Gruha Lakshmi: ಗೃಹಲಕ್ಷ್ಮಿ 2000 ರೂ ಇನ್ನೂ ಖಾತೆಗೆ ಬಂದಿಲ್ವ…? ತಕ್ಷಣ ಈ ಕೆಲಸ ಮಾಡಿದರೆ ಮಾತ್ರ ಖಾತೆಗೆ ಹಣ ಜಮಾ

ಗೃಹ ಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿಲ್ಲವಾದರೆ ಇಂದೇ ಈ ಕೆಲಸ ಮಾಡಿ.

Gruha Lakshmi Latest Update: ಸದ್ಯ ರಾಜ್ಯದಲ್ಲಿ Gruha Lakshmi ಯೋಜನೆಯ ಬಗ್ಗೆ ದಿನಕ್ಕೊಂದು ಅಪ್ಡೇಟ್ ಹೊರಬೀಳುತ್ತಲೇ ಇದೆ. ಗೃಹ ಲಕ್ಷ್ಮಿ ಹಣ ಯಾವಾಗ ಖಾತೆಗೆ ಜಮಾ ಆಗುತ್ತದೆ…? ಎಂದು ಜನರು ಸರ್ಕಾರಕ್ಕೆ ಮೇಲಿನ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಸರ್ಕಾರ ಗೃಹ ಲಕ್ಷ್ಮಿ ಹಣ ಜಮಾ ಮಾಡಲು ಎಷ್ಟೇ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಅರ್ಹರಿಗೆ ಯೋಜನೆಯ ಲಾಭವನ್ನು ನೀಡಲು ಸಾಧ್ಯವಾಗುತ್ತಿಲ್ಲ.

Gruha Lakshmi Scheme latest Update 2024
Image Credit: Hindustantimes

ಗೃಹ ಲಕ್ಷ್ಮಿ ಯೋಜನೆಯಡಿ ಒಂದು ಕಂತಿನ ಹಣವನ್ನು ಪಡೆಯದ ಮಹಿಳೆಯರಿಗೆ ಬಿಗ್ ಅಪ್ಡೇಟ್
ಇನ್ನು ಕೂಡ ಗೃಹ ಲಕ್ಷ್ಮಿ ಯೋಜನೆಯಡಿ ಒಂದು ಕಂತಿನ ಹಣವನ್ನು ಪಡೆಯದ ಅದೆಷ್ಟೋ ಅರ್ಹ ಪಲಾನುಭವಿಗಳಿದ್ದಾರೆ. ಯೋಜನೆಯ ಹಣ ಜಮಾ ಆಗಿದೆಯಾ ಎಂದು ತಿಳಿಯಲು ಆಗಾಗ ಖಾತೆ ಚೆಕ್ ಮಾಡುಕೊಳ್ಳುತ್ತಲೇ ಇದ್ದಾರೆ ಎನ್ನಬಹುದು. ಆದರೆ ಮಹಿಳೆಯರ ಖಾತೆ ಹಣ ಜಮಾ ಆಗುತ್ತಲೇ ಇಲ್ಲ. ಸದ್ಯ ರಾಜ್ಯ ಸರ್ಕಾರ ಇಂತವರಿಗಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಯಾರು ಗೃಹ ಲಕ್ಷ್ಮಿ ಯೋಜನೆಯಡಿ ಇನ್ನು ಕೂಡ ಒಂದು ಕಂತಿನ ಹಣವನ್ನು ಪಡೆದಿಲ್ಲವೋ ಅಂತವರು ಆದಷ್ಟು ಬೇಗ ಈ ಕೆಲಸಗಳನ್ನು ಮಡುವುದು ಅಗತ್ಯವಾಗಿದೆ.

ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿಲ್ಲವಾದರೆ ಇಂದೇ ಈ ಕೆಲಸ ಮಾಡಿ
•ಗೃಹ ಲಕ್ಷ್ಮಿ ಯೋಜನೆಯಡಿ ಇನ್ನೂ ಕೂಡ ಒಂದು ಕಂತಿನ ಹಣ ಬರದೇ ಇದ್ದರೆ, ಮೊದಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲವನ್ನು ಕೊಟ್ಟು ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

Gruha Lkahsmi Scheme Money
Image Credit: Original Source

•ಇಲಾಖೆಯವರು ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ ಹಣ ಬಂದಿಲ್ಲ ಎನ್ನುವ ಬಗ್ಗೆ ತಿಳಿಸುತ್ತಾರೆ. ಇದರ ನಂತರ ನೀವು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡು ನಿಮ್ಮ ಖಾತೆಗೆ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದು.

•ಸಿಡಿಪಿಒ ಕಚೇರಿಯಲ್ಲಿ ನಿಮ್ಮ ಅರ್ಜಿ ಅನುಮೋದನೆ ಬಾಕಿಯಿದ್ದರೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇದರ ನಂತರ, ನಿಮ್ಮ ಖಾತೆಗೆ KYC ಪ್ರಕ್ರಿಯೆಯು ಪೂರ್ಣಗೊಂಡರೆ, ಬಾಕಿಯಿರುವ ಮೊತ್ತವನ್ನು ಸಹ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Join Nadunudi News WhatsApp Group

•ಮುಖ್ಯವಾಗಿ ಗೃಹ ಲಕ್ಷ್ಮಿ ಅರ್ಜಿದಾರರು KYC , Aadhar Link , ಹಾಗೂ NPCI Link ಆಗಿದೆಯೋ ಅಥವಾ ಇಲ್ಲವೋ ಎನ್ನುವುಇದನ್ನು ಪರಿಶೀಲಿಸಿಕೊಳ್ಳಬೇಕು.ಇದರಲ್ಲಿ ಯಾವದಾದರೂ ಒಂದು ಪೂರ್ಣಗೊಂಡಿಲ್ಲ ಎಂದಾದರೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ ಎನ್ನುವ ನಿಮಗೆ ಅರಿವಿರಲಿ.

Join Nadunudi News WhatsApp Group