Gruha lakshmi:ಈ ಮಹಿಳೆಯರ ಖಾತೆಗೆ ಮಾತ್ರ ಜಮಾ ಆಗಲಿದೆ ಗೃಹಲಕ್ಷ್ಮಿ 6 ನೇ ಕಂತಿನ ಹಣ, ಪಟ್ಟಿ ಬಿಡುಗಡೆ

ಇಂತಹ ಮಹಿಳೆಯರ ಖಾತೆಗೆ ಮಾತ್ರ ಬರಲಿದೆ ಗೃಹ ಲಕ್ಷ್ಮಿ 6 ಕಂತಿನ ಹಣ

Gruha Lakshmi Scheme 6th Installment: ರಾಜ್ಯದಲ್ಲಿ ಕೋಟ್ಯಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಇದು ಉತ್ತಮ ಯೋಜನೆಯಾಗಿ ಮಾರ್ಪಟ್ಟಿದ್ದು, ಈ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಜಮೆ ಆಗುತ್ತಿದ್ದು, ಮನೆಯ ಸಣ್ಣ ಪುಟ್ಟ ಖರ್ಚುಗಳಿಗೆ ಈ ಯೋಜನೆ ಬಹಳ ಸಹಾಯಕ ಆಗುತ್ತಿದೆ. ಸಧ್ಯಕ್ಕೆ ಈಗ ಐದು ಕಂತಿನ ಹಣ ಅಂದರೆ 10000 ಸಾವಿರ ರೂಪಾಯಿ ಮಹಿಳೆಯರ ಖಾತೆ ಸೇರಿದ್ದು ಇನ್ನು ಶೀಘ್ರದಲ್ಲೇ ಆರನೇ ಕಂತಿನ ಹಣ ಬಿಡುಗಡೆಗೆ ಸಿದ್ಧವಾಗಿದೆ.

Gruha Lakshmi Scheme Karnataka
Image Credit: News 9 Live

ಗೃಹಲಕ್ಷ್ಮಿ ಆರನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಮಾಹಿತಿ

ಐದು ಕಂತಿನ ಹಣ ಬಿಡುಗಡೆಯಲ್ಲಿ ಸರ್ಕಾರ ಯಶಸ್ವಿ ಆಗಿದ್ದು, ಇನ್ನು ಜನವರಿ 27 ,28 ರಂತೆ ಆರನೇ ಕಂತಿನ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಸರ್ಕಾರದ ಪ್ರಕಾರ ಎಲ್ಲಾ ಜಿಲ್ಲೆಗೂ ಒಮ್ಮೆಲೇ ಹಣ ಬಿಡುಗಡೆ ಮಾಡಬಹುದಾಗಿದೆ, ಆದರೆ ಆರ್ಬಿಐ ಪ್ರಕಾರ ಒಮ್ಮೆಲೇ ಅಧಿಕ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲವಾದ್ದರಿಂದ ಮಿತಿಯನ್ನು ಗಣನೆಗೆ ತೆಗೆದುಕೊಂಡು ಹಂತ ಹಂತವಾಗಿ ಹಲವು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಹಣ ಬಿಡುಗಡೆ ಮಾಡಲಾಗುತ್ತದೆ. ಫೆಬ್ರವರಿ ಮೊದಲ ವಾರದಲ್ಲೇ ಗೃಹಲಕ್ಷ್ಮಿ ಹಣ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಯನ್ನು ಸೇರಲಿದೆ.

ಗೃಹಲಕ್ಷ್ಮಿ ಮುಂದಿನ ಕಂತಿನ ಹಣ ಪಡೆಯಲು ಈ ಕೆಲಸ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ಸುಮಾರು 1.20 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಇವುಗಳಲ್ಲಿ ಸುಮಾರು 15 ಲಕ್ಷ ಮಹಿಳೆಯರ ಖಾತೆಯ E-KYC ಪೂರ್ಣ ಗೊಂಡಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು, ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಕಡ್ಡಾಯವಾಗಿ ಆಧಾರ್ ಸೀಡಿಂಗ್ ಅನ್ನು ಮಾಡಿಸಿಕೊಳ್ಳತಕ್ಕದಾಗಿದೆ. ಆಧಾರ್ ಸೀಡಿಂಗ್ ಮಾಡಿಕೊಳ್ಳದಿದ್ದರೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ನಿಮ್ಮ ಖಾತೆ ಸೇರುವುದಿಲ್ಲ. ಆಧಾರ್ ಲಿಂಕ್ ಹಾಗು EKYC ಸರಿಯಾಗಿ ಆದರೆ ನಿಮಗೆ ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಹಣ ಬರಲು ಯಾವುದೇ ತೊಂದರೆ ಆಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ಈ ಕುರಿತು ಹೆಚ್ಚಿನ ಗಮನ ಹರಿಸಿ.

Join Nadunudi News WhatsApp Group

Gruha Lakshmi Scheme Camp Update
Image Credit: Varthabharati

NPCI ಕಡ್ಡಾಯವಾಗಿದೆ

ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ NPCI ಮಾಡಿಸಿಕೊಳ್ಳತಕ್ಕದ್ದು, ಇಲ್ಲ ಅಂತಾದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ. npci ಮಾಡಲು ನೀವು ಬ್ಯಾಂಕ್ ಗೆ ಹೋಗಬೇಕು, ಅಲ್ಲಿ NPCI ಮಾಡಿಸಬೇಕೆಂದರೆ ಅಲ್ಲಿನ ಸಿಬ್ಬಂದಿಗಳು ಸಹಾಯ ಮಾಡುತ್ತಾರೆ. ಹಾಗಾಗಿ ಈ ವಾರದಲ್ಲೇ ಇದನ್ನು ಮಾಡಿಕೊಂಡರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಯಾವುದೇ ತೊಂದರೆ ಆಗುವುದಿಲ್ಲ.

Join Nadunudi News WhatsApp Group