HDFC Bank: ಜುಲೈ 1 ಕ್ಕೆ ವಿಲೀನವಾಗಲಿದೆ HDFC ಬ್ಯಾಂಕ್, HDFC ಬ್ಯಾಂಕ್ ಗ್ರಾಹಕರಿಗೆ ಹೊಸ ರೂಲ್ಸ್.

ಹೆಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ, ಜುಲೈ 1 ರಿಂದ ಬದಲಾಗಲಿದೆ ಹೆಚ್ ಡಿಎಫ್ ಸಿ ಬ್ಯಾಂಕ್ ನಿಯಮಗಳು.

HDFC Bank Merge From July 1st: ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಆಗಿರುವ ಹೆಚ್ ಡಿಎಫ್ ಸಿ ಬ್ಯಾಂಕ್ (HDFC Bank) ಇತ್ತೀಚಿಗೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. ಜುಲೈ 1 ರಿಂದ ಹೆಚ್ ಡಿಎಫ್ ಸಿ ಬ್ಯಾಂಕ್ ನಿಯಮಗಳು ಬದಲಾಗಲಿವೆ. ನೀವು ಹೆಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದರೆ ಈ ಮಾಹಿತಿ ತಿಳಿದುಕೊಳ್ಳಿ.

Important information for HDFC Bank customers
Image Credit: Livemint

ಹೆಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ
ಹೆಚ್ ಡಿಎಫ್ ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪಾರೇಖ್ ಅವರು ಬ್ಯಾಂಕ್ ವಿಲೀನ ಆಗುವ ಕುರಿತು ಮಾಹಿತಿ ನೀಡಿದ್ದಾರೆ. ಹೆಚ್ ಡಿ ಎಫ್ ಸಿ ಬ್ಯಾಂಕ್ ವಿಲೀನವೂ ಜುಲೈ 1 ರಿಂದ ಜಾರಿಗೆ ಬರಲಿದೆ. ಹೆಚ್ ಡಿಎಫ್ ಸಿ ಹಾಗೂ ಹೆಚ್ ಡಿಎಫ್ ಸಿ ಬ್ಯಾಂಕ್ ನ ಆಡಳಿತ ಮಂಡಳಿಗಳು ಜೂನ್ 30 ರಂದು ಸಭೆ ಸೇರಿಸಿ ವಿಲೀನಕ್ಕೆ ಒಪ್ಪಿಗೆ ನೀಡಲಿವೆ ಎಂದು ದೀಪಕ್ ಪಾರೇಖ್ ಮಾಹಿತಿ ನೀಡಿದ್ದಾರೆ.

ಜುಲೈ 1 ಕ್ಕೆ ವಿಲೀನವಾಗಲಿದೆ HDFC ಬ್ಯಾಂಕ್
ಜುಲೈ 1 ರಿಂದ ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಆರಂಭವಾಗಲಿದೆ ಎಂದು  ಸ್ಪಷ್ಟಪಡಿಸಲಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗು ಎಚ್ ಡಿ ಎಫ್ ಸಿ ವಿಲೀನದಿಂದಾಗಿ ಅತಿ ದೊಡ್ಡ ಸ್ಟಾಕ್ ಆಗುವ ಸಾಧ್ಯತೆ ಇದೆ. ವಿಲೀನದ ನಂತರ ಕಂಪನಿಯ ಆಸ್ತಿ ಮೌಲ್ಯವು ಸರಿಸುಮಾರು ರೂ. 18 ಲಕ್ಷ ಕೋಟಿ ಆಗಲಿದೆ. ಹೆಚ್ ಡಿಎಫ್ ಸಿ ಷೇರುದಾರರಿಗೆ ಪ್ರತಿ 25 ಷೇರುಗಳಿಗೆ, ಹೆಚ್ ಡಿಎಫ್ ಸಿ ಬ್ಯಾಂಕ್ ನ 42 ಷೇರುಗಳು ಸಿಗಲಿವೆ.

Important information for HDFC Bank customers
Image Credit: Businesstoday

ಈ ವಿಲೀನದ ಮೂಲಕ ಎಚ್ ಡಿ ಎಫ್ ಸಿ ಬ್ಯಾಂಕ್ ಕೃಷಿ ಸೇರಿದಂತೆ ಆದ್ಯತೆಯ ವಲಯಕ್ಕೆ ಹೆಚ್ಚಿನ ಪ್ರಮಾಣದ ಸಾಲವನ್ನು ಸುಗಮವಾಗಿ ಹಾಗು ಶೀಘ್ರವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ಎಚ್ ಡಿ ಎಫ್ ಸಿ ಹೇಳಿದೆ.ಎಚ್ ಡಿ ಎಫ್ ಸಿ ಹಾಗು ಎಚ್ ಡಿ ಎಫ್ ಸಿ ವಿಲೀನ ಮಾಡುವುದರಿಂದ ