HDFC Bank: HDFC ಬ್ಯಾಂಕ್ ಖಾತೆ ಇದ್ದವರಿಗೆ ಬೇಸರದ ಸುದ್ದಿ, ಮತ್ತೆ ಸಾಲಗಳ ಬಡ್ಡಿದರ ಇಷ್ಟು ಹೆಚ್ಚಳ.

ಇನ್ನುಮುಂದೆ HDFC ಬ್ಯಾಂಕ್ ನಲ್ಲಿ ಸಾಲವನ್ನು ಪಡೆದವರು ಹೆಚ್ಚಿನ EMI ಅನ್ನು ಪಾವತಿಸಬೇಕಾಗುತ್ತದೆ

HDFC Bank MCLR Hike: ಸದ್ಯ ದೇಶದಲ್ಲಿ RBI ಇತ್ತೀಚೆಗಷ್ಟೇ ರೆಪೋ ದರವನ್ನು ಘೋಷಿಸಿದೆ. ಈ ಬಾರಿ RBI ರೆಪೋ ದರವನ್ನು ಹೆಚ್ಚಿಸುತ್ತದೆ ಎನ್ನುವ ಭೀತಿ ಜನರಲ್ಲಿತ್ತು. ಆದರೆ RBI ಹಣದುಬ್ಬರತೆಯ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಕೂಡ ತನ್ನ ರೆಪೋ ದರದಲ್ಲಿ ಯಥಾಸ್ಥಿತಿ ಕಂಡು ಕಂಡಿದೆ. ಪ್ರಸ್ತುತ RBI ರೆಪೊದರವನ್ನು 6.50 ರಷ್ಟಿದೆ.

ಇನ್ನು RBI ರೆಪೋ ದರದ ಹೆಚ್ಚಿಸಿದರೆ ಬ್ಯಾಂಕುಗಳು ತನ್ನ ಬಡ್ಡಿದರವನ್ನು ಹೆಚ್ಚಿಸುವುದು ಖಚಿತ. ಇನ್ನು ಈ ಬಾರಿಯೂ RBI ರೆಪೋ ದರವನ್ನು ಹೆಚ್ಚಿಸದ ಕಾರಣಜನರು ನಿರಾಳರಾಗಿದ್ದರು. ಆದರೆ ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ ಆಗಿರುವ HDFC Bank ಇದೀಗ ತನ್ನ ಬಡ್ಡಿದರದ ಬಗ್ಗೆ ದಿಢೀರ್ ನಿರ್ಧಾರ ಕೈಗೊಂಡಿದೆ. ಮೂಲಕ ಗ್ರಹಕರಿಗೆ ಆಘಾತಕಾರಿ ಸುದ್ದಿಯನ್ನು ನೀಡಿದೆ.

HDFC Bank Latest Update
Image Credit: Business-standard

HDFC ಬ್ಯಾಂಕ್ ಖಾತೆ ಇದ್ದವರಿಗೆ ಬೇಸರದ ಸುದ್ದಿ
HDFC ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. HDFC ಬ್ಯಾಂಕ್ ತನ್ನ ಸಾಲದ ದರಗಳ ಮಾರ್ಜಿನಲ್ ವೆಚ್ಚವನ್ನು ಅಂದರೆ MCLR ಅನ್ನು 10 ಬೇಸಿಸ್ ಪಾಯಿಂಟ್‌ ಗಳಿಂದ ಅಂದರೆ 0.10 ಪ್ರತಿಶತದಷ್ಟು ಹೆಚ್ಚಿಸಿದೆ. ಈ ಹಿನ್ನಲೆ ಸಂಬಂಧಿಸಿದ ಎಲ್ಲಾ ಸಾಲಗಳ EMI ಇಂದಿನಿಂದ ಹೆಚ್ಚಾಗುತ್ತದೆ. HDFC ಬ್ಯಾಂಕ್‌ ನ ಈ ಬಗ್ಗೆ ಅಧಿಕೃತ ವೆಬ್‌ ಸೈಟ್‌ ಮಾಹಿತಿ ನೀಡಿದೆ. ಇನ್ನುಮುಂದೆ HDFC ಬ್ಯಾಂಕ್ ನಲ್ಲಿ ಸಾಲ ಪಡೆದವರು ಹೆಚ್ಚಿನ EMI ಅನ್ನು ಪಾವತಿಸಬೇಕಾಗುತ್ತದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಇನ್ನುಮುಂದೆ ದುಬಾರಿಯಾಗುತ್ತವೆ.

HDFC Bank MCLR Hike
Image Credit: News 18

ಮತ್ತೆ ಸಾಲಗಳ ಬಡ್ಡಿದರ ಇಷ್ಟು ಹೆಚ್ಚಳ
•HDFC ಬ್ಯಾಂಕ್ ಒಂದು ರಾತ್ರಿಯ MCLR ಅನ್ನು 10 BPS ನಿಂದ 0.10 ಶೇಕಡಾದಿಂದ 8.90 ಶೇಕಡಕ್ಕೆ ಹೆಚ್ಚಿಸಲಾಗಿದೆ.

•HDFC ಬ್ಯಾಂಕ್ ಒಂದು ತಿಂಗಳ MCLR ಅನ್ನು 5 BPS ನಿಂದ 8.85 ಶೇಕಡಾದಿಂದ 8.95 ಶೇಕಡಕ್ಕೆ ಹೆಚ್ಚಿಸಲಾಗಿದೆ.

Join Nadunudi News WhatsApp Group

•HDFC ಬ್ಯಾಂಕ್ 3 ತಿಂಗಳ MCLR 10 BPS ನಿಂದ ಶೇಕಡಾ 9.10 ರಿಂದ 9 ಕ್ಕೆ ಹೆಚ್ಚಿಸಲಾಗಿದೆ.

•HDFC ಬ್ಯಾಂಕ್ ಅರ್ಧ ವಾರ್ಷಿಕ MCLR ಕೇವಲ 9.30 ಕ್ಕೆ ಹೆಚ್ಚಿಸಲಾಗಿದೆ.

•HDFC ಬ್ಯಾಂಕ್ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ 5 BPS MCLR 9.25 ಪ್ರತಿಶತದಿಂದ 9 .30 ಪ್ರತಿಶತ ನಿಗದಿಮಾಡಲಾಗಿದೆ.

•HDFC ಬ್ಯಾಂಕ್ 3 ವರ್ಷ ಕ್ಕಿಂತ ಹೆಚ್ಚಿನ ಅವಧಿಗೆ MCLR ಶೇಕಡಾ 9.30 ಕ್ಕೆ ನಿಗದಿಪಡಿಸಲಾಗಿದೆ.

Join Nadunudi News WhatsApp Group