Gruha Lakshmi: ಗೃಹ ಲಕ್ಷ್ಮಿ 2000 ಜಮಾ ಮಾಡಲು ಸರ್ಕಾರದಿಂದ ಹೊಸ ಪ್ಲಾನ್, ಸಂತಸದಲ್ಲಿ ಮಹಿಳೆಯರು.

ಅರ್ಹರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ ತಲುಪಿಸಲು ಸರ್ಕಾರದ ಹೊಸ ವ್ಯವಸ್ಥೆ.

Gruha Lakshmi New Update: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಶೆಯ ಯೋಜನೆಯಾದ Gruha Lakshmi ಈಗಾಗಲೇ ಅನುಷ್ಠಾನಗೊಂಡು ನಾಲ್ಕು ತಿಂಗಳು ಕಳೆದಿದೆ. ಈ ಯೋಜನೆಯಡಿ ಮೂರು ತಿಂಗಳ ಮಾಸಿನ 2000 ಹಣ ಕೆಲ ಅರ್ಹರ ಖಾತೆಗೆ ಜಮಾ ಆಗಿದೆ.

ಯೋಜನೆ ಅನುಷ್ಠಾನಗೊಂಡು ನಾಲ್ಕು ತಿಂಗಳು ಕಳೆದರು ಕೂಡ ಯೋಜನೆಯ ಪೂರ್ಣ ಲಾಭ ಫಲಾನುಭವಿಗಳ ಕೈತಲುಪುತ್ತಿಲ್ಲ. ತಾಂತ್ರಿಕ ಸಮಸ್ಯೆಯ ಕಾರಣ ಈಗಲೂ ಕೂಡ ಗೃಹ ಲಕ್ಸ್ಮಿ ಯೋಜನೆಯಲ್ಲಿ ಸಾಕಷ್ಟು ಜನರು ವಂಚಿತಾಗಿದ್ದಾರೆ. ರಾಜ್ಯದ ಎಲ್ಲೆಡೆ ಗೃಹ ಲಕ್ಷ್ಮಿ ಯೋಜನೆಯ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ.

Gruha Lakshmi New Update
Image Credit: Original Source

ಗೃಹ ಲಕ್ಷ್ಮಿ ಯೋಜನೆಯ ಕುರಿತು ಹೊಸ ಘೋಷಣೆ
ಇನ್ನು ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ. ಎಲ್ಲ ರೀತಿಯ ದಾಖಲೆಗಳನ್ನು ಸರಿಪಡಿಸಿಕೊಂಡಿದ್ದರೂ ಕೂಡ ಯೋಜನೆಯ ಹಣ ಜಮಾ ಆಗುತ್ತಿಲ್ಲ. ಸರ್ಕಾರ ಅರ್ಹರ ಖಾತೆಗೆ ಹಣ ಜಮಾ ಮಾಡಲು ವಿವಿಧ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಸಾಕಷ್ಟು ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲು ಮತ್ತೊಂದು ಹೊಸ ಯೋಜನೆಯನ್ನು ಹೂಡಿದೆ. ಈ ವಿಧಾನದ ಮೂಲಕ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ಮುಂದಾಗಿದೆ.

ಗೃಹ ಲಕ್ಷ್ಮಿ 2000 ಜಮಾ ಮಾಡಲು ಸರ್ಕಾರದಿಂದ ಹೊಸ ಪ್ಲಾನ್
ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಕಚೇರಿಯಿಂದಲೇ ಹಣ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಾದಾಗಿನಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೇಂದ್ರ ಕಚೇರಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳ ಇಲಾಖೆಯ ಉಪನಿರ್ದೇಶಕರ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದೆ. ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು ಖಜಾನೆ 2 ಮೂಲಕ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತಿದ್ದಾರೆ. ಇನ್ನುಮುಂದೆ ಕೇಂದ್ರ ಕಚೇರಿಯಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾಯಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ.

Congress Government Gruha Lakshmi Scheme
Image Credit: News9 live

ಮನೆ ಬಾಗಿಲಿಗೆ ಬರಲಿದ್ದಾರೆ ಅಂಗನವಾಡಿ ಕಾರ್ಯಕರ್ತರು
ಇನ್ನು ಗೃಹ ಲ್ಕಷ್ಮಿ ಯೋಜನೆಯ ಫಲಾನುಭವಿಗಳ ಸಮಸ್ಯೆಯನ್ನು ಪರಿಹರಿಸಿ ಹಣವನ್ನು ಜಮಾ ಮಾಡಲು ಸರ್ಕಾರ ಹೊಸ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರನ್ನು ಯೋಜನೆಗೆಂದು ಕೆಲಸ ಮಾಡಲು ಪ್ರೇರೇಪಿಸುತ್ತಿದೆ. ರಾಜ್ಯ ಸಾರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರನ್ನು ಗೃಹ ಭೇಟೆಗೆ ಸೂಚಿಸಿದ್ದಾರೆ. ಈ ಮೂಲಕ ಇನ್ನು ಖಾತೆಗೆ ಹಣ ಜಮಾ ಆಗದವರ ಸಮಸ್ಯೆಯನ್ನು ಪರಿಹರಿಸಿ ಆದಷ್ಟು ಬೇಗ ಹಣ ಜಮಾ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

Join Nadunudi News WhatsApp Group

Join Nadunudi News WhatsApp Group