Gruha Lakshmi: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್, ಈ ತಿಂಗಳ ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ.

ಈ ತಿಂಗಳ ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ.

Gruha Lakshmi 8th Installment: ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದಿನಕ್ಕೊಂದು ಅಪ್ಡೇಟ್ ಬಿಡುಗಡೆ ಮಾಡುತ್ತಿದೆ. ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಯೋಜನೆ ಅನುಷ್ಠಾನಗೊಂಡು ಸತತ 8 ತಿಂಗಳು ಕಳೆದಿದೆ. ಅರ್ಹ ಅಭ್ಯರ್ಥಿಗಳು ಇಲ್ಲಿವರೆಗೆ 8 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ.

ಗೃಹ ಲಕ್ಷ್ಮಿ ಯೋಜನೆ ಸರಿಸುಮಾರು 90 ಪ್ರತಿಶತ ಅರ್ಹರಿಗೆ ತಲುಪಿದೆ. ಇನ್ನು 10 % ಪ್ರತಿಶತದಷ್ಟು ಮಹಿಳೆಯರಿಗೆ ದಾಖಲೆ ಹಾಗೂ ತಾಂತ್ರಿಕ ದೋಷದ ಕಾರಣ ಅರ್ಹರಿಗೆ ತಲುಪಿಲ್ಲ ಎನ್ನಬಹುದು. ಇನ್ನು ಆದಷ್ಟು ಬೇಗ ಎಲ್ಲ ಅರ್ಹರಿಗೂ ಹಣವನ್ನು ತಲುಪಿಸಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.

Gruha Lakshmi Latest Update
Image Credit: Hindustantimes

ಈ ತಿಂಗಳ ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ
ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಸಮಸ್ಯೆಯೇ ಪರಿಹಾರಕ್ಕೆ ಈಗಾಗಲೇ ವಿವಿಧ ರೀತಿಯ ಕ್ರಮ ಕೈಗೊಂಡಿದೆ. ಆದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನಬಹುದು. ಇನ್ನು ಯೋಜನೆಯ ಲಾಭ ಯಾರ ಖಾತೆಗೆ ಜಮಾ ಆಗುತ್ತಿದೆಯೋ ಅಂತವರಿಗೆ ಸರ್ಕಾರ ಮಾಸಿಕ ಹಣ ಬಿಡುಗಡೆ ಮಾಡುತ್ತಲೇ ಇದೆ. ರಾಜ್ಯದಲ್ಲಿ 80 % ಮಹಿಳೆಯರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು.

ಸದ್ಯ ರಾಜ್ಯ ಸರ್ಕಾರ 8 ನೇ ಕಂತಿನ ಹಣ ಬಿಡುಗಡೆಗೆ ಮಾಡಿದೆ. ಯೋಜನೆಯ ಫಲಾನುಭವಿಗಳು ಈ ತಿಂಗಳಿನಲ್ಲಿ 8 ನೇ ಕಂತಿನ ಹಣವನ್ನು ತಮ್ಮ ಖಾತೆಯಲ್ಲಿ ಜಮಾ ಮಾಡಿಸಿಕೊಂಡಿದ್ದಾರೆ. ಕೆಲವು ಮಹಿಳೆಯರಿಗೆ ಫೆಬ್ರವರಿ ತಿಂಗಳಿನಲ್ಲೇ 8 ಕಂತಿನ ಹಣ ಬಿಡುಗಡೆಯಾಗಿದೆ. ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರು 16,000 ರೂ ಹಣವನ್ನು ಪಡೆದುಕೊಂಡಿದ್ದಾರೆ ಎನ್ನಬಹುದು. ಈ ತಿಂಗಳು ನಿಮ್ಮ ಖಾತೆಗೆ ಗೃಹ ಲಕ್ಷ್ಮಿ 8 ನೇ ಕಂತಿನ ಹಣ ಜಮಾ ಆಗಿರಬಹುದು. ತಕ್ಷಣ ಚೆಕ್ ಮಾಡಿಕೊಳ್ಳುವುದು ಉತ್ತಮ.

Gruha Lakshmi Scheme 2024
Image Credit: Kannada News

ಗೃಹಲಕ್ಷ್ಮಿ ಹಣ ಖಾತೆಗೆ ಹಣ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಚೆಕ್ ಮಾಡಿ
•ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಲು ಮೊದಲು DBT Karnataka App ಅನ್ನು Download ಮಾಡಿಕೊಳ್ಳಬೇಕು.

Join Nadunudi News WhatsApp Group

•ಅಪ್ಲಿಕೇಶನ್ Download ಮಾಡಿದ ನಂತರ, ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ, ಫಲಾನುಭವಿಯ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಈ ಅಪ್ಲಿಕೇಶನ್‌ ಗೆ ಹಾಕಿ Login ಮಾಡಲು 4-ಅಂಕಿಯ Password ರಚಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ.

•ಲಾಗಿನ್ ಆದ ನಂತರ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು “ಗೃಹ ಲಕ್ಷ್ಮಿ” ಹೆಸರಿನ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಗೃಹಲಕ್ಷ್ಮಿ ಹಣವು ಯಾವ ದಿನದಂದು ನಿಮಗೆ ಜಮಾ ಆಗಿದೆ ಹಾಗೆಯೆ UTR ಸಂಖ್ಯೆ ಇತರ ಸಂಪೂರ್ಣ ವಿವರಗಳನ್ನು ತೋರಿಸುತ್ತದೆ.

Gruha Lakshmi Latest News
Image Credit: Kannadanews

Join Nadunudi News WhatsApp Group