Prajwal Revanna: ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ದೊಡ್ಡ ಟ್ವಿಸ್ಟ್, SIT ಗೆ ಉಲ್ಟಾ ಹೊಡೆದ ಪ್ರಜ್ವಲ್ ರೇವಣ್ಣ

SIT ಗೆ ಉಲ್ಟಾ ಹೊಡೆದ ಪ್ರಜ್ವಲ್ ರೇವಣ್ಣ

Hassan MP Prajwal Revanna: ಹಾಸನ ಸಂಸದ ಪಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಲೇ ಇದ್ದಾರೆ. ಸದ್ಯ ಈ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವನ್ನು ಪಡೆಯುತ್ತಲೇ ಇದೆ.

ಸದ್ಯ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ SIT ಯಿಂದ ಬಂಧಿತರಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಪ್ರಜ್ವಲ್ ರೇವಣ್ಣ ಅವರು SIT ಗೆ ಉಲ್ಟಾ ಹೊಡೆದಿದ್ದಾರೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Hassan MP Prajwal Revanna
Image Credit: TV9 Kannada

SIT ಗೆ ಉಲ್ಟಾ ಹೊಡೆದ ಪ್ರಜ್ವಲ್ ರೇವಣ್ಣ
ಸದ್ಯ ಪ್ರಜ್ವಲ್ ರೇವಣ್ಣ ಅವರನ್ನು ಆರು ದಿನಗಳ ಕಾಲ SIT ವಶಕೊಪ್ಪಿಸಲಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಅವರನ್ನು SIT ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ಅವರು ಏನೇ ಪ್ರಶ್ನೆ ಕೇಳಿದರೂ ನನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಈ ನಡುವೆ ತಮ್ಮನ್ನು ಪ್ರಶ್ನೆ ಮಾಡುತ್ತಿರುವ ತನಿಖಾಧಿಕಾರಿಗಳಿಗೆ ಪ್ರಜ್ವಲ್ ಮರುಪ್ರಶ್ನೆ ಮಾಡಿದ್ದಾರೆ.

ನನ್ನ ವಿರುದ್ಧ ದೂರು ನೀಡಿದವರು ಯಾರು ಎಂದು ಕೇಳಿದ್ದಾರೆ. ನಮ್ಮ ತೋಟ, ಮನೆಯಲ್ಲಿ ಕೆಲಸ ಮಾಡುವ ಹಲವು ಮಹಿಳೆಯರಿದ್ದಾರೆ. ಅವರ ಪೈಕಿ ನನ್ನ ವಿರುದ್ಧ ದೂರು ಕೊಟ್ಟವರು ಯಾರು ಎಂದೇ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ದೂರು ಕೊಟ್ಟವರು ಯಾರು ಎಂದು SIT ಅಧಿಕಾರಿಗಳಿಗೆ ಮರುಪ್ರಶ್ನೆ ಮಾಡಿದ್ದಾರೆ. ಆಗ ಅಧಿಕಾರಿಗಳು ಪ್ರಜ್ವಲ್ ಗೆ ಮಹಿಳೆಯರ ಫೋಟೋ ತೋರಿಸಿದ್ದಾರೆ. ಆದರೆ ಅವರನ್ನು ನೋಡಿದ ಪ್ರಜ್ವಲ್ ರೇವಣ್ಣ ಇವರೆಲ್ಲಾ ಯಾರು ಅಂತಾನೇ ನನಗೆ ಗೊತ್ತಿಲ್ಲ. ನಾಲ್ಕು ವರ್ಷದ ಹಿಂದೆ ನಡೆದಿದ್ದಾದರೆ ಇಷ್ಟು ದಿನ ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

MP Prajwal Revanna Case
Image Credit: Business-standard

Join Nadunudi News WhatsApp Group

Join Nadunudi News WhatsApp Group