Gruha Lakshmi: ಗೃಹ ಲಕ್ಷ್ಮಿ ಹಣ ಇನ್ನೂ ಬಂದಿಲ್ಲ ಚಿಂತಿಸುವ ಅಗತ್ಯ, ಹಣ ಜಮಾ ಮಾಡಲು ಸರ್ಕಾರದಿಂದ ಹೊಸ ಪ್ಲ್ಯಾನ್

ಗೃಹ ಲಕ್ಷ್ಮಿ ಹಣ ಇನ್ನೂ ಬಾರದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

Gruha Lakshmi Scheme Latest Update: ರಾಜ್ಯದಲ್ಲಿ ಈಗ ಗೃಹಲಕ್ಷ್ಮಿ ಯೋಜನೆಯ ತಲೆನೋವು ಹೆಚ್ಚಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಪ್ರಾರಂಭ ಆಗಿ ಐದು ತಿಂಗಳು ಕಳೆದು, ಐದು ಕಂತಿನ ಹಣ ಕೂಡ ಮಹಿಳೆಯರ ಖಾತೆ ಸೇರಿದೆ ಆದರೆ ಇನ್ನು ಒಂದು ಕಂತಿನ ಹಣ ಪಡೆಯದ ಅರ್ಹ ಮಹಿಳೆಯರ ಕಥೆ ಏನು ಎನ್ನುವುದು ಸರ್ಕಾರದ ಸಮಸ್ಯೆ ಆಗಿದೆ.

ಈ ಸಮಸ್ಯೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಿನಕ್ಕೊಂದು ಕಸರತ್ತು ನಡೆಸುತ್ತಿದೆ. ಆದರೆ ಈಗ ತಾಂತ್ರಿಕ ದೋಷದ ಪರಿಣಾಮ ಬರೋಬ್ಬರಿ 5-6 ಲಕ್ಷದಷ್ಟು ಗೃಹಲಕ್ಷ್ಮಿಯರಿಗೆ ದುಡ್ಡು ಜಮಾ ಆಗಿಲ್ಲ. ಹೀಗಾಗಿ ಗ್ರಾಮ-ಗ್ರಾಮಗಳಲ್ಲಿ ಅದಾಲತ್‌ ಗೆ ತಯಾರಾಗಿದೆ. ಆದರೆ ಅದಾಲತ್‌ಗೂ ಮುನ್ನಾ ಅಂಗನವಾಡಿ ಕಾರ್ಯಕರ್ತೆಯರು ಖುದ್ದು ಮನೆಗಳಿಗೆ ತೆರಳಿ, ತಾಂತ್ರಿಕ ದೋಷಗಳ ಕಾರಣ ಹುಡುಕಿ ಪೂರಕ ದಾಖಲೆ ಕಲೆಹಾಕಲಿದ್ದಾರೆ.

Gruha Lakshmi Scheme Latest Update
Image Credit: News 9 Live

ಗೃಹಲಕ್ಷ್ಮಿ ಯೋಜನೆಯ ಹಣ ಬಾರದ ಮಹಿಳೆಯರು ಹೀಗೆ ಮಾಡಿ

ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣ ಕೂಡ ಪಡೆಯದ ಮಹಿಳೆಯರು ಮೊದಲನೇದಾಗಿ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ. ಇಲ್ಲಿ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗು ಬ್ಯಾಂಕ್ ಪಾಸ್ ಬುಕ್ ಜೊತೆಗೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೀಡಿದಾಗ ಪಡೆದಿದ್ದ ಸ್ವೀಕೃತಿ ಪತ್ರವನ್ನು ತೆಗೆದುಕೊಂಡು ಹೋಗಿ ಅಲ್ಲಿ ನಿಮಗೆ ಹಣ ಬರದೇ ಇರುವ ಕುರಿತು ಮಾಹಿತಿ ನೀಡಿ ಹಾಗು ನಿಮ್ಮ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿ.

Gruha Lakshmi Scheme Karnataka
Image Credit: Krishijagran

ಗೃಹಲಕ್ಷ್ಮಿ ಯೋಜನೆಗೆ E-KYC ಕಡ್ಡಾಯವಾಗಿರುತ್ತದೆ

Join Nadunudi News WhatsApp Group

ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ E-KYC ಕಡ್ಡಾಯ ಎನ್ನುವ ಕುರಿತು ಜನ ಸಾಮ್ಯಾರಿಗೆ ಮಾಹಿತಿ ನೀಡಿದೆ. ಆದರೂ ಕೂಡ ಕೆಲವರು E-KYC ಮಾಡಿಸಿಕೊಂಡಿಲ್ಲ ಎಂದು ವರದಿ ಆಗಿದೆ. ಒಮ್ಮೆ ಬ್ಯಾಂಕ್ ಅಕೌಂಟ್ ಇಕೆವೈಸಿ ಆಗಿದ್ಯಾ ಎಂದು ಚೆಕ್ ಮಾಡಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಈ ಮೂರರಲ್ಲಿ ಇರುವ ಮಾಹಿತಿ ಸರಿ ಇದೆಯಾ ಎನ್ನುವುದನ್ನು ಕೂಡ ಚೆಕ್ ಮಾಡಿಕೊಳ್ಳಿ.ಇವೆಲ್ಲ ಸರಿ ಆದರೆ ಬಾಕಿ ಸೇರಿಸಿ ಎಲ್ಲಾ ತಿಂಗಳ ಗೃಹಲಕ್ಷ್ಮಿ ಹಣ ನಿಮ್ಮ ಖಾತೆ ಸೇರಲಿದೆ.

Join Nadunudi News WhatsApp Group