Gruha Lakshmi Cancelled: ಈ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ರದ್ದು, ಸರ್ಕಾರದ ನಿರ್ಧಾರಕ್ಕೆ ಬೇಸರ ಹೊರಹಾಕಿದ ಜನರು

ಈ ರಾಜ್ಯದಲ್ಲಿ ಜಾರಿಗೊಳಿಸಿದ್ದ ಗೃಹ ಲಕ್ಷ್ಮಿ ಯೋಜನೆಯನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ

Gruha Lakshmi Scheme Cancelled In Telangana: ಸದ್ಯ ರಾಜ್ಯ ಸರ್ಕಾರ ಜನರಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಅದರಲ್ಲೂ ರಾಜ್ಯದಲ್ಲಿ ಚುನಾವಣೆ ಹತ್ತಿರವಾದರೆ ಸಾಕಷ್ಟು ಮತದಾರರನ್ನು ಆಕರ್ಷಿಸಲು ಸಾಲು ಯೋಜನೆಗಳನ್ನು ಪರಿಚಯಿಸುವುದಾಗಿ ಘೋಷಿಸಲಾಗುತ್ತದೆ. ಇನ್ನು ಇತ್ತೀಚೆಗಷ್ಟೇ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ.

ಈ ವೇಳೆ ತೆಲಂಗಾಣ ಸರಕಾರ ಜನರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಕಾರಣ ಜನರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಹೀಗಾಗಿ ವಿವಿಧ ರಾಜ್ಯದಲ್ಲಿ ಕೂಡ ಯೋಜನೆಗಳನ್ನು ಘೋಷಿಸಲಾಗಿತ್ತು. ಆದಷ್ಟೇ ಸದ್ಯ ಈ ಜಾರಿಗೊಳಿಸಿದ್ದ ಗೃಹ ಲಕ್ಷ್ಮಿ ಯೋಜನೆಯನ್ನು ರದ್ದು ಮಾಡಲು ನಿರ್ಧರಿಸಿದೆ.

Gruha Lakshmi Scheme Cancelled In Telangana
Image Credit: Manalokam

ಈ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ರದ್ದು
ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಕಲ್ಯಾಣ ಯೋಜನೆಗಳನ್ನು ಜನರಿಗಾಗಿ ಪರಿಚಯಿಸಿದೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಸಾಕಷ್ಟು ಮಹತ್ವದ ಬದಲಾವಣೆಯನ್ನು ಮಾಡಿದ್ದಾರೆ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯನ್ನು ರದ್ದು ಗೊಳಿಸುವುದಾಗಿ ಸರ್ಕಾರ ನಿರ್ಧರಿಸಿದೆ.

ಸರ್ಕಾರದ ನಿರ್ಧಾರಕ್ಕೆ ಬೇಸರ ಹೊರಹಾಕಿದ ಜನರು
ಗೃಹಲಕ್ಷ್ಮಿ ಯೋಜನೆಯಡಿ ಹಿಂದಿನ ಸರ್ಕಾರ ರಾಜ್ಯದಲ್ಲಿ ಬಡವರಿಗೆ ಮನೆ ನಿರ್ಮಿಸಲು 3 ಲಕ್ಷ ರೂ. ನೀಡಿತ್ತು. ಕೆಲವರಿಗೆ ಅನುದಾನದ ದಾಖಲೆಗಳನ್ನೂ ನೀಡಲಾಗಿದೆ. ಇದೀಗ ಗೃಹಲಕ್ಷ್ಮಿ ರದ್ದತಿಯೊಂದಿಗೆ ಆ ದಾಖಲೆಗಳೂ ರದ್ದಾಗಲಿವೆ.

Gruha Lakshmi Scheme Telangana
Image Credit: Oneindia

ಪ್ರಸ್ತುತ ಕಾಂಗ್ರೆಸ್ ಸರಕಾರ ಪ್ರಜಾಪಾಲನ ಅಭಯ ಹಸ್ತಂ ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಪ್ರತಿ ಗ್ರಾಮದಿಂದ ಅರ್ಜಿ ಸ್ವೀಕರಿಸುತ್ತಿದ್ದಾರೆ. ರಾಜ್ಯಾದ್ಯಂತ ಆರು ಗ್ಯಾರಂಟಿಗಳಿಗೆ ಅರ್ಹರಾದವರೆಲ್ಲರೂ ಸ್ಪರ್ಧಿಸುತ್ತಿದ್ದಾರೆ ಮತ್ತು ಹೆಚ್ಚು ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ರದ್ದು ಮಾಡಿರುವ ಕಾರಣ ಜನಸಾಮಾನ್ಯರು ಬೇಸರ ಹೊರಹಾಕುತ್ತಿದ್ದಾರೆ. ಸದ್ಯ ತೆಲಂಗಾಣದಲ್ಲಿ ಗೃಹಲಕ್ಷ್ಮಿ ಯೋಜನೆ ರದ್ದಾಗಿದ್ದುನಮ್ಮ ಕರ್ನಾಟಕದಲ್ಲಿ ಕೂಡ ರದ್ದಾಗುತ್ತಾ ಎಂದು ಜನರು ಪ್ರಶ್ನೆಯನ್ನ ಕೂಡ ಕೇಳುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group