Gruha Lakshmi: ಗೃಹ ಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಬೇಕು ಅಂದರೆ ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ, ಸರ್ಕಾರದ ಆದೇಶ.

ಗೃಹ ಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಪಡೆಯಲು ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

Gruha Lakshmi Update: ರಾಜ್ಯ ಸರ್ಕಾರ ಪರಿಚಯಿಸಿರುವ ಗೃಹ ಲಕ್ಷ್ಮಿ ಯೋಜನೆ (Gruha Lakshmi Scheme) ಅನುಷ್ಠಾನಗೊಂಡಿದ್ದರು ಕೂಡ ಯೋಜನೆಯ ಲಾಭ ಇನ್ನು ಸಂಪೂರ್ಣ ಮಹಿಳೆಯರಿಗೆ ಲಭ್ಯವಾಗಿಲ್ಲ ಎನ್ನಬಹುದು. ಇನ್ನು ರಾಜ್ಯ ಸಾರ್ಕಾರ ಪರಿಚಯಿಸಿರುವ ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಕಂತುಗಳ ಹಣ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ .

ಇನ್ನೂ ಒಂದು ಕಂತಿನ ಹಣವನ್ನು ಪಡೆಯದ ಸಾಕಷ್ಟು ಮಹಿಳೆಯರಿದ್ದಾರೆ. ಕೆಲ ಮಹಿಳೆಯಯರು ಒಂದೆರಡು ಯೋಜನೆಗಳ ಹಣವನ್ನು ಪಡೆದಿದ್ದು, ಮುಂದಿನ ಕಂತಿನ ಹಣ ಅವರ ಖಾತೆಗೆ ಜಮಾ ಆಗಿಲ್ಲ. ಸದ್ಯ ಸರ್ಕಾರ ಇದೀಗ ಗೃಹ ಲಕ್ಷ್ಮಿ ಯೋಜನೆಯ ಲಾಭ ಸಿಗದ ಮಹಿಳೆಯರಿಗೆ ಬಿಗ್ ಅಪ್ಡೇಟ್ ನೀಡಿದೆ. ಇನ್ನು ಕೂಡ ಮಾಸಿಕ 2000 ರೂ ಹಣವನ್ನು ಪಡೆಯದವರು ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

Gruha Lakshmi Scheme New Update
Image Credit: News9live

ಗೃಹ ಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಬೇಕು ಅಂದರೆ ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ
•ಮುಖ್ಯವಾಗಿ ತಾಂತ್ರಿಕ ದೋಷದ ಕಾರಣ ಎಲ್ಲ ಅರ್ಹ ಫಲಾನುಭವಿಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಮಾಸಿಕ 2000 ರೂ ಹಣ ಜಮಾ ಆಗಿರುವುದಿಲ್ಲ. ಇದರ ಹೊರತಾಗಿ ಗೃಹ ಲಕ್ಷ್ಮಿ ಅರ್ಜಿದಾರರು E -KYC ಮಾಡದಿದ್ದರೆ, Aadhaar Link ಮಾಡದಿದ್ದರೆ ಯೋಜನೆಯ ಹಣ ಜಮಾ ಆಗುವುದಿಲ್ಲ. ಹೀಗಾಗಿ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಳ್ಳಿ.

•ಗೃಹ ಲಕ್ಷ್ಮಿ ಪಲನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಇನ್ನು ಮುಂದೆ ಪ್ರತಿಯೊಬ್ಬರೂ National Payment Corporation of India (NPCI) ಮಾಡಬೇಕು. ನಿಮ್ಮ ಹತ್ತಿರದ ಬ್ಯಾಂಕ್‌ ಗೆ ಭೇಟಿ ನೀಡುವ ಮೂಲಕ NPCI ಅನ್ನು ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ.

Gruha Lakshmi NPCI Mandatory
Image Credit: Original Source

•ಗೃಹ ಲಕ್ಷ್ಮಿ ಯೋಜನೆಯಡಿ ಎಷ್ಟೋ ಮಹಿಳೆಯರ ಖಾತೆಗೆ ಒಂದು ಕಂತಿನ ಹಣವೂ ಬಂದಿಲ್ಲ. ನಿಮಗೆ ಈ ರೀತಿಯ ಸಮಸ್ಯೆ ಇದ್ದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಗೃಹ ಲಕ್ಷ್ಮಿ ಅರ್ಜಿಯ ಎಲ್ಲಾ ರಸೀದಿಗಳನ್ನು ನೀಡಿ ನಿಮ್ಮ ಖಾತೆಗೆ ಹಣ ಏಕೆ ಬಂದಿಲ್ಲ ಎಂಬ ಮಾಹಿತಿಯನ್ನು ಪಡೆಯಿರಿ.

Join Nadunudi News WhatsApp Group

•ಆದಾಯ ತೆರಿಗೆ ಪಾವತಿ ಮಾಡದೇ ಇರುವವರ ಯೋಜನೆ ಹಣ ರದ್ದಾಗಿದ್ದರೆ, ಅಂತವರು ತಕ್ಷಣ ‘ತೆರಿಗೆ ಪಾವತಿ ಮಾಡುತ್ತಿಲ್ಲ ಎನ್ನುವ ದೃಡೀಕರಣ ಪತ್ರವನ್ನು” ಸಂಬಂಧಿಸಿದ ಶಿಶು ಅಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕಾಗುತ್ತಾದೆ. ಇಲಾಖೆಯು ಇದನ್ನು ಪರಿಶೀಲಿಸಿ ನಿಮ್ಮ ಖಾತೆಗೆ ಹಣ ಜಮಾ ಆಗುವಂತೆ ಕ್ರಮ ಕೈಗೊಳ್ಳುತ್ತದೆ.

Join Nadunudi News WhatsApp Group