Gruha Lakshmi: ಈ ಒಂದು ಕಾರಣಕ್ಕೆ ಇಂತಹ ಮಹಿಳೆಯರ ಖಾತೆ ಜಮಾ ಆಗಿಲ್ಲ ಗೃಹಲಕ್ಷ್ಮಿ ಯೋಜನೆಯ ಹಣ, ತಕ್ಷಣ ಈ ಕೆಲಸ ಮಾಡಿ

ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇದ್ದವರು ತಕ್ಷಣ ಈ ಕೆಲಸ ಮಾಡಿ.

Gruha Lakshmi New Update 2024: ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಪರಿಚಯಿಸುವ ಯೋಜನೆಗಳಲ್ಲಿ Gruha Lakshmi ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಆಗಸ್ಟ್ ನಿಂದ ಮಾಸಿಕ 2000 ರೂ. ಹಣವನ್ನು ಪಡೆಯುತ್ತಿದ್ದಾರೆ.

ಮಹಿಳೆಯರು ಖರ್ಚಿಗಾಗಿ ಸರ್ಕಾರ ಮಾಸಿಕ 2000 ರೂ. ನೀಡುವ ಮೂಲಕ ಅವರಿಗೆ ಆರ್ಥಿಕ ಸ್ಥಿರತೆ ನೀಡಲು ಮುಂದಾಗಿದೆ. ಇನ್ನು ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯಡಿ 5 ಕಂತುಗಳ ಹಣ ಬಿಡುಗಡೆಯಾಗಿದ್ದು, 6 ನೇ ಕಂತಿನ ಹಣ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ.

Gruha Lakshmi New Updates
Image Credit: Hindustantimes

ಗೃಹ ಲಕ್ಷ್ಮಿ ಹಣ ಬಾರದೆ ಇದ್ದವರಿಗೆ ಬಿಗ್ ಅಪ್ಡೇಟ್
ಇನ್ನು ರಾಜ್ಯ ಸಾರ್ಕಾರ ಪರಿಚಯಿಸಿರುವ ಎಲ್ಲ ಕಂತುಗಳ ಹಣ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ . ಇನ್ನೂ ಒಂದು ಕಂತಿನ ಹಣವನ್ನು ಪಡೆಯದ ಸಾಕಷ್ಟು ಮಹಿಳೆಯರಿದ್ದಾರೆ. ಕೆಲ ಮಹಿಳೆಯಯರು ಒಂದೆರಡು ಯೋಜನೆಗಳ ಹಣವನ್ನು ಪಡೆದಿದ್ದು, ಮುಂದಿನ ಕಂತಿನ ಹಣ ಅವರ ಖಾತೆಗೆ ಜಮಾ ಆಗಿಲ್ಲ. ಸದ್ಯ ಸರ್ಕಾರ ಇದೀಗ ಗೃಹ ಲಕ್ಷ್ಮಿ ಯೋಜನೆಯ ಲಾಭ ಸಿಗದ ಮಹಿಳೆಯರಿಗೆ ಬಿಗ್ ಅಪ್ಡೇಟ್ ನೀಡಿದೆ. ಇನ್ನು ಕೂಡ ಮಾಸಿಕ 2000 ಹಣವನ್ನು ಪಡೆಯದವರು ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

ಇನ್ನು ಕೂಡ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇರಲು ಇದೆ ಕಾರಣ
ಮುಖ್ಯವಾಗಿ ತಾಂತ್ರಿಕ ದೋಷದ ಕಾರಣ ಎಲ್ಲ ಅರ್ಹ ಫಲಾನುಭವಿಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ಮಾಸಿಕ 2000 ರೂ ಹಣ ಜಮಾ ಆಗಿರುವುದಿಲ್ಲ. ಇದರ ಹೊರತಾಗಿ ಗೃಹ ಲಕ್ಷ್ಮಿ ಅರ್ಜಿದಾರರು E -KYC ಮಾಡದಿದ್ದರೆ, Aadhaar Link ಮಾಡದಿದ್ದರೆ ಯೋಜನೆಯ ಹಣ ಜಮಾ ಆಗುವುದಿಲ್ಲ. ಹೀಗಾಗಿ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಳ್ಳಿ. ಈ ಎಲ್ಲ ಸಮಸ್ಯೆಗಳು ಪರಿಹಾರವಾಗಿದ್ದು, ಕೆಲ ಕಂತಿನ ಹಣ ಜಮಾ ಆಗಿದ್ದು, ಕೆಲ ಕಂತಿನ ಹಣ ಜಮಾ ಆಗದೆ ಇದ್ದವರು ತಕ್ಷಣ ಈ ಕೆಲಸ ಮಾಡಬೇಕಿದೆ.

e-kyc Mandatory For Gruha Lakshmi Money
Image Credit: The Economic Times

ಗೃಹ ಲಕ್ಷ್ಮಿ ಮಾಸಿಕ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ
ಗೃಹ ಲಕ್ಷ್ಮಿ ಯೋಜನೆಯಡಿ ಎಷ್ಟೋ ಮಹಿಳೆಯರ ಖಾತೆಗೆ ಒಂದು ಕಂತಿನ ಹಣವೂ ಬಂದಿಲ್ಲ. ನಿಮಗೆ ಈ ರೀತಿಯ ಸಮಸ್ಯೆ ಇದ್ದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಗೃಹ ಲಕ್ಷ್ಮಿ ಅರ್ಜಿಯ ಎಲ್ಲಾ ರಸೀದಿಗಳನ್ನು ನೀಡಿ ನಿಮ್ಮ ಖಾತೆಗೆ ಹಣ ಏಕೆ ಬಂದಿಲ್ಲ ಎಂಬ ಮಾಹಿತಿಯನ್ನು ಪಡೆಯಿರಿ. ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದು ತಿಳಿಸುತ್ತಾರೆ. ಆ ಮೂಲಕ ಆ ಸಮಸ್ಯೆಯನ್ನು ಬಗೆಹರಿಸಿ ಗೃಹ ಲಕ್ಷ್ಮಿ ಯೋಜನೆ ಲಾಭವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group