Pending Amount: ಗೃಹ ಲಕ್ಷ್ಮಿ ಯೋಜನೆಯ ಭಾಕಿ ಇರುವ ಹಣ ಬಿಡುಗಡೆ, ನಿಮ್ಮ ಖಾತೆ ಈಗಲೇ ಚೆಕ್ ಮಾಡಿಕೊಳ್ಳಿ.

ಸರ್ಕಾರ ಬಾಕಿ ಉಳಿದಿದ್ದ ಫಲಾನುಭವಿಗಳಿಗೆ ಗೃಹ ಲಕ್ಷ್ಮಿ ಯೋಜನೆಯ ಹಣವನ್ನ ಬಿಡುಗಡೆ ಮಾಡಿದೆ.

Gruha Lakshmi Scheme Pending Payment: ಕರ್ನಾಟಕ ರಾಜ್ಯದಲ್ಲಿ ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಘೋಷಣೆ ಮಾಡಿದ ಯೋಜನೆಗಳಲ್ಲಿ ಈಗಾಗಲೇ 4 ಯೋಜನೆ ಜಾರಿಗೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ Yuva Nidhi Scheme ಜಾರಿಗೆ ಬರಲಿದೆ. ಇದೀಗ ಸಿದ್ದರಾಮಯ್ಯ ಸರ್ಕಾರ ಘೋಷಣೆ ಮಾಡಿದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಜಾರಿಗೆ ಬಂದು ಈಗಾಗಲೇ 3 ತಿಂಗಳು ಕಳೆದಿದೆ.

ರಾಜ್ಯದಲ್ಲಿ 70 % ಮಹಿಳೆಯರಿಗೆ ಯೋಜನೆಯ ಹಣ ಜಮಾ ಆಗಿದ್ದರು, ಇನ್ನೂ 30 % ಮಹಿಳೆಯರಿಗೆ ಹಣ ಜಮಾ ಆಗುವುದು ಬಾಕಿ ಇದೆ. ಈ ಯೋಜನೆ ಸಂಪೂರ್ಣವಾಗಿ ಅನುಷ್ಠಾನ ಆಗಬೇಕು ಅನ್ನುವ ಉದ್ದೇಶದಿಂದ ಸರ್ಕಾರ ಪರ್ಯಾಯ ಮಾರ್ಗವನ್ನು ಹುಡುಕುತ್ತಿದೆ. ಇದೀಗ ಸರ್ಕಾರ ಬಾಕಿ ಉಳಿದಿದ್ದ ಫಲಾನುಭವಿಗಳಿಗೆ ಯೋಜನೆಯ ಹಣವನ್ನ ಬಿಡುಗಡೆ ಮಾಡಿದೆ.

Gruha Lakshmi Scheme Pending Payment
Image Credit: News Next Live

ಪೆಂಡಿಂಗ್ ಹಣ ಬಿಡುಗಡೆ ಮಾಡಿದ ಸರ್ಕಾರ
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 1.10 ಕೋಟಿ ಮಹಿಳೆಯರಿಗೆ 2000 ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಇದೀಗ ಬಾಕಿ ಉಳಿದಿದ್ದ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗಿದೆ. ಹೌದು ಗೃಹ ಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಹಲವರ ಖಾತೆಗೆ ಹಣ ಜಮಾ ಆಗಿದೆ. ನಿಮಗೆ ಹಣ ಬಂದಿದೆಯೇ ಇಲ್ಲವೇ ಎಂದು ನಿಮ್ಮ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ನಲ್ಲಿ ಚೆಕ್ ಮಾಡಿಕೊಳ್ಳಿ, ಏಕೆಂದರೆ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದ SMS ಬರದೇ ಇರಬಹುದು.

Gruha Lakshmi Scheme Latest Update
Image Credit: News Next Live

ಮೂರು ಕಂತಿನ ಹಣ ಬರದೇ ಇದ್ದವರಿಗೆ ಏಕಕಾಲಕ್ಕೆ ಆರು ಸಾವಿರ
ಹೌದು ಇದುವರೆಗೆ ಗೃಹ ಯೋಜನೆಯ ಮೂರೂ ಕಂತಿನ ಹಣ ಬರದೇ ಇದ್ದವರಿಗೆ ಏಕಕಾಲಕ್ಕೆ 6000 ರೂಪಾಯಿ ಹಣ ಹಾಕುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗಾಗಲೇ ಹೇಳಿದ್ದಾರೆ. ಈಗಾಗಲೇ 1 ಕೋಟಿ 10 ಲಕ್ಷ ಮಹಿಳೆಯರಿಗೆ ಈ ಯೋಜನೆ ತಲುಪಿದೆ. ಅಂಗನವಾಡಿ ಸಹಾಯಕಿಯರು ಪ್ರತಿ ಮನೆಗೆ ಹೋಗಿ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದ್ದರೆ ಮಹಿಳೆಯರನ್ನು ನೇರವಾಗಿ ಬ್ಯಾಂಕಿಗೆ ಕರೆದುಕೊಂಡು ಹೋಗಿ ತಾವೇ ಸ್ವತಃ ಸಮಸ್ಯೆ ಪರಿಹಾರ ಮಾಡಬೇಕೆಂದು ಸರ್ಕಾರ ಸೂಚನೆ ನೀಡಿದೆ. ಡಿಸೆಂಬರ್ ವೇಳೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಬರುವ ನಿರೀಕ್ಷೆಯಿದೆ.

Join Nadunudi News WhatsApp Group

Join Nadunudi News WhatsApp Group