Hardik Pandya: ಹಾರ್ದಿಕ್ ಪಾಂಡ್ಯ ಅವರನ್ನ ಮತ್ತೆ ತನ್ನ ತಂಡಕ್ಕೆ ಕರೆತರಲು ಮುಂಬೈ ಇಂಡಿಯನ್ಸ್ ಮಾಡಿದ ಖರ್ಚು ಎಷ್ಟು ಗೊತ್ತಾ…? ಅಬ್ಬಾ ಇಷ್ಟೊಂದಾ

ಹಾರ್ದಿಕ್ ಪಾಂಡ್ಯ ಅವರನ್ನ ಮತ್ತೆ ಮುಂಬೈ ತಂಡಕ್ಕೆ ಕರೆತರಲು ದುಬಾರಿ ಖರ್ಚು ಮಾಡಿದ ಮುಂಬೈ ಇಂಡಿಯನ್ಸ್

Hardik Pandya Returns To Mumbai Indians: 2024 ರ ಐಪಿಎಲ್ ಟೂರ್ನಿ ಆರಂಭಕ್ಕೆ ಸಕಲ ಸಿದ್ಧತೆ ಪ್ರಾರಂಭ ಆಗಿದ್ದು, ಈಗಾಗಲೇ ಆಟಗಾರರ ಪಟ್ಟಿ ತಯಾರಾಗಿದೆ. ಹಾರ್ದಿಕ್ ಪಾಂಡ್ಯ (Hardik Pandya) ಈ ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿ ಅಚ್ಚರಿ ಮೂಡಿಸಿದ್ದಾರೆ.

ಅಷ್ಟೇ ಅಲ್ಲದೆ ಮುಂಬೈ ಫ್ರಾಂಚೈಸಿಯು ಅವರನ್ನೇ ನಾಯಕನಾಗಿ ಘೋಷಿಸಿದೆ. ಈ ಹಿಂದೆ ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಎರಡು ಬಾರಿ ಮುನ್ನೆಡಿಸಿದರು. ಆದರೆ ಈ ಬಾರಿ ಮುಂಬೈ ಫ್ರಾಂಚೈಸಿಯು ಅಧಿಕ ಹಣ ಪಾವತಿ ಮಾಡಿ ತಮ್ಮ ತಂಡಕ್ಕೆ ನಾಯಕನ್ನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Hardik Pandya Returns To Mumbai Indians
Image Credit: The Quint

ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ

ಗುಜರಾತ್ ಟೈಟಾನ್ಸ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಅವರು ಇನ್ನು ಮುಂದೆ ಮುಂಬೈ ತಂಡದಲ್ಲಿ ಕಾಣಸಿಗಲಿದ್ದಾರೆ. ಗುಜರಾತ್ ಟೈಟಾನ್ಸ್ ಸಿವಿಸಿ ಕ್ಯಾಪಿಟಲ್ಸ್ ಒಡೆತನದಲ್ಲಿದೆ, ಇದು 10 ವರ್ಷಗಳ ಕಾಲ ಐಪಿಎಲ್‌ನ ಭಾಗವಾಗಿರಲು BBCI ಗೆ 5,625 ಕೋಟಿ ರೂ ಪಾವತಿಸಿದೆ. ಒಂದು ವೇಳೇ ಪಾಂಡ್ಯ ವ್ಯಾಪಾರ ಒಪ್ಪಂದದಿಂದ ನೂರು ಕೋಟಿ ಗಳಿಸಿದ್ದರೆ, ಆ ಆದಾಯವು ಈ ಹಣಕಾಸು ವರ್ಷದ ಕೊನೆಯಲ್ಲಿ ಸಿವಿಸಿ ಕ್ಯಾಪಿಟಲ್ಸ್ ಬ್ಯಾಲೆನ್ಸ್ ಶೀಟ್‌ ನಲ್ಲಿ ಗೋಚರಿಸುತ್ತದೆ, ಇದು ಕಂಪನಿಯ ಮೌಲ್ಯಮಾಪನದಲ್ಲಿ ಸ್ಪೈಕ್ ಪಡೆಯಲು ಸಹಾಯ ಮಾಡುತ್ತದೆ.

Hardik Pandya Latest News
Image Credit: Sportstiger

15 ಕೋಟಿ ರೂ. ಗೆ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಲಾಗಿತ್ತು

Join Nadunudi News WhatsApp Group

ಅಧಿಕೃತ ವರದಿಯ ಪ್ರಕಾರ ಟೀಮ್ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 15 ಕೋಟಿ ರೂ ಗೆ ಟ್ರೇಡ್ ಮಾಡಿತ್ತು. ಆದರೆ ಇದೀಗ ಮತ್ತೊಂದು ಆಘಾತಕಾರಿ ವಿಚಾರ ವರದಿಯಾಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಗುಜರಾತ್ ಟೈಟಾನ್ಸ್‌ ಗೆ ಸುಮಾರು 100 ಕೋಟಿ ರೂಪಾಯಿಗಳ ಭಾರಿ ವರ್ಗಾವಣೆ ಶುಲ್ಕವನ್ನು ಪಾವತಿಸಿದೆ ಎನ್ನಲಾಗಿದೆ.

Join Nadunudi News WhatsApp Group