Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ 4 ನೇ ಕಂತಿನ ಹಣ ಬಿಡುಗಡೆ, ಈ ರೀತಿಯಲ್ಲಿ ಚೆಕ್ ಮಾಡಿಕೊಳ್ಳಿ

ಮಹಿಳೆಯರೇ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ನಿಮ್ಮ ಖಾತೆ ಸೇರಿದೆಯೇ ಎಂದು ತಿಳಿಯಲು ಈ ರೀತಿಯ ಸುಲಭ ವಿಧಾನ ಬಳಸಿ

Gruha Lakshmi Scheme 4th Installment: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳುಗಳು ಕಳೆದಿದ್ದು, ಈಗ ನಾಲ್ಕನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಜಿಲ್ಲೆಯರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ಹಲವು ಅರ್ಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗದ ಕುರಿತು ಸರ್ಕಾರ ನಿಯಮಗಳನ್ನು ಜಾರಿಗೆ ತಂದಿದ್ದು, ತಂತ್ರಿಕ ದೋಷಗಳನ್ನು ಸರಿಪಡಿಸುವುದರ ಜೊತೆಗೆ ಇನ್ನಿತರ ಸಮಸ್ಯೆಗಳನ್ನು ಸರಿಪಡಿಸಲು ಕ್ಯಾಂಪ್ ಗಳನ್ನೂ ಆಯೋಜಿಸಲಾಗಿತ್ತು. ಯಾವ ಮಹಿಳೆಗೆ ಗೃಹಲಕ್ಷ್ಮಿ ಹಣ ಇನ್ನು ಸಿಕ್ಕಿಲ್ಲವೋ, ಅಂತವರಿಗೆ ನಾಲ್ಕು ಕಂತಿನ ಸಂಪೂರ್ಣ ಹಣ ತಲುಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Gruha Lakshmi Amount Credit Updates
Image Credit: Hindustanprime

ಆಧಾರ್ ಕಾರ್ಡ್ ಬಳಸಿ ಗೃಹಲಕ್ಷ್ಮಿ ಹಣ ಬಂದಿರುವ ಕುರಿತು ಚೆಕ್ ಮಾಡಿಕೊಳ್ಳಿ

ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಬಹಳ ಅನುಕೂಲಕರ ಆಗಿದ್ದು, ಸರ್ಕಾರ ನಾಲ್ಕನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿದೆ. ಈಗಾಗಲೇ ಗೃಹಲಕ್ಷ್ಮಿ ಹಣ 26 ಜಿಲ್ಲೆಗಳಲ್ಲಿ ಬಿಡುಗಡೆಗೊಂಡಿದ್ದು, ಮೊದಲ ಹಂತದಲ್ಲಿ 15 ಜಿಲ್ಲೆಗಳಲ್ಲಿ ಹಣ ಬಿಡುಗಡೆಗೊಳಿಸಲಾಗಿತ್ತು. ಇದೀಗ ಜನವರಿ 03 ರಂದು 26 ಜಿಲ್ಲೆಗಳಲ್ಲಿ ಹಣ ಸಂಪೂರ್ಣವಾಗಿ ಸಂದಾಯ ಆಗಿದೆ. ಹಾಗೆಯೆ ಉಳಿದ ಜಿಲ್ಲೆಗಳಲ್ಲಿ ಆದಷ್ಟು ಶೀಘ್ರದಲ್ಲಿ ಹಣ ಸದಾಯ ಆಗಲಿದೆ ಎಂದು ಸರ್ಕಾರ ತಿಳಿಸಿದೆ. ಅಷ್ಟೇ ಅಲ್ಲದೇ ಈಗ ಮಹಿಳೆಯರು ಆಧಾರ ಕಾರ್ಡ್ ಸಂಖ್ಯೆ ನಮೂದಿಸಿ ಹಣ ಬಂದಿರುವ ಕುರಿತು ಚೆಕ್ ಮಾಡಿಕೊಳ್ಳಬಹುದಾಗಿದೆ.

Gruha Lakshmi Scheme 4th Installment
Image Credit: Karnataka Times

ಗೃಹಲಕ್ಷ್ಮಿ ಹಣ ಬಂದಿರುವ ಕುರಿತು ಚೆಕ್ ಮಾಡುವ ವಿಧಾನ

Join Nadunudi News WhatsApp Group

ಸರ್ಕಾರ ಗೃಹಲಕ್ಷ್ಮಿ ಯೋಜನೆ ಪ್ರಾರಂಭ ಮಾಡಿ ಮೊದಲ ಕಂತಿನ ಹಣ ಬಿಡುಗಡೆ ಮಾಡಿದ ನಂತರ, ಡಿಬಿಟಿ ಕರ್ನಾಟಕ ಎನ್ನುವ ಅಪ್ಲಿಕೇಶನ್ ಅನ್ನು ಪರಿಚಯಿಸಿತು, ಆದರೆ ಈ ಅಪ್ಲಿಕೇಶನ್ ಪ್ರಾರಂಭದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ, ಆದರೆ ಈಗ ಈ ಅಪ್ಲಿಕೇಶನ್ ಅನ್ನು ಸಾಕಷ್ಟು ಅಪ್ಡೇಟ್ ಮಾಡಿದ್ದೂ, ಈ ಅಪ್ಲಿಕೇಶನ್ ಸರಿಯಾಗಿ ಕೆಲಸ ಮಾಡುತ್ತಿದೆ, ಇದರ ಮೂಲಕ ಆಧಾರ್ ಕಾರ್ಡ್ ಬಳಸಿ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯಾ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

ಮೊದಲನೇದಾಗಿ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ ಡಿಬಿಟಿ ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು, ನಂತರ ಡೌನ್ಲೋಡ್ ಆದ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ. ಇದಾದ ನಂತರ ಮಹಿಳೆಯ ಆಧಾರ್ ನಂಬರ್ ಅನ್ನು ನಮೂದಿಸಬೇಕು, ಆಗ ನೋಂದಾವಣೆ ಆಗಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ, ಅದನ್ನು ಬಾಕ್ಸ್ ನಲ್ಲಿ ನಮೂದಿಸಬೇಕು. ನಂತರ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಲು ನೀವು ನಾಲ್ಕು ಪಿನ್ ಬಳಸಬೇಕಾಗುತ್ತದೆ. ನಂತರ ಇದನ್ನು ಮತ್ತೆ ವೆರಿಫಿಕೇಷನ್ ಮಾಡಿಕೊಳ್ಳಬೇಕಾಗುತ್ತದೆ. ಕೊನೆಗೆ ಸಬ್ಮಿಟ್ ಅಂತ ಕೊಟ್ಟರೆ ಪೇಮೆಂಟ್ ಪುಟ ತೆರೆದುಕೊಳ್ಳುತ್ತದೆ. ಆಗ ನಿಮ್ಮ ಖಾತೆಗೆ ಯಾವ ಕಂತಿನ ಹಣವೆಲ್ಲ ಬಂದಿದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

Join Nadunudi News WhatsApp Group