Hardik Pandya: ವಿಶ್ವದ ಅತೀ ದುಬಾರಿ ವಾಚ್ ಧರಿಸಿದ ಹಾರ್ದಿಕ್ ಪಾಂಡ್ಯ, ಈ ವಾಚ್ ನ ಬಲೆ ಎಷ್ಟು ನೋಡಿ.

ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಧರಿಸುವ ವಾಚ್ ವಿಶ್ವದ ದುಬಾರಿ ವಾಚ್ ಗಳಲ್ಲಿ ಒಂದಾಗಿದೆ.

Hardik Pandya Expensive Watch: ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya)  ಇದೀಗ ಸುದ್ದಿಯಲ್ಲಿದ್ದಾರೆ. ಹಾರ್ಧಿಕ್ ಪಾಂಡ್ಯ ಅವರು ಇತ್ತೀಚಿಗೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಅಭಿಮಾನಿಗಳ ಜೊತೆ ಸದಾ ಸಂವಾದ ನಡೆಸುತ್ತಿರುತ್ತಾರೆ. ಇದೀಗ ಹಾರ್ದಿಕ್ ಪಾಂಡ್ಯ ಅವರು ದುಬಾರಿ ವಾಚ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ದುಬಾರಿ ವಾಚ್ ಧರಿಸಿರುವ ಹಾರ್ಧಿಕ್ ಪಾಂಡ್ಯ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪಾಂಡ್ಯ ಧರಿಸಿದ ವಾಚ್ ನ ಬೆಲೆಯ ಬಗ್ಗೆ ಇದೀಗ ಬಾರಿ ಚರ್ಚೆ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಧರಿಸಿದ ದುಬಾರಿ ವಾಚ್ ನ ಬೆಲೆ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Hardik Pandya posed for a photo wearing an expensive watch
Image Credit: Thisiswatch

ದುಬಾರಿ ವಾಚ್ ಧರಿಸಿ ಫೋಟೋಗೆ ಪೋಸ್ ಕೊಟ್ಟ ಹಾರ್ಧಿಕ್ ಪಾಂಡ್ಯ
ಭಾರತೀಯ ಕ್ರಿಕೆಟ್ ತಂಡದ  ಆಟಗಾರ ಹಾರ್ದಿಕ್ ಪಾಂಡ್ಯ ತಮ್ಮ ಅತ್ಯುತ್ತಮ ಆಟದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್ನು ಐಪಿಎಲ್ ನಲ್ಲಿ ಹಾರ್ದಿಕ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದಾರೆ. ಇನ್ನು ಐಪಿಎಲ್ ಮುಗಿದಿದ್ದು ಇದೀಗ ಪಾಂಡ್ಯ ತಮ್ಮ ಪತ್ನಿ ಜೊತೆ ಕಾಲ ಕಳೆಯುತ್ತಿದ್ದಾರೆ.

ಕೋಟಿ ಬೆಲೆಯ ವಾಚ್ ಧರಿಸಿ ಗಮನ ಸೆಳೆದ ಹಾರ್ದಿಕ್ ಪಾಂಡ್ಯ
ಇನ್ನು ಹಾರ್ಧಿಕ್ ಪಾಂಡ್ಯ ದುಬಾರಿ ಬೆಲೆ ವಾಚ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹಾರ್ಧಿಕ್ ಪಾಂಡ್ಯ NAUTILUS WHITE GOLD PHOENIX ವಾಚ್ ಧರಿಸಿದ್ದಾರೆ. ಈ ವಾಚ್ ನ ಬೆಲೆ ಬರೋಬ್ಬರಿ 3.80 ಕೋಟಿ ರೂ. ಆಗಿದೆ. ಹಾರ್ದಿಕ್ ಪಾಂಡ್ಯ ಧರಿಸಿ ವಾಚ್ ನ ಬೆಲೆ ಕೇಳಿದವರು ಅಚ್ಚರಿ ಪಡುತ್ತಿದ್ದಾರೆ.

ಇನ್ನು ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಅತ್ಯಂದ ದುಬಾರಿ ಸಂಭಾವನೆ ಪಡೆಯುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ಕಾರಣದಿಂದ ಇವರ ಬಳಿ ಸಾಕಷ್ಟು ದುಬಾರಿ ಮೌಲ್ಯದ ವಸ್ತುಗಳಿವೆ. ಈಗಾಗಲೇ ಇವರ ಬಳಿ ಸಾಕಷ್ಟು ವಾಚ್ ಗಳಿದ್ದು ಈ NAUTILUS WHITE GOLD PHOENIX ವಾಚ್ ಅತ್ಯಂತ ದುಬಾರಿಯದ್ದಾಗಿದೆ.

Join Nadunudi News WhatsApp Group

Hardik Pandya posed for a photo wearing an expensive watch
Image Credit: M.rediff

 

ವೈವಾಹಿಕ ಜೀವನದಲ್ಲಿ ಬ್ಯುಸಿ ಆಗಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ
ಕಳೆದ ಫೆಬ್ರವರಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಬಹುಕಾಲದ ಗೆಳತಿ ನತಾಶಾ ಜೊತೆ ಹಾರ್ದಿಕ್ ಪಾಂಡ್ಯ ಹಿಂದೂ ಹಾಗು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಆಗಿದ್ದರು. ಹಾರ್ದಿಕ್ ಪಾಂಡ್ಯ ಅವರ ಮದುವೆಗೆ ಕ್ರಿಕೆಟ್ ಕ್ಷೇತ್ರದ ಗಣ್ಯರು, ಸಿನಿಮಾ ತಾರೆಯರು ರಾಜಕಾರಣಿಗಳು ಸಾಕ್ಷಿಯಾಗಿದ್ದರು. ಹಾರ್ದಿಕ್ ಪಾಂಡ್ಯ ಹಾಗು ನತಾಶಾ ಜೋಡಿ ಎಲ್ಲರ ಗಮನ ಸೆಳೆದಿದ್ದಾರೆ.

Join Nadunudi News WhatsApp Group