Mobile Effect: ದಿನಕ್ಕೆ 4 ಘಂಟೆಗಿಂತ ಹೆಚ್ಚು ಮೊಬೈಲ್ ಬಳಸ್ತೀರಾ…? ಹಾಗಾದರೆ ನಿಮಗೆ ಬರಲಿದೆ ಈ ಆರೋಗ್ಯ ಸಮಸ್ಯೆ

ಪ್ರತಿನಿತ್ಯ ಇದಕ್ಕಿಂತ ಹೆಚ್ಚು ಸಮಯ ಮೊಬೈಲ್ ಬಳಸಿದರೆ ಈ ಆರೋಗ್ಯ ಸಮಸ್ಯೆ ಕಾಡಲಿದೆ

Harmful Effect Of Mobile Phones: ದಿನ ಬೆಳಗೆದ್ದು ನಾವು ನೋಡುವ ಮೊದಲ ವಸ್ತು ಏನೆಂದರೆ ಅದೇ ಮೊಬೈಲ್. ಮೊಬೈಲ್ ನೋಡದೆ ನಮ್ಮ ದಿನವೇ ಪ್ರಾರಂಭ ಆಗದು, ಒಂದು ದಿನ ಇರಲಿ ಒಂದು ಕ್ಷಣ ಕೂಡ ಮೊಬೈಲ್ ಕೈಯಲ್ಲಿ ಇಲ್ಲಾ ಅಂದರೆ ನಮಗೆ ಬದುಕುವುದೇ ಕಷ್ಟ ಅನ್ನುವ ಪರಿಸ್ಥಿತಿಗೆ ನಾವು ಬಂದು ನಿಂತಿದ್ದೇವೆ.

ಈಗ ಮೊಬೈಲ್ ಇಲ್ಲದ ವ್ಯಕ್ತಿ ಸಿಗುವುದೇ ಕಷ್ಟ ಆಗಿ ಹೋಗಿದೆ. ಆದರೆ ನಾವು ಇನ್ನು ಮುಂದಾದರು ಈ ಮೊಬೈಲ್ ಗೆ ಇಷ್ಟೆಲ್ಲ ಅವಲಂಭಿತರಾಗಿರುವುದನ್ನು ನಿಲ್ಲಿಸೋಣ. ಹೌದು ಮೊಬೈಲ್ ನಮಗೆ ನೂರಾರು ಸಮಸ್ಯೆಯನ್ನು ಕೊಡುಗೆ ಆಗಿ ನೀಡುತ್ತಿದೆ, ಇನ್ನಾದರೂ ನಾವು ಎಚೆತ್ತುಕೊಳ್ಳುವುದು ಬಹಳ ಮುಖ್ಯ ಆಗಿದೆ.

Harmful Effect Of Mobile Phones
Image Credit: Risingkashmir

ಮೊಬೈಲ್ ವ್ಯಸನಿ ಆಗುತ್ತಿರುವ ಮನುಷ್ಯ

ಹುಟ್ಟಿದ ಮಗುವಿನಿಂದ ಹಿಡಿದು ನಾಳೆ ಸಾಯುವ ವೃದ್ಧನ ಬಳಿಯೂ ಈಗಿನ ಕಾಲದಲ್ಲಿ ಫೋನ್ ಗಳಿವೆ. ಮಕ್ಕಳು ಊಟ ಮಾಡುತ್ತಿಲ್ಲವೆಂದರು ಫೋನ್, ಮಕ್ಕಳು ಅತ್ತರು ಫೋನ್, ಮಕ್ಕಳು ಶಾಲೆಗೆ ಹೋಗಬೇಕೆಂದರು ಫೋನ್ ನಂತರ ಇಡೀ ಜೀವನವೇ ಫೋನ್ ಫೋನ್. ಫೋನ್ ಬಳಕೆ ಮಾಡದೇ ಇರುವ ಸ್ಥಳವೇ ಇಲ್ಲಾ, ಎಲ್ಲ ಕಡೆಯೂ ನಮಗೆ ಫೋನ್ ಬೇಕಾಗಿದೆ.

ಮನುಷ್ಯ ಮನುಷ್ಯನ ಜೊತೆ ಮಾತನಾಡುವುದೇ ಕಡಿಮೆ ಆಗಿ ಹೋಗಿದೆ, ಸ್ವಲ್ಪ ಸಮಯ ಸಿಕ್ಕರೆ ಸಾಕು ಮೊಬೈಲ್ ನೋಡುತ್ತಾ ಕುಳಿತಿರುತ್ತಾರೆ. ಆದ್ರೆ ಫೋನ್ ನಮ್ಮಆರೋಗ್ಯದ ಮೇಲೆ ಬಹಳ ಪರಿಣಾಮವನ್ನು ಬೀರುತ್ತಿದೆ. ಒಬ್ಬ ವ್ಯಕ್ತಿ ಪ್ರತಿದಿನ 4 ಗಂಟೆಗಳಿಗಿಂತ ಹೆಚ್ಚು ಕಾಲ ಫೋನ್ ನೋಡಿದರೆ ಮಾನಸಿಕ ಒತ್ತಡ ಖಿನ್ನತೆಗೆ ಕಾರಣವಾಗಬಹುದು.

