H.D Deve Gowda: ಮೊಮ್ಮೊಗನಿಗೆ ಖಡಕ್ ಎಚ್ಚರಿಕೆ ನೀಡಿದ ಅಜ್ಜ ದೇವೇಗೌಡ, ಅಜ್ಜನ ಮಾತಿಗಾದರು ಬೆಲೆಕೊಡುತ್ತಾರಾ ಪ್ರಜ್ವಲ್.

ಮೊಮ್ಮೊಗನಿಗೆ ಖಡಕ್ ಎಚ್ಚರಿಕೆ ನೀಡಿದ ಮಾಜಿ ಪ್ರಧಾನಿ HD ದೇವೇಗೌಡ

H.D Deve Gowda Warning To Prajwal Revanna: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇನ್ನು ಕೂಡ ಬಂದಿಯಾಗಿಲ್ಲ. ಪೊಲೀಸರು ಪ್ರಜ್ವಲ್ ರೇವಣ್ಣ ಹುಡುಕಾಟದಲ್ಲಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ವಿದೇಶದಲಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟವಾಗಿದೆ. ಇನ್ನು ದೇಶಕ್ಕೆ ಹಿಂತಿರುಗುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಸಾಕಷ್ಟು ಬಾರಿ ಸೂಚನೆ ನೀಡಲಾಗಿದೆ.

ಎಷ್ಟೇ ನೋಟಿಸ್ ಜಾರಿ ಮಾಡಿದರು ಕೂಡ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳುತ್ತಿಲ್ಲ. ಇದೀಗ ಮಾಜಿ ಪ್ರಧಾನಿ HD ದೇವೇಗೌಡ ಅವರು ಪ್ರಜ್ವಲ್ ರೇವಣ್ಣಗೆ ಭಾರತಕ್ಕೆ ಮರಳುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

H.D Deve Gowda And Prajwal Revanna
Image Credit: Thefederal

ಮೊಮ್ಮೊಗನಿಗೆ ಖಡಕ್ ಎಚ್ಚರಿಕೆ ನೀಡಿದ ಅಜ್ಜ ದೇವೇಗೌಡ
ಇದೀಗ ಮಾಜಿ ಪ್ರಧಾನಿ HD ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರಿಗೆ ಭಾರತಕ್ಕೆ ಹಿಂದಿರುವಂತೆ ಎಚ್ಚರಿಸಿದ್ದಾರೆ. ಈ ಬಗ್ಗೆ ಜೆಡಿಎಸ್ ಅಧಿಕೃತ ಪ್ರಕಟಣೆ ಹೊರಡಿಸಿದೆ. ಜನರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೆಲ್ಲ ನನಗೆ ಗೊತ್ತು. ನಾನು ಅವರನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸುವುದಿಲ್ಲ.

ನಾನು ಅವರನ್ನು ಟೀಕಿಸಲು ಸಹ ಹೋಗುವುದಿಲ್ಲ. ಈ ಹಗರಣದ ಎಲ್ಲ ಸಂಗತಿಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು. ಆದರೆ, ನಾನು ಅವರೊಂದಿಗೆ ವಾಗ್ವಾದಕ್ಕೆ ಇಳಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನಡೆದ ರಾಜಕೀಯ ಷಡ್ಯಂತ್ರಗಳು, ಹಗರಣಗಳು, ಉತ್ಪ್ರೇಕ್ಷೆಗಳು ಮತ್ತು ಪುರಾಣಗಳನ್ನು ನಾನು ವಿಶ್ಲೇಷಿಸಲು ಹೋಗುವುದಿಲ್ಲ. ಅದನ್ನು ಮಾಡುವವರಿಗೆ ದೇವರು ಉತ್ತರ ನೀಡುತ್ತಾನೆ.

ಅದೇನೇ ಇರಲಿ, ಸದ್ಯಕ್ಕೆ ನಾನೇನು ಮಾಡಬಲ್ಲೆ ಎಂದರೆ ಪ್ರಜ್ವಲ್ ಎಲ್ಲಿದ್ದರೂ ಬಂದು ಪೊಲೀಸರ ಮುಂದೆ ಶರಣಾಗಿ ವಿಚಾರಣೆ ಎದುರಿಸಿ ಎಂದು ಹಿಂಜರಿಕೆಯಿಲ್ಲದೆ ಹೇಳುತ್ತೇನೆ. ಇದು ಅವನಿಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆ. ನಿನ್ನ ಮೇಲಿನ ಆಪಾದಿತ ತಪ್ಪುಗಳನ್ನು ನಿರ್ಣಯಿಸಲು ಕಾನೂನು ಇದೆ. ಆದರೆ ನೀವು ಈ ಎಚ್ಚರಿಕೆಯನ್ನು ಗಮನಿಸದಿದ್ದರೆ, ನೀವು ನನ್ನ ಕುಟುಂಬದ ಕೋಪವನ್ನು ಎದುರಿಸಬೇಕಾಗುತ್ತದೆ. ನನ್ನ ಮೇಲೆ ಗೌರವ ಇದ್ದರೆ ಕೂಡಲೇ ಬಂದು ಪೊಲೀಸರಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದರು.

Join Nadunudi News WhatsApp Group

Deve Gowda's Warning To Grandson Prajwal Revanna
Image Credit: News 18

Join Nadunudi News WhatsApp Group