HDFC Bank: HDFC ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ, ಬ್ಯಾಂಕ್ ಸಾಲದ ದರದಲ್ಲಿ ಇಳಿಕೆ.

ಸಾಲಗಳ ಮೇಲಿನ ಬಡ್ಡಿ ದರವನ್ನ ಈಗ HDFC ಬ್ಯಾಂಕ್ ಇಳಿಕೆ ಮಾಡಿದೆ. ಸಾಲಗಳ ಬಡ್ಡಿದರ ಇಳಿಕೆ ಜನರ ಸಂತಸಕ್ಕೆ ಕೂಡ ಕಾರಣವಾಗಿದೆ

HDFC Bank Interest Rate: ಹೊಸ ಹಣಕಾಸು ವರ್ಷ ಆರಂಭವಾದ ಸಮಯದಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಆಗಿದೆ. ಈ ಬಾರಿಯ ಹಣಕಾಸು ವರ್ಷ ಹಣದುಬ್ಬರದ ಪ್ರಮಾಣವನ್ನು ಹೆಚ್ಚಿಸಿದೆ. ಕೆಲವು ಬ್ಯಾಂಕ್ ಗಳು ತಮ್ಮ ರೆಪೋ ದರವನ್ನು (Repo Rate) ಕೂಡ ಹೆಚ್ಚಿಸಿದೆ.

ನೀವು ಹೆಚ್ ಡಿಎಫ್ ಸಿ ಬ್ಯಾಂಕ್ (HDFC Bank) ನ ಗ್ರಾಹಕರಾಗಿದ್ದರೆ ನಿಮಗಿದು ಸಿಹಿ ಸುದ್ದಿ ಲಭಿಸಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಇದೀಗ ಸಾಲದ ದರವನ್ನು ಕಡಿಮೆ ಮಾಡಿದೆ.

HDFC Bank Interest Rate
Image Source: India Today

ಹೆಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ
ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ ಆದ ಹೆಚ್ ಡಿಎಫ್ ಸಿ ಬ್ಯಾಂಕ್ ಇದೀಗ ಮಹತ್ವದ ಘೋಷಣೆಯನ್ನು ಹೊರಡಿಸುವ ಮೂಲಕ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಬ್ಯಾಂಕ್ ತನ್ನ ಸಾಲದ ದರದ ಪ್ರಮಾಣವನ್ನು ಕಡಿತಗೊಳಿಸಲಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಇದರಿಂದ ಅನುಕೂಲವಾಗಲಿದೆ.

HDFC Bank Interest Rate
Image Source: News18

ಹೆಚ್ ಡಿಎಫ್ ಸಿ ಬ್ಯಾಂಕ್ ಸಾಲದ ದರದಲ್ಲಿ ಇಳಿಕೆ
ಹೆಚ್ ಡಿಎಫ್ ಸಿ ಬ್ಯಾಂಕ್ ಸಾಲದ ದರವನ್ನು ಕಡಿಮೆ ಮಾಡಿದೆ. ಎಂಸಿಎಲ್ (MCLR) ದರವನ್ನು ಕಡಿಮೆ ಮಾಡಿದೆ. ಎಂಸಿಎಲ್ ದರವನ್ನು 85 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿದೆ. ಏಪ್ರಿಲ್ 10 ರಿಂದ ಎಂಸಿಎಲ್ ಆರ್ ದರವನ್ನು ಕಡಿಮೆಗೊಳಿಸಲು ಬ್ಯಾಂಕ್ ನಿರ್ಧರಿಸಿದೆ. ಎಂಸಿಎಲ್ ಆರ್ ದರ ಕಡಿಮೆ ಆದರೆ ಸಾಲ ಪಡೆದವರಿಗೆ ಮಾಸಿಕ EMI ದರ ಕೂಡ ಕಡಿಮೆಯಾಗಲಿದೆ.

ರಿಸರ್ವ್ ಬ್ಯಾಂಕ್ ತನ್ನ ರೆಪೋ ದರವನ್ನು ಸ್ಥಿರವಾಗಿರಿಸಿದ ಕಾರಣ ಹೆಚ್ ಡಿಎಫ್ ಸಿ ಬ್ಯಾಂಕ್ ಈ ನಿರ್ಧಾರವನ್ನು ಕೈಗೊಂಡಿದೆ. ಹಾಗೆಯೆ ಕ್ರೆಡಿಟ್ ಸ್ಕೊರ್ ಗಳ ಆಧಾರದ ಮೇಲೆ ಎಂಸಿಎಲ್ ಆರ್ ದರಗಳು ಬದಲಾಗುತ್ತದೆ. ರೆಪೋ ದರದ ಬದಲಾವಣೆಯ ಮೇಲೆ ಎಂಸಿಎಲ್ ಆರ್ ದರ ಏರಿಕೆ ಹಾಗೂ ಇಳಿಕೆ ಅವಲಂಬಿತವಾಗಿರುತ್ತದೆ.

Join Nadunudi News WhatsApp Group

HDFC Bank Interest Rate
Image Source: Times Of India

Join Nadunudi News WhatsApp Group