Join Nadunudi News WhatsApp Group

ಹೆಚ್ಚು ಫೋನ್ ಬಳಸುವುದರಿಂದ ಆಗುವ ತೊಂದರೆಗಳು

ಹದಿಹರೆಯದವರ ಸ್ಮಾರ್ಟ್ಫೋನ್ ಗಳ ಬಳಕೆಯ ಬಗ್ಗೆ ಕೊರಿಯಾದ ಹ್ನ್ಯಾಂಗ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ನ ತಂಡವು ಹಲವಾರು ಸಂಶೋಧನೆಗಳನ್ನು ನಡೆಸಿದೆ. ಈ ಪೈಕಿ 50,000 ಕ್ಕೂ ಹೆಚ್ಚು ಜನರನ್ನು ಅಧ್ಯಯನ ಮಾಡಲಾಗಿದೆ. ಈ ಹಂತದಲ್ಲಿ ಜನರು ದಿನಕ್ಕೆ 4 ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್ಫೋನ್ ಬಳಸುವ ಸಾಧ್ಯತೆಯಿದೆ ಎಂದು ಕಂಡುಬಂದಿದೆ. ಇದು ಹೆಚ್ಚಿನ ಮಟ್ಟದ ಒತ್ತಡ, ಆತ್ಮಹತ್ಯೆ, ಆಲೋಚನೆಗಳು ಮತ್ತು ಮಾದಕವಸ್ತು ಬಳಕೆಗೆ ಸಂಬಂಧಿಸಿದೆ. ಫೋನ್ ಅನ್ನು ಹೆಚ್ಚು ಬಳಸುವವರು ಇದೇ ರೀತಿಯ ಆಲೋಚನೆಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

Disadvantages of Mobile
Image Credit: Anmolnews24

ಹೆಚ್ಚು ಫೋನ್ ಬಳಕೆಯಿಂದ ಹಲವಾರು ಆರೋಗ್ಯ ಸಮಸ್ಯೆ ಉಂಟಾಗುತ್ತದೆ

ದಿನವಿಡೀ ಫೋನ್ ಬಳಸುವುದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯ ಸಮಸ್ಯೆಗಳು ಉಂಟಾಗಬಹುದು ಹಾಗು ಮನುಷ್ಯನಿಗೆ ನಿದ್ರೆ ಅನ್ನುವುದು ಬಹಳ ಮುಖ್ಯ ಆಗಿರುತ್ತದೆ. ಆದರೆ ಅತಿಯಾದ ಮೊಬೈಲ್ ಬಳಕೆ ನಿದ್ರೆಯ ಮೇಲೆ ಪರಿಣಾಮ ಬೀರಿ ಅದು ನಮ್ಮ ಆರೋಗ್ಯವನ್ನು ಹದಗೆಟ್ಟಿಸಬಹುದು.n ರಾತ್ರಿ ಮಲಗುವ ಮೊದಲು ನೀವು ಫೋನ್ ಪರದೆಯನ್ನು ನೋಡಿದರೆ ನಿಮಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.ಇದು ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ.

ಫೋನ್ ಬೆಳಕು ಕಣ್ಣಿನ ಮೇಲೆ ಹೆಚ್ಚು ಬಿದ್ದರೆ. ನಿದ್ರೆಯ ಕೊರತೆಯು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಫೋನ್ ನೋಡುವುದರಿಂದ ಕಣ್ಣುಗಳು ಒಣಗುವುದು, ತಲೆನೋವು, ಮಂಪರು, ಆಯಾಸ ಇತ್ಯಾದಿಗಳಿಗೆ ಕಾರಣವಾಗಬಹುದು. ಇದು ಕಣ್ಣಿನ ಸಮಸ್ಯೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಸೆಲ್ ಫೋನ್ ಬಳಸುವವರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಫೋನ್ ಬಳಕೆಯೇ ಮಾಡಬಾರದು ಎನ್ನುವುದು ಇದರ ಅರ್ಥವಲ್ಲ, ಆದರೆ ಹೆಚ್ಚು ಮೊಬೈಲ್ ಬಳಕೆ ಬಹಳ ಅಪಾಯ ಎನ್ನಲಾಗಿದೆ.

Join Nadunudi News WhatsApp Group