Gruha Lakshmi: ಮನೆಯ ಯಜಮಾನಿ ಮೃತಪಟ್ಟರೆ ಗೃಹಲಕ್ಷ್ಮಿ ಹಣ ಯಾರಿಗೆ ಬರುತ್ತೆ, ಸರ್ಕಾರದಿಂದ ಸ್ಪಷ್ಟನೆ

ಮನೆಯ ಯಜಮಾನಿ ಮೃತಪಟ್ಟರೆ ಗೃಹಲಕ್ಷ್ಮಿ ಹಣ ಯಾರಿಗೆ ಬರುತ್ತೆ, ಇಲ್ಲಿದೆ ಸರ್ಕಾರದ ನಿಯಮ

Gruha Lakshmi Yojana Latest Update: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ (Gruha Lakshmi Yojana) ಅನುಷ್ಠಾನ ಆಗಿದ್ದರೂ ಕೂಡ ಯೋಜನೆಯ ಲಾಭ ಸಂಪೂರ್ಣ ಅರ್ಹರಿಗೆ ತಲುಪುತ್ತಿಲ್ಲ. ಯೋಜನೆಯ ಹಣ ಅರ್ಹರಿಗೆ ತಲುಪದ ಕಾರಣ ಗೃಹ ಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರಕ್ಕೆ ಬಗೆಹರಿಯದ ಸಮಸ್ಯೆಯಾಗಿದೆ.

ಅರ್ಹರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ಆರು ತಿಂಗಳಾದರೂ ಇನ್ನು ಅರ್ಹರಿಗೆ ತಲುಪುತ್ತಿಲ್ಲ. ಗೃಹ ಲಕ್ಷ್ಮಿ ಮೊದಲ ಕಂತಿನ ಹಣ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದು, ಸದ್ಯ ಐದು ಕಂತುಗಳ ಹಣ ಶೇ. 80 ರಷ್ಟು ಅರ್ಹ ಮಹಿಳೆಯರ ಖಾತೆಗೆ DBT ಮೂಲಕ ತಲುಪುತ್ತಿದೆ.

Gruha Lakshmi Yojana Latest
Image Credit: The South First

ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಅನುಮಾನ ಶುರು
ಸದ್ಯ ರಾಜ್ಯ ಸರ್ಕಾರ ಆರನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಿದೆ. ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಎಲ್ಲ ಮಹಿಳೆಯರ ಖಾತೆಗೆ ಮಾಸಿಕ 2000 ರೂಪಾಯಿ ಹಣ ಜಮಾ ಆಗುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಇನ್ನುಕೂಡ ಒಂದು ಕಂತಿನ ಹಣ ಪಡೆಯದೇ ಇರುವ ಮಹಿಳೆಯರು ಸರ್ಕಾರಕ್ಕೆ ಪ್ರಶ್ನೆ ಹಾಕುತ್ತಿದ್ದಾರೆ. ಸದ್ಯ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ರೀತಿಯ ಪ್ರಶ್ನೆ ಹುಟ್ಟಿಕೊಂಡಿದೆ. ಮೃತ ಮಹಿಳೆಯ ಅಕೌಂಟ್ ಗೆ ಗೃಹ ಲಕ್ಷ್ಮಿ ಹಣ ಜಮಾ ಆಗುತ್ತಾ..? ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Gruha Lakshmi Scheme New Update
Image Credit: Original Source

ಮನೆಯ ಯಜಮಾನಿ ಮೃತಪಟ್ಟರೆ ಗೃಹಲಕ್ಷ್ಮಿ ಹಣ ಯಾರಿಗೆ ಬರುತ್ತೆ
ಗದಗ ಜಿಲ್ಲೆಯಲ್ಲಿ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಗೃಹ ಲಕ್ಷ್ಮಿ ಯೋಜನೆಗೆ ಮಹಿಳೆಯು ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಸಿದ ಕೆಲವು ತಿಂಗಳ ಬಳಿಕ ಮಹಿಳೆ ಮೃತ ಪಟ್ಟಿದ್ದಾಳೆ. ಮಹಿಳೆ ಮೃತ ಪಟ್ಟಿದ್ದರು ಕೂಡ ಅವರ ಖಾತೆಗೆ ಹಣ ಜಮಾ ಆಗಿದೆ. ಮೃತ ಮಹಿಳೆಯ ಸೊಸೆ ತನ್ನ ಖಾತೆಗೆ ಜಮಾ ಆಗುವಂತೆ ಮಾಡಿಕೊಂಡಿದ್ದರೂ ಕೂಡ ಸೊಸೆಯ ಖಾತೆಗೆ ಹಣ ಜಮಾ ಆಗುವ ಬದಲಿಗೆ ಮೃತ ಅತ್ತೆಯ ಖಾತೆಗೆ ಹಣ ಜಮಾ ಆಗುತ್ತಿದೆ. ಇದನ್ನು ಗಮನಿಸಿದರೆ ಗೃಹ ಲಕ್ಷ್ಮಿ ಅರ್ಜಿದಾರರು ಮೃತ ಪಟ್ಟಿದ್ದರು ಕೂಡ ಯೋಜನೆಯ ಹಣ ಜಮಾ ಆಗುತ್ತದೆ ಎನ್ನುವುದು ಸ್ಪಷ್ಟವಾಗಿದೆ.

ಇನ್ನು ಸರ್ಕಾರ ಇದರ ಕುರಿತಂತೆ ಸ್ಪಷ್ಟನೆ ನೀಡಿದೆ ಮತ್ತು ಮನೆಯ ಯಜಮಾನಿ ಮೃತಪಟ್ಟರೆ ಆಕೆಯ ಹೆಸರನ್ನ ಗೃಹಲಕ್ಷ್ಮಿ ಯೋಜನೆಯಿಂದ ತಗೆದು ಪ್ರಸ್ತಿತ ಮನೆಯ ಯಜಮಾನಿಯ ಹೆಸರನ್ನ ನೋಂದಣಿ ಮಾಡಿಕೊಳ್ಳಬೇಕು. ಈ ಕೆಲಸವನ್ನ ಆಕೆ ಮೃತಪಟ್ಟ ಕೆಲವೇ ದಿನಗಳಲ್ಲಿ ಮಾಡಬೇಕು ಎಂದು ಸರ್ಕಾರ ತಿಳಿಸಿದರೆ. ಮೃತಪಟ್ಟವರ ಹೆಸರಿನಲ್ಲಿ ಗೃಹಲಕ್ಷ್ಮಿ ಹಣ ಪಡೆದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ

Join Nadunudi News WhatsApp Group

Join Nadunudi News WhatsApp Group