Gruha Lakshmi Benefit : ಅತ್ತೆ ಜೊತೆಗೆ ಸೊಸೆಗೂ ಸಿಗುತ್ತಾ ಗೃಹಲಕ್ಷ್ಮಿ ಯೋಜನೆಯ ಹಣ, ಸ್ಪಷ್ಟನೆ ನೀಡಿದ ಸರ್ಕಾರ.

ಅತ್ತೆ ಜೊತೆಗೆ ಸೊಸೆಗೂ ಸಿಗುತ್ತಾ ಗೃಹಲಕ್ಷ್ಮಿ ಯೋಜನೆಯ ಹಣ...? ಸರ್ಕಾರದಿಂದ ಸ್ಪಷ್ಟನೆ

Gruha Lakshmi Latest Update: ರಾಜ್ಯದಲ್ಲಿ ಈಗಾಗಲೇ ಗೃಹ ಲಕ್ಷ್ಮಿ (Gruha Lakshmi) ಯೋಜನೆಯು ಅನುಷ್ಠಾನಗೊಂಡಿದ್ದು, ಆರು ತಿಂಗಳು ಕಳೆದಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಅರ್ಹ ಫಲಾನುಭವಿಗಳು ಈಗಾಗಲೇ 5 ಕಂತಿನ ಹಣವನ್ನು ಪಡೆದಿದ್ದಾರೆ. ಗೃಹಿಣಿಯರು ಒಟ್ಟಾಗಿ ಈವರೆಗೆ ಗೃಹ ಲಕ್ಷ್ಮಿ ಯೋಜನೆಯಡಿ 10 ಸಾವಿರ ರೂ ಹಣವನ್ನು ಪಡೆದುಕೊಂಡಿದ್ದಾರೆ.

ಇನ್ನು ಫೆಬ್ರವರಿಯಲ್ಲಿ 6 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ. ಫೆಬ್ರವರಿ -ಮಾರ್ಚ್ ನಲ್ಲಿ ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಬಿಡುಗಡೆಯಾಗುವುದಾಗಿ ಮಾಹಿತಿ ಲಭಿಸಿದೆ. ಸದ್ಯ ಗೃಹ ಲಕ್ಷ್ಮಿ ಯೋಜನೆಯ ಕುರಿತಾಗಿ ಹೊಸ ಪ್ರಶ್ನೆ ಹುಟ್ಟಿಕೊಂಡಿದೆ. ಹೌದು ಅತ್ತೆಯ ಜೊತೆಗೆ ಸೊಸೆಗೂ ಗೃಹಲಕ್ಷ್ಮಿ ಹಣ ಸಿಗುತ್ತಾ ಅನ್ನುವ ಪ್ರಶ್ನೆ ಈಗ ಮಹಿಳೆಯರಲ್ಲಿ ಹುಟ್ಟಿಕೊಂಡಿದೆ.

Gruha Lakshmi Latest News Update
Image Credit: Original Source

ಅತ್ತೆ ಜೊತೆಗೆ ಸೊಸೆಗೂ ಸಿಗುತ್ತಾ ಗೃಹಲಕ್ಷ್ಮಿ ಯೋಜನೆಯ ಹಣ
ಸಾಮಾನ್ಯವಾಗಿ ಗೃಹ ಲಕ್ಷ್ಮಿ ಯೋಜನೆಯ ಲಾಭ ಮನೆಯ ಹಿರಿಯರು, ಅಂದರೆ ಅತ್ತೆಗೆ ಲಭಿಸುತ್ತಿದೆ. ರೇಷನ್ ಕಾರ್ಡ್ ನಲ್ಲಿ ಯಾವ ಸದಸ್ಯೆ ಮುಖ್ಯವಾಗಿರುತ್ತಾರೋ ಅಂತವರಿಗೆ ಮಾಸಿಕ 2000 ರೂ ಹಣ ಜಮಾ ಆಗುತ್ತಿದೆ. ಇನ್ನು ಮನೆಯ ಯಜಮಾನಿ (ಅತ್ತೆ) ಮರಣ ಹೊಂದಿದರೆ ಯೋಜನೆಯ ಹಣ ಸೊಸೆಯ ಖಾತೆಗೆ ಜಮಾ ಆಗುತ್ತದಾ..? ಎನ್ನುವುದು ಸರ್ಕಾರದ ಪ್ರಶ್ನೆಯಾಗಿದೆ. ಜನರ ಈ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಿದೆ.

ಮನೆಯ ಯಜಮಾನಿ ಅಂದರೆ ಅತ್ತೆ ಮರಣ ಹೊಂದಿದ ಸಮಯದಲ್ಲಿ ಸೊಸೆಯು ಇನ್ನೊಮ್ಮೆ ಅರ್ಜಿ ಸಲ್ಲಿಸಿದರೆ ಮಾಸಿಕ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ರೇಷನ್ ಕಾರ್ಡ್ ನಲ್ಲಿ ಅತ್ತೆಯ ಸ್ಥಾನದಲ್ಲಿ ಸೊಸೆಯನ್ನು ಯಜಮಾನಿಯಾಗಿ ತಿದ್ದುಪಡಿ ಮಾಡಬೇಕಾಗುತ್ತದೆ. ಹಾಗೆಯೆ ಅತ್ತೆ ಮರಣ ಹೊಂದಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿ ಅರ್ಜಿ ಸಲ್ಲಿಸುವುದು ಅಗತ್ಯ. ಅತ್ತೆ ಮರಣ ಹೊಂದಿರುವುದು ಖಚಿತವಾದರೆ ನಿಮ್ಮ ಅರ್ಜಿ ಸಲ್ಲಿಕೆ ಸ್ವೀಕಾರವಾಗಿ ಗ್ರಹ ಲಕ್ಷ್ಮಿ ಯೋಜನೆಯ ಹಣ ಸೊಸೆಯ ಖಾತೆಗೆ ತಲುಪುತ್ತದೆ.

Gruha lakshmi Scheme Money
Image Credit: Ainlivenews

ಗೃಹ ಲಕ್ಷ್ಮಿ ಮಾಸಿಕ 2000 ಪಡೆಯಲು ಈ ಕೆಲಸಗಳನ್ನು ಪೂರ್ಣಗೊಳಿಸಿ
ಗೃಹ ಲಕ್ಷ್ಮಿ ಪಲನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಇನ್ನು ಮುಂದೆ ಪ್ರತಿಯೊಬ್ಬರೂ National Payment Corporation of India (NPCI) ಮಾಡಬೇಕು.ಇನ್ನು ಮಾಸಿಕ 2000 ರೂ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಮುಖ್ಯವಾಗಿ Aadhaar E -KYC ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ DBT ಮೂಲಕ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

Join Nadunudi News WhatsApp Group

ಇನ್ನು ನಿಮ್ಮ Ration Card ಗೆ ನಿಮ್ಮ Aadhar Card Link ಆಗದೆ ಇದ್ದರು ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಆಧಾರ್ ಲಿಂಕ್ ಆಗದೆ ಇದ್ದರೆ ಕೂಡಲೇ ಸರಿಪಡಿಸಿಕೊಳ್ಳಬೇಕಿದೆ. ಇನ್ನು ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದೆ. ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗೇ ಹಣ ಜಮಾ ಮಾಡಲು ಸಾದ್ಯವಾಗುವಿಲ್ಲ. ಹೀಗಾಗಿ ಬ್ಯಾಂಕ್ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಅಗತ್ಯವಾಗಿದೆ.

Join Nadunudi News WhatsApp Group