ ಹೊಂದಿದ್ದರೆ ಮತ್ತು ಹಲವು ವರ್ಷಗಳಿಂದ ಖಾತೆ ಸಕ್ರಿಯವಾಗಿಲ್ಲದಿದ್ದರೆ ಅಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಠೇವಣಿ ಆಗಿರುವುದಿಲ್ಲ.

•ಬ್ಯಾಂಕ್ ಖಾತೆಗಳಲ್ಲಿ ದೋಷ ಕಂಡುಬಂದರೆ, ಅಂಚೆ ಇಲಾಖೆ ಮೂಲಕ ಹೊಸ ಖಾತೆ ತೆರೆಯಲು ಮತ್ತು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.

•ಗೃಹ ಲಕ್ಷ್ಮಿ ಯೋಜನೆಯ ಹಣ ಯಾರ ಖಾತೆಗೆ ಜಮಾ ಆಗುತ್ತಿಲ್ಲವೋ ಅವರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

Join Nadunudi News WhatsApp Group

•ಬ್ಯಾಂಕ್ ಖಾತೆ ಜತೆಗೆ ಇಕೆವೈಸಿ ಕೊರತೆಯಿಂದ ಹಣ ಪಾವತಿಯಾಗದಿದ್ದರೆ ಅಂತಹ ಖಾತೆಗಳನ್ನು ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.

•ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಖಾತೆಗಳಿಗೆ Aadhaar Seeding, NPCI Mapping ಕಡ್ಡಾಯವಾಗಿದೆ. ಈ ಕೆಲಸ ಮಾಡದೇ ಇರುವವರೂ ಕೆವೈಸಿ ಸಂಬಂಧಿತ ಕೆಲಸ ಮಾಡುತ್ತಿದ್ದಾರೆ.

•ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಗೃಹಿಣಿಯರ ಜೊತೆ ನಿಂತು ಅವರ ಸಮಸ್ಯೆ ನಿವಾರಿಸಿ ಹಣ ಜಮಾ ಮಾಡಿಕೊಡುವಂತೆ ಸರ್ಕಾರ ಸೂಚಿಸಿದೆ.

Gruha Lakshmi Money Credit
Image Credit: News Guru Kannada

ಈ ಮಹಿಳೆಯರಿಗೆ ಸಿಗಲಿದೆ ಗೃಹಲಕ್ಷ್ಮಿ 6000 ರೂ.
ಮೇಲೆ ನೀಡಲಾದ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಯೋಜನೆಗಳ ಎಲ್ಲ ಕಂತುಗಳ ಹಣವನ್ನು ಸರ್ಕಾರ ಒಂದೇ ಬಾರಿಗೆ ಜಮಾ ಮಾಡಲಿದೆ. ಅಂಗನವಾಡಿ ಕಾರ್ಯಕರ್ತರು ಅಥವಾ ಆಶಾ ಕಾರ್ಯಕರ್ತರ ಬಳಿ ಹೋಗಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಎಲ್ಲ ಸಮಸ್ಯೆ ಸರಿಯಾದರೆ ರಾಜ್ಯ ಸರ್ಕಾರ ಒಮ್ಮೆಲೇ ನಿಮ್ಮ ಖಾತೆಗೆ 6000 ರೂ ಹಣವನ್ನು ಜಮಾ ಮಾಡುತ್ತದೆ. ಗೃಹ ಲಕ್ಷ್ಮಿ ಯೋಜನೆಯ ಸಮಸ್ಯೆ ಪರಿಹಾರವಾದರೆ ಒಟ್ಟಿಗೆ ನೀವು ಎಲ್ಲ ಕಂತುಗಳ ಹಣವನ್ನು ಪಡೆಯಬಹುದು.

Join Nadunudi News WhatsApp Group