Cash Limit Rules: ಇನ್ಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ನಗದು ಇಟ್ಟುಕೊಳ್ಳುವಂತಿಲ್ಲ, ತೆರಿಗೆ ಇಲಾಖೆಯಿಂದ ಇನ್ನೊಂದು ರೂಲ್ಸ್

ಆದಾಯ ತೆರಿಗೆಯ ನಿಯಮಗಳ ಪ್ರಕಾರ ಮನೆಯಲ್ಲಿ ಇಟ್ಟುಕೊಳ್ಳಬಹುದಾದ ನಗದು ಮಿತಿ ಎಷ್ಟು..?

Rules On Cash Limit At Home In India: ದೇಶದಲ್ಲಿ ಹಣಕಾಸಿನ ವ್ಯವಹಾರ ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಸದ್ಯ ಜನರು UPI ಪಾವತಿಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. UPI ನ ಮೂಲಕ ಅನೇಕ ರೀತಿಯ ಹಣಕಾಸಿನ ವಹಿವಾಟು ನಡೆಯುತ್ತಿದೆ.

ಇನ್ನು ಆದಾಯ ಇಲಾಖೆ ಹಣಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ರೂಪಿಸಿದೆ. ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಬಹುದು ಎನ್ನುವುದಕ್ಕೂ ಆದಾಯ ಇಲಾಖೆಯಲ್ಲಿ ಪ್ರತ್ಯೇಕ ನಿಯಮವಿದೆ. ಆದಾಯ ಇಲಾಖೆಯ ಮಿತಿಗಿಂತ ಯಾರು ಕೂಡ ಹೆಚ್ಚಿನ ಹಣವನ್ನು ಮನೆಯಲ್ಲಿ ಇರಿಸಿಕೊಳ್ಳುವಂತಿಲ್ಲ.

Cash Limit At Home
Image Credit: Navbharattimes

ಮನೆಯಲ್ಲಿ ಹಣ ಇಡುವವರು ಆದಾಯ ಇಲಾಖೆಯ ನಿಯಮ ತಿಳಿದುಕೊಳ್ಳಿ
ಇನ್ನು ಆದಾಯ ಇಲಾಖೆ ಮನೆಯಲ್ಲಿ ಇರಿಸಲಾದ ದಾಖಲೆ ರಹಿತ ಹಣದ ವಿರುದ್ದ ದಾಳಿ ನಡೆಸಬಹುದು ಎನ್ನುವ ಬಗ್ಗೆ ನಿಮಗೆ ಅರಿವಿರಲಿ. ಹೀಗಾಗಿ ಮನೆಯಲ್ಲಿ ಇಂತಿಷ್ಟು ಹಣವನ್ನು ಮಾತ್ರ ಇಟ್ಟುಕೊಳ್ಳಬಹುದು ಎಂದು ಆದಾಯ ಇಲಾಖೆ ನಿಯಮ ಮಾಡಿದೆ. ಮನೆಗಳಲ್ಲಿ ದಾಖಲೆ ಇಲ್ಲದ ಹೆಚ್ಚಿನ ಹಣಗಳನ್ನು ಇಟ್ಟುಕೊಳ್ಳುವಂತಿಲ್ಲ. ಆದಾಯ ಇಲಾಖೆಯ ನಿಯಮಗಳ ಅರಿವಿಲ್ಲದೆ ಹೆಚ್ಚಿನ ಹಣವನ್ನು ಮನೆಯಲ್ಲಿ ಇಟ್ಟಿದ್ದರೆ ಹೆಚ್ಚಿನ ಪ್ರಮಾಣದ ದಂಡವನ್ನು ಕಟ್ಟಬೇಕಾಗುತ್ತದೆ.

ಮನೆಯಲ್ಲಿ ಇಟ್ಟುಕೊಳ್ಳಬಹುದಾದ ನಗದು ಮಿತಿ ಎಷ್ಟು..?
ಆದಾಯ ತೆರಿಗೆಯ ನಿಯಮಗಳ ಪ್ರಕಾರ, ನಿಮ್ಮ ಮನೆಯಲ್ಲಿ ನೀವು ಹೆಚ್ಚಿನ ಹಣವನ್ನು ಇಟ್ಟುಕೊಳ್ಳಬಹುದು, ಆದರೆ ತೆರಿಗೆ ಇಲಾಖೆಯವರು ಸಂಬಂಧಪಟ್ಟ ಹಣದ ದಾಖಲೆಯನ್ನು ಕೇಳಿದಾಗ ಸೂಕ್ತ ಮಾಹಿತಿ ನೀಡಬೇಕಾಗುತ್ತದೆ. ಕಾನೂನುಬದ್ಧವಾಗಿ ಆ ಹಣವನ್ನು ಗಳಿಸಿದ್ದರೆ ಸಂಪೂರ್ಣ ದಾಖಲೆಯನ್ನು ನೀಡಬೇಕು. ಹೆಚ್ಚಿನ ಹಣಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ ಚಿಂತಿಸುವ ಅಗತ್ಯವಿಲ್ಲ.

Guidelines for Cash
Image Credit: Taxconcept

ಮಿತಿಗಿಂತ ಹೆಚ್ಚಿನ ಹಣ ಇಟ್ಟುಕೊಂಡರೆ ಎಷ್ಟು ದಂಡ ಕಟ್ಟಬೇಕು..?
ದಾಖಲೆಗಳಿಲ್ಲದ ಹಣಗಳಿಗೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ. ನಿಮ್ಮಿಂದ ಮರುಪಡೆಯಲಾದ ನಗದು ಮೊತ್ತಕ್ಕೆ ಆ ಮೊತ್ತದ 137 % ವರೆಗೆ ತೆರಿಗೆ ವಿಧಿಸಬಹುದು. ಅಂದರೆ ನಿಮ್ಮ ಬಳಿ ಇರುವ ನಗದು ಮೊತ್ತದ 37 % ಪಾವತಿಸಬೇಕಾಗುತ್ತದೆ. ಇನ್ನು ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ, ಅಥವಾ ಒಮ್ಮೆಲೇ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಬ್ಯಾಂಕ್ ನಲ್ಲಿ ಹಣವನ್ನು ಹಿಂಪಡೆಯುವಾಗ ಪಾನ್ ಹಾಗೂ ಆಧಾರ್ ದಾಖಲೆಗಳನ್ನು ನೀಡಬೇಕಾಗುತ್ತದೆ.

Join Nadunudi News WhatsApp Group

ಇನ್ನು ಬ್ಯಾಂಕಿನಲ್ಲಿ 2 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಮನೆಯಲ್ಲಿ 20 ಲಕ್ಷ ರೂಪಾಯಿಯಿಂದ ಹೆಚ್ಚಿನ ನಗದು ಇಟ್ಟುಕೊಳ್ಳುವುದು ಕಾನೂನು ಬಾಹಿರ ಕೂಡ ಆಗಿದೆ. 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನ ಮನೆಯಲ್ಲಿ ಇಟ್ಟುಕೊಂಡರೆ ತೆರಿಗೆ ಇಲಾಖೆ ದಾಳಿ ಮಾಡಿದ ಸಮಯದಲ್ಲಿ ಅಗತ್ಯ ದಾಖಲೆ ಸಲ್ಲಿಸಬೇಕು.

Join Nadunudi News WhatsApp Group