Hardik Pandya: ಹಾರ್ದಿಕ್ ಪಾಂಡ್ಯಗೆ ಅವಮಾನ ಮಾಡಿದ ಮುಂಬೈ ಇಂಡಿಯನ್ ಫ್ಯಾನ್ಸ್, ಪದ್ಯ ಮುಂದಿನ ನಡೆ ಏನು ….?

ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ ಕಡೆಯಿಂದ ಅವಮಾನ, ಪಾಂಡ್ಯ ಮುಂದೆ ನಡೆ ಏನು

Hardik Pandya Latest Update: ಸಾಮಾನ್ಯವಾಗಿ ಕ್ರಿಕೆಟ್ ಅನ್ನು ಎಲ್ಲರು ಇಷ್ಟಪಡುತ್ತಾರೆ. ಇನ್ನು ಕ್ರಿಕೆಟ್ ನ ಜೊತೆಗೆ ಕ್ರಿಕೆಟ್ ಆಟಗಾರರು ಕೊಡ ಜನರಿಗೆ ಫೆವರೇಟ್ ಆಗಿರುತ್ತಾರೆ. ಎಲ್ಲ ಕ್ರಿಕೆಟ್ ಆಟಗಾರರಿಗೂ ಸಾಕಷ್ಟು ಅಭಿಮಾನಿಗಳಿರುತ್ತಾದೆ. ಕ್ರಿಕೆಟ್ ಆಟಗಾರರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ Hardik Pandya ಸಿದ್ದುಯಾಗಿದ್ದಾರೆ.

Hardik Pandya ಅವರು Rohith sharma ಅವರಿಂದ ನಾಯಕತ್ವವನ್ನು ಕಸಿದುಕೊಂಡ ಕಾರಣ ರೋಹಿತ್ ಅಭಿಮಾನಿಗಳು ಬೇಸರ ಹಾಕುತ್ತಿದ್ದರೆ. Hardik Pandya ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ Hardik Pandya ಅವರ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವ ಕಂಡುಬಂದಿದೆ. ಈ ವೇಳೆ ಹಾರ್ದಿಕ್ ಪಾಂಡ್ಯಗೆ ದೊಡ್ಡ ಅವಮಾನ ಮಾಡಲಾಗಿದೆ ಎನ್ನುವ ಬಗ್ಗೆ ವರದಿಯಾಗಿದೆ.

Hardik Pandya Latest News
Image Credit: Sportstiger

ಹಾರ್ದಿಕ್ ಪಾಂಡ್ಯಗೆ ದೊಡ್ಡ ಅವಮಾನ ಮಾಡಿದ ಮುಂಬೈ ಇಂಡಿಯನ್ ಫ್ಯಾನ್ಸ್
ಸದ್ಯ ಸೋಶಿಯಲ್ ಮೀಡಿಯಾದಲ್ಲಿ Hardik Pandya ಅವರ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಂಬೈ ಇಂಡಿಯನ್ಸ್ ಅಭಿಮಾನಿಗಳು Hardik Pandya ಅವರಿಗೆ ಅವಮಾನ ಮಾಡಿರುವುದು ಕಂಡುಬಂದಿದೆ.

ವಿಡಿಯೋದಲ್ಲಿ Hardik Pandya ಅವರು ಕಾರ್ ನಿಂದ ಹೊರಬರುತ್ತಿರುವುದನ್ನು ನೋಡಬಹುದು. ಕಾರಿನ ಪಕ್ಕದಲ್ಲಿ ನಿಂತಿದ್ದ ಪ್ರೇಕ್ಷಕರು ‘ಮುಂಬೈ ಕಾ ರಾಜ ಕೋಣ್?’ ಎಂದಾಕ್ಷಣ ‘ರೋಹಿತ್ ಶರ್ಮಾ ಎನ್ನುವ ಘೋಷಣೆಗಳು ಕೇಳಿಬರುತ್ತಿದೆ. ಹಾರ್ದಿಕ್ ಪಾಂಡ್ಯ ಅವರ ಮುಂದೆ ಜನರು ನಿಜವಾಗಿಯೂ ‘ಮುಂಬೈ ಕಾ ರಾಜಾ ರೋಹಿತ್ ಶರ್ಮಾ’ ಎಂದು ಕೂಗಿದ್ದಾರೆಯೇ ಎನ್ನುವ ಬಗ್ಗೆ ಗೊಂದಲ ಉಂಟಾಗಿದೆ. ಅಷ್ಟಕ್ಕೂ ಅಲ್ಲಿ ನಡೆದ ನಿಜವಾದ ವಿಷಯವೇನು…? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Hardik Pandya Latest News Update
Image Credit: yespunjab

ವೈರಲ್ ಆದ ವಿಡಿಯೋದ ಸತ್ಯಾಸತ್ಯತೆ ಏನು..?
ಮೂರು ವರ್ಷಗಳ ಹಿಂದೆ ಯೂಟ್ಯೂಬ್‌ ನಲ್ಲಿ ಅಪ್‌ ಲೋಡ್ ಮಾಡಿದ ವೈರಲ್ ವೀಡಿಯೊವನ್ನು ಹೋಲುವ ಅನೇಕ ವೀಡಿಯೊಗಳನ್ನು ನೋಡಬಹುದು. ಈ ವೀಡಿಯೊದಲ್ಲಿ, ಹಾರ್ದಿಕ್ ಪಾಂಡ್ಯ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಸೇರುತ್ತಿರುವುದನ್ನು ಕಾಣಬಹುದು.ಹಾರ್ದಿಕ್ ಪಾಂಡ್ಯ ಅವರ ಈ ವಿಡಿಯೋ ಮೂರು ವರ್ಷಗಳ ಹಿಂದೆ ಸಾಮಾಜಿಕ ತಾಣದಲ್ಲಿ ಲಭ್ಯವಾಗಿದೆ. ಈ ವೀಡಿಯೊವನ್ನು ಬಳಸಿಕೊಂಡು ಎಡಿಟಿಂಗ್ ಮಾಡಲಾಗಿದೆ.

Join Nadunudi News WhatsApp Group

ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಅವರ ನೇಮಕದ ಘೋಷಣೆಯನ್ನು ಕೆಲವು ವಾರಗಳ ಹಿಂದೆ ಮಾಡಲಾಗಿತ್ತು. ಈ ವೇಳೆ ವೈರಲ್ ಆಗಿರುವ ವಿಡಿಯೋದಲ್ಲಿನ ಧ್ವನಿಯನ್ನು ಪ್ರತ್ಯೇಕವಾಗಿ ಎಡಿಟ್ ಮಾಡಿ ಸೇರಿಸಿರುವುದು ಸ್ಪಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಳೆ ವಿಡಿಯೋ, ಹಾರ್ದಿಕ್ ಪಾಂಡ್ಯ ಅವರಿಗೆ ಯಾವುದೇ ರೀತಿಯ ಅವಮಾನದ ಸಂಗತಿ ನಡೆದಿಲ್ಲ ಎನ್ನುವುದು ಸ್ಫಷ್ಟವಾಗಿದೆ.

Join Nadunudi News WhatsApp Group