Scheme Update: ಮನೆಯ 2 ನೇ ಯಜಮಾನಿಯ ಖಾತೆಗೆ ಜಮಾ ಆಗಲಿದೆ ಗೃಹಲಕ್ಷ್ಮಿ 2000 ರೂ, ಯೋಜನೆಯಲ್ಲಿ ಬದಲಾವಣೆ.

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ನೇರವಾಗಿ ಇಂತವರ ಖಾತೆಗೆ ಹಣ ಜಮಾ ಆಗಲಿದೆ.

Guarantee Scheme Amount Credit Update: ಇನ್ನು ರಾಜ್ಯದಲ್ಲಿ Anna Bhagya ಹಾಗು Gruha Lakshmi ಯೋಜನೆ ಈಗಾಗಲೇ ಅನುಷ್ಠಾನಗೊಂಡಿದ್ದು ಅರ್ಹರು ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಚುನಾವಣಾ ಸಮಯದಲ್ಲಿ ಅನ್ನ ಭಾಗ್ಯ ಯೋಜನೆಯಡಿ 10 kg ಅಕ್ಕಿ ನೀಡುವುದಾಗಿ ಹಾಗೆಯೆ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ರೂಪಾಯಿ ನೀಡುವುದಾಗಿ  ಘೋಷಣೆ ಹೊರಡಿಸಿತ್ತು.

Anna Bhagya Money
Image Credit: Hosakannada

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ
ರಾಜ್ಯದಲ್ಲಿ ಅಕ್ಕಿ ಸರಬರಾಜಿನ ಕೊರತೆಯಿಂದಾಗಿ 5KG ಅಕ್ಕಿಯ ಬದಲು ಹೆಚ್ಚುವರಿ ಹಣ ನೀಡುತ್ತಿದೆ. ಇನ್ನು ಗೃಹ ಲಕ್ಷ್ಮಿ ಯೋಅನುಷ್ಠಾನಗೊಂಡಿದ್ದರೂ  ಕೂಡ ಯೋಜನೆಯ ಪೂರ್ಣ ಲಾಭ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲು ನಿರ್ಧರಿಸಿದೆ. ಎರಡು ಯೋಜನೆಯ ಹಣ ನೇರವಾಗಿ ಇಂತವರ ಖಾತೆಗೆ ಹಣ ಜಮಾ ಆಗಲಿದೆ.

ಅನ್ನ ಭಾಗ್ಯ ಯೋಜನೆಯ ಹಣ ಇಂತವರ ಖಾತೆಗೆ ಜಮಾ
ಅನ್ನಭಾಗ್ಯ ಯೋಜನೆಯಡಿ ಅಕ್ಟೋಬರ್ ತಿಂಗಳಿನಲ್ಲಿ 1,10,96,413 ಕಾರ್ಡುದಾರರಿಗೆ ಹಣ ಪಾವತಿ ಮಾಡಲಾಗಿದೆ. ಇದುವರೆಗೆ ಒಟ್ಟು 2,444.11 ಕೋಟಿ ರೂ. ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. 12.95 ಲಕ್ಷ ಕಾರ್ಡುದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಮೂಲಕ ಯೋಜನೆಗೆ ಸೇರಿಸಿದ್ದಾರೆ.

ಅಂಚೆ ಕಚೇರಿಗಳಲ್ಲಿ 2.60 ಲಕ್ಷ ಹೊಸ ಖಾತೆ ತೆರೆಯಲಾಗಿದೆ. ಸದ್ಯ ಅನ್ನ ಭಾಗ್ಯ ಯೋಜನೆಯಡಿ ಎರಡನೇ ಹಿರಿಯರ ಖಾತೆಗೆ ಹಣ ವರ್ಗಾವಣೆ ಮಾಡುವ ಕುರಿತು ಸಚಿವ ಸಂಪುಟದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಘೋಷಣೆ ಹೊರಡಿಸಿದ್ದಾರೆ. ಡಿಸೆಂಬರ್ 31 ರೊಳಗೆ ಎಲ್ಲ ಅರ್ಹರಿಗೂ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

Gruha Lakshmi Amount Credit Update
Image Credit: News Next Live

ಗೃಹ ಲಕ್ಷ್ಮಿ ಯೋಜನೆಯ  ಹಣ ಇಂತವರ ಖಾತೆಗೆ ಜಮಾ
ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಖಾತೆಗೆ DBT ಮೂಲಕ ಜಮಾ ಮಾಡುತ್ತಿದೆ. ಆದರೆ ಗೃಹ ಲಕ್ಷ್ಮಿ ಅಷ್ಟು ಅರ್ಜಿದಾರರಿಗೆ ಯೋಜನೆಯ ಹಣ ಜಮಾ ಆಗದೆ ಇರುವುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದಾರೆ.

Join Nadunudi News WhatsApp Group

ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದು, 1 .10 ಕೋಟಿ ಫಲಾನುಭವಿಗಳಿಗೆ ನೆರವು ವರ್ಗಾವಣೆ ಮಾಡಲಾಗಿದೆ. ಇನ್ನುಳಿದ 2 ಲಕ್ಷ ಫಲಾನುಭವಿಗಳಿಗೆ ಹಣ ಜಮಾ ಮಾಡಲು ತಾಂತ್ರಿಕ ದೋಷಗಳು ಎದುರಾಗುತ್ತಿದೆ. ಸದ್ಯ ಕುಟುಂಬದ ಯಜಮಾನಿಯರ ಅನುಪಸ್ಥಿತಿಯಲ್ಲಿ 2 ನೇ ಹಿರಿಯ ಗೃಹಿಣಿಯರ ಖಾತೆಗೆ 2000 ರೂ. ಹಣ ಜಮಾ ಮಾಡುವುದಾಗಿ ಸರ್ಕಾರ ಘೋಷಿಸಿದೆ.

Join Nadunudi News WhatsApp Group