Adalat Complaints: ಗೃಹಲಕ್ಷ್ಮಿ 2,000 ರೂ ಹಣ ಪಡೆಯುತ್ತಿರುವ ಮಹಿಳೆಯರು ತಕ್ಷಣ ಈ ಕೆಲಸ ಮಾಡಬೇಕು, ಇಲ್ಲವಾದರೆ ಹಣ ಬಂದ್.

ಖಾತೆಗೆ ಗೃಹ ಲಕ್ಷ್ಮಿ ಹಣ ಜಮಾ ಆಗಬೇಕಿದ್ದರೆ ನೀವು ಈ ಕೆಲಸ ಮಾಡುವುದು ಕಡ್ಡಾಯ

Gruha Lakshmi Adalat Complaint: ರಾಜ್ಯದ ಮಹಿಳೆಯರು Gruha Lakshmi ಯೋಜನೆಯ ಹಣ ಜಮಾ ಆಗದಿರುವ ಬಗ್ಗೆ ದಿನೇ ದಿನೇ ಚಿಂತಿಸುವಂತಾಗಿದೆ. ಯೋಜನೆ ಅನುಷ್ಠಾನಗೊಂಡು ಮೂರ್ನಾಲ್ಕು ತಿಂಗಳು ಕಳೆದರು ಕೂಡ ಇನ್ನು ಯೋಜನೆಯ ಲಾಭ ಅರ್ಹರಿಗೆ ತಲುಪುತ್ತಿಲ್ಲ. ಇದಕ್ಕಾಗಿ ಸರ್ಕಾರ ಯೋಜನೆಯಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗಿದೆ.

2023 ರ ಅಂತ್ಯದೊಳಗೆ ರಾಜ್ಯದ ಎಲ್ಲಾ ಅರ್ಹ್ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಹಣ ಜಮಾ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಇದೀಗ ರಾಜ್ಯ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ಮುಂದಾಗಿದೆ. ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಹಣ ಜಮಾ ಆಗಬೇಕಿದ್ದರೆ ನೀವು ಈ ಕೆಲಸ ಮಾಡುವುದು ಅಗತ್ಯವಾಗಿದೆ.

Gruha lakshmi Scheme Update
Image Credit: Krishi Jagran

ಗೃಹಲಕ್ಷ್ಮಿ 2000 ರೂ ಹಣ ಪಡೆಯುತ್ತಿರುವ ಮಹಿಳೆಯರು ತಕ್ಷಣ ಈ ಕೆಲಸ ಮಾಡಬೇಕು
ಸರ್ಕಾರ ಇದೀಗ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಈಗಾಗಲೇ ಮೂರು ಕಂತುಗಳ ಹಣ ಜಮಾ ಆಗಿದೆ. ಆದರೆ ಸಾಕಷ್ಟು ಮಹಿಳೆಯರಿಗೆ ಒಂದು ಕಂತಿನ ಹಣ ಕೂಡ ಬಂದಿಲ್ಲ. ಸದ್ಯ ನೀವು ಆಗಸ್ಟ್ 15 ರ ಮೊದಲು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಹಣ ಜಮಾ ಆಗದಿರುವ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಆಗಸ್ಟ್ 15 ರ ಮೊದಲು ಅರ್ಜಿ ಸಲ್ಲಿಸಿದವರಿಗೆ ಯೋಜನೆಯ ಹಣ ತಲುಪಿಸಲು ಗೃಹ ಲಕ್ಷ್ಮಿ ಅದಾಲತ್ ನಡೆಸಲು ಸರ್ಕಾರ ನಿರ್ಧರಿಸಿದೆ. ಇದರ ಮೂಲಕ ಅರ್ಹರಿಗೆ ಯಾವುದೇ ಸಮಸ್ಯೆಗಳಿಲ್ಲದೆ ಹಣ ಜಮಾ ಮಾಡುವುದಾಗಿ ಭರವಸೆ ನೀಡಿದೆ.

ಆಗಸ್ಟ್ 15 ರ ಮೊದಲು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ 6000 ರೂಪಾಯಿ ಹಣ ಜಮಾ
ರಾಜ್ಯ ಸರ್ಕಾರ ಇದೀಗ ಗೃಹ ಲಕ್ಷ್ಮಿ ಅದಾಲತ್ ಆಯೋಜಿಸಿದ್ದು, ನೀವು ಆಗಸ್ಟ್ 15 ರ ಮೊದಲು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಹಣ ಬಂದಿಲ್ಲದಿದ್ದರೆ ದೂರನ್ನು ಗ್ರಾಮ ಪಂಚಾಯತ್ ನಲ್ಲಿ ನೀಡಬಹುದಾಗಿದೆ. ಅವರು ನಿಮ್ಮ ಖಾತೆಯನ್ನು ತಕ್ಷಣವೇ ಪರಿಶೀಲಿಸಿ ಹಣ ಜಮಾ ಮಾಡುವಲ್ಲಿ ಯಶಸ್ವಿಯಾಗಲಿದ್ದಾರೆ. ಇನ್ನು ಡಿಸೇಂಬರ್ ಅಂತ್ಯದೊಳಗೆ ಎಲ್ಲ ಮಹಿಳೆಯರಿಗೆ ಗೃಹ ಲಕ್ಷ್ಮಿ 6,000 ರೂಪಾಯಿ ಹಣ ಜಮಾ ಆಗುತ್ತದೆ ಎಂದು ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

Gruha Lakshmi Amount Credit Latest Update
Image Credit: Power TV

ಅದಾಲತ್ ನಡೆಸಲು ಸರಕಾರ ಸಿದ್ಧವಿದೆ. ಹಣ ಸಿಗದವರ ಬಳಿ ತೆರಳಿ ಸಮಸ್ಯೆ ಬಗೆಹರಿಸಲು ಸರ್ಕಾರ ನಿರ್ಧರಿಸಿದ್ದು, ಇನ್ನೂ ಹಣ ಸಿಗದವರು ಅದಾಲತ್ ನಲ್ಲಿ ದೂರು ದಾಖಲಿಸಬಹುದು. ನೀವು ಸರ್ಕಾರ ಆಯೋಜಿಸಿರುವ ಅದಾಲತ್ ನ ಮೂಲಕ ಗೃಹ ಲಕ್ಷ್ಮಿ ಹಣ ಬಾರದೆ ಇರುವ ಬಗ್ಗೆ ದೂರನ್ನು ದಾಖಲಿಸಬಹುದು. ನಿಮ್ಮ ಸಮಸ್ಯೆಗೆ ಸರ್ಕಾರವೇ ಪರಿಹಾರ ನೀಡುತ್ತದೆ. ಇನ್ನು ಅದಾಲತ್ ಮೂಲಕ ದೂರು ದಾಖಲು ಮಾಡದಿದ್ದರೆ ನಿಮ್ಮ ಸಮಸ್ಯೆ ಪರಿಹಾರ ಆಗಲ್ಲ ಮತ್ತು ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರಲ್ಲ.

Join Nadunudi News WhatsApp Group

Join Nadunudi News WhatsApp Group