H.G Dattatreya: ಹಿರಿಯ ನಟ ದತ್ತಣ್ಣ ಇನ್ನೂ ಮದುವೆ ಆಗಿಲ್ಲ ಏಕೆ, ರಿವೀಲ್ ಆಯಿತು ಸೀಕ್ರೆಟ್.

ವೀಕೆಂಡ್ ವಿಥ್ ರಮೇಶ್ ನಲ್ಲಿ ಜೀವನದ ಕೆಲವು ಸತ್ಯಗಳನ್ನ ಹೇಳಿಕೊಂಡಿದ್ದಾರೆ ನಟ ದತ್ತಾತ್ರೇಯ

Actor H.G Dattatreya Life Story: ವೀಕೆಂಡ್ ವಿತ್ ರಮೇಶ್ ಶೋ (Weekend With Ramesh) ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಈ ಶೋ ಈಗಾಗಲೇ ಸಾಕಷ್ಟು ವೀಕ್ಷಕರನ್ನು ಪಡೆದುಕೊಂಡಿದ್ದು ಸಾಕಷ್ಟು ಸಾಧನೆ ಮಾಡಿರುವ ವ್ಯಕ್ತಿಗಳನ್ನು ಜನರಿಗೆ ಪರಿಚಯ ಮಾಡಿಕೊಟ್ಟಿದೆ.

ವೀಕೆಂಡ್ ವಿತ್ ರಮೇಶ್ ಶೋ 4 ಸೀಸನ್ ಅನ್ನು ಮುಗಿಸಿ 5 ಸೀಸನ್ ಕಡೆ ಮುಖ ಮಾಡಿದೆ. ಇದೆ ಭಾನುವಾರ ವೀಕೆಂಡ್ ವಿತ್ ರಮೇಶ್ ಶೋ ಗೆ ಹಿರಿಯ ನಟ ದತ್ತಣ್ಣ ಬಂದಿದ್ದರು. ಸಾಧಕರ ಖುರ್ಚಿಯಲ್ಲಿ ಕುಳಿತು ನಟ ದತ್ತಾತ್ರೇಯ (H.G Dattatreya) ತಮ್ಮ ಜೀವನದ ಏರುಪೇರಿನ ಹಾಗು ಸಾಧನೆಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Actor Dattatreya told Weekend with Ramesh why he is not married yet
Image Credit: thenewsminute

ಹಿರಿಯ ನಟ ದತ್ತಾತ್ರೇಯ ಇನ್ನು ಮದುವೆಯಾಗದಿರಲು ಕಾರಣ
ಹಿರಿಯ ನಟ ದತ್ತಣ್ಣ ವೀಕೆಂಡ್ ವಿತ್ ರಮೇಶ್ ಶೋ ಗೆ ಬಂದಾಗ ಅವರಿಗೆ ನೀವು ಇನ್ನು ಮದುವೆಯಾಗಿಲ್ಲ ಎಂಬ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ನಟ ದತ್ತಣ್ಣ ಮನಪೂರ್ವಕವಾಗಿ ಉತ್ತರಿಸಿದ್ದಾರೆ. ಮದುವೆ ಸಂಸಾರ ಎಂದರೆ ಕೆಲವರಿಗೆ ಗೋಳು, ಅದೇ ರೀತಿ ನಟ ದತ್ತಣ್ಣನ ಅಭಿಪ್ರಾಯ ಆಗಿತ್ತು.

ಯಾವಾಗಲೂ ಫ್ರಿ ಆಗಿರಬೇಕು. ಮದುವೆಯಾದರೆ ಫ್ರೀ ಆಗಿ ಇರುವುದಕ್ಕೆ ಆಗಲ್ಲ. ಎಲ್ಲರೂ ಬಂದು ಅವರ ಸಂಸಾರದ ಗೋಳು ಹೇಳಿಕೊಳ್ಳುತ್ತಾರೆ. ಆ ಗೋಳು ಅವರಿಗೆ ಬೇಡ ಎನ್ನುವ ಕಾರಣಕ್ಕೆ ತಾ ದತ್ತಣ್ಣ ಅವರು ಮದುವೆ ಆಗಿಲ್ಲ ಎಂದು ಅವರ ಗೆಳೆಯರೊಬ್ಬರು ಹೇಳಿದ್ದಾರಂತೆ.

Actor Dattatreya revealed some truths of life in Weekend with Ramesh
Image Credit: vijaykarnataka

ದೇಶ ಸೇವೆ ಮಾಡಿದ ನಟ ದತ್ತಣ್ಣ
ಹಿರಿಯ ನಟ ದತ್ತಣ್ಣ ಅವರು ಸಿನಿಮಾದಲ್ಲಿ ಮಾತ್ರ ನಟಿಸುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಅವರು ದೇಶ ಸೇವೆ ಸಹ ಮಾಡಿದ್ದಾರೆ. ವಿಂಗ್ ಕಮಾಂಡರ್ ಆಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ನಟ ದತ್ತಣ್ಣ ಅವರು ಚಿತ್ರರಂಗಕ್ಕೆ ಕಾಲಿಡುವ ಮೊದಲು ವಿಂಗ್ ಕಮಾಂಡರ್ ಆಗಿ ಕೆಲಸ ಮಾಡಿದ್ದಾರೆ. ಅವರು ತಮ್ಮ 45 ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

Join Nadunudi News WhatsApp Group

Join Nadunudi News WhatsApp Group