Gruha Lakshmi Rule: ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವ ಮಹಿಳೆಯರಿಗೆ ಬಿಗ್ ಅಪ್ಡೇಟ್, 4 ಹೊಸ ರೂಲ್ಸ್.

ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವ ಮಹಿಳೆಯರಿಗೆ ನಾಲ್ಕು ಹೊಸ ರೂಲ್ಸ್

Gruha Lakshmi New 4 Rules: ರಾಜ್ಯ ಸರ್ಕಾರ ಮಹಿಳಾ ಸಬಲೀಕರರಣಕ್ಕಾಗಿ ಜಾರಿಗೊಳಿಸಿದ ಯೋಜನೆಗಳಲ್ಲಿ Gruha Lakshmi ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಅರ್ಹ ಫಲಾನುಭವಿಗಳು ಮಾಸಿಕ 2000 ರೂ ಹಣವನ್ನು ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಗೃಹ ಲಕ್ಷ್ಮಿ ಅರ್ಹ ಫಲಾನುಭವಿಗಳು ಈಗಾಗಲೇ 5 ಕಂತಿನ ಹಣವನ್ನು ಪಡೆದಿದ್ದಾರೆ. ಗೃಹಿಣಿಯರು ಒಟ್ಟಾಗಿ ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ 10 ಸಾವಿರ ರೂ ಹಣವನ್ನು ಪಡೆದುಕೊಂಡಿದ್ದಾರೆ.

Gruha Lakshmi New 4 Rules
Image Credit: Hindustantimes

ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವ ಮಹಿಳೆಯರಿಗೆ ಬಿಗ್ ಅಪ್ಡೇಟ್
ಇನ್ನು ಫೆಬ್ರವರಿ ಮೊದಲ ವಾರದಲ್ಲಿ ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಬಿಡುಗಡೆಯಾಗುವುದಾಗಿ ಮಾಹಿತಿ ಲಭಿಸಿದೆ. ಈಗಾಗಲೇ ಕೆಲ ಮಹಿಳೆಯರ ಖಾತೆಗೆ ಆರನೇ ಕಂತಿನ ಹಣ ಜಮಾ ಆಗಿರಬಹದು. ಸದ್ಯ ರಾಜ್ಯ ಸರ್ಕಾರ 6 ನೇ ಕಂತಿನ ಹಣ ಬಿಡುಗಡೆಗೂ ಮುನ್ನ ಹೊಸ ರೂಲ್ಸ್ ಜಾರಿಗೊಳಿಸಿದೆ. ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಫಲಾನುಭವಿಗಳು ನಿಯಮವನ್ನು ಪಾಲಿಸಿದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನಾಲ್ಕು ಹೊಸ ರೂಲ್ಸ್
•ಗೃಹ ಲಕ್ಷ್ಮಿ ಪಾಲನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. National Payment Corporation of India (NPCI) ಇನ್ನು ಮುಂದೆ ಪ್ರತಿಯೊಬ್ಬರೂ NPCI ಮಾಡಬೇಕು. ನಿಮ್ಮ ಹತ್ತಿರದ ಬ್ಯಾಂಕ್‌ ಗೆ ಭೇಟಿ ನೀಡುವ ಮೂಲಕ NPCI ಅನ್ನು ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ. ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಪಡೆಯಲು NPCI ಕಡ್ಡಾಯವಾಗಿದೆ.

NPCI Mandatory For Gruha Lakshmi
Image Creditr: News Next Live

•ಇನ್ನು ಗೃಹ ಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಮುಖ್ಯವಾಗಿ Aadhaar E -KYC ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ DBT ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

•ಇನ್ನು ನಿಮ್ಮ Ration Card ಗೆ ನಿಮ್ಮ Aadhar Card Link ಆಗದೆ ಇದ್ದರು ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಆಧಾರ್ ಲಿಂಕ್ ಆಗದೆ ಇದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕಿದೆ.

Join Nadunudi News WhatsApp Group

•ಇನ್ನು ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದೆ. ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗೇ ಹಣ ಜಮಾ ಮಾಡಲು ಸಾದ್ಯವಾಗುವಿಲ್ಲ. ಹೀಗಾಗಿ ಬ್ಯಾಂಕ್ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಅಗತ್ಯವಾಗಿದೆ.

Join Nadunudi News WhatsApp Group