Harshika Poonacha: ಸ್ಟಾರ್ ನಟನ ಜೊತೆ ಹಸೆಮಣೆ ಏರಲು ತಯಾರಾದ ಹರ್ಷಿಕಾ ಪೂಣಚ್ಚ, ದಿನಾಂಕ ಫಿಕ್ಸ್.

ಹರ್ಷಿಕಾ ಪೂಣಚ್ಚ ಹಾಗು ಭುವನ್ ಪೊನ್ನಣ್ಣ ಅವರ ಮದುವೆ ದಿನಾಂಕ ಫಿಕ್ಸ್.

Harshika Poonacha Marriage: ಇತ್ತೀಚಿಗೆ ಚಿತ್ರರಂಗದ ನಟ ನಟಿಯರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಕನ್ನಡದ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಸೆಮಣೆ ಏರಲು ಸಿದ್ಧರಾಗುತ್ತಿದ್ದಾರೆ. ಇತ್ತೀಚಿಗಷ್ಟೇ ಸ್ಯಾಂಡಲ್ ವುಡ್ ನ ನಟ ಅಭಿಷೇಕ್ ಅಂಬರೀಷ್ ಅವರ ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ.

ಇದೀಗ ನಟಿ ಹರ್ಷಿಕಾ ಪೂಣಚ್ಚ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಇಬ್ಬರ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ ಎಂದು ಹೇಳಬಹುದು.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಹರ್ಷಿಕಾ ಪೂಣಚ್ಚ ಹಾಗು ಭುವನ್ ಪೊನ್ನಣ್ಣ
ಸ್ಯಾಂಡಲ್ ವುಡ್ ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಕೊನೆಗೂ ಹಸೆಮಣೆ ಏರುತ್ತಿದ್ದಾರೆ. ತುಂಬಾ ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

Harshika Poonacha and Bhuvan Ponnanna wedding date
Image Credit: Vistaranews

ಮದುವೆ ವಿಚಾರವಾಗಿ ಇಬ್ಬರು ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಮದುವೆ ಆಮಂತ್ರಣ ನೀಡುವ ಮೂಲಕ ಸತಿಪತಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯಕ್ರಮ ಸರಳವಾಗಿ ನಡೆದಿದೆ.

ಎರಡು ಕುಟುಂಬದ ಸದ್ಯಸ್ಯರು ಮತ್ತು ಆತ್ಮೀಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಯಲ್ಲಿ ಈ ಜೋಡಿಯ ಆತ್ಮೀಯರು ಸಿನಿಮಾರಂಗದ ನಟ ನಟಿಯರು, ಕಲಾವಿದರು ಭಾಗಿಯಾಗಲಿದ್ದಾರೆ.

Join Nadunudi News WhatsApp Group

ನಟಿ ಹರ್ಷಿಕಾ ಪೂಣಚ್ಚ ಅವರ ಮದುವೆ ದಿನಾಂಕ ಫಿಕ್ಸ್
ನಟಿ ಹರ್ಷಿಕಾ ಪೂಣಚ್ಚ ಅವರ ಮದುವೆ ಆಮಂತ್ರಣ ಪತ್ರಿಕೆ ಈಗಾಗಲೇ ಸಿದ್ಧವಾಗಿದೆ. ಕೊಡಗು ಭಾಷೆಯಲ್ಲಿಯೇ ಆಮಂತ್ರಣ ಪತ್ರಿಕೆಯನ್ನು ಮಾಡಲಾಗಿದೆ.

Harshika Poonacha and Bhuvan Ponnanna wedding date
Image Credit: Vijaykarnataka

ಕೊಡಗು ಸಂಪ್ರದಾಯದಂತೆಯೇ ಇಬ್ಬರು ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲಿಯೇ ನಡೆಯಲಿವೆ. ಭುವನ್ ಮತ್ತು ಹರ್ಷಿಕಾ ಇಬ್ಬರು ಹಲವು ವರ್ಷಗಳಿಂದ ಪೀತಿಸುತ್ತಿದ್ದರು. ಇದೀಗ ಈ ಜೋಡಿ ಹಸೆಮಣೆ ಏರಲಿದ್ದಾರೆ. ಇನ್ನು ಈ ಜೋಡಿಯ ಮದುವೆ ಆಗಸ್ಟ್ 24 ಕ್ಕೆ ನಡೆಯಲಿದೆ.

Join Nadunudi News WhatsApp Group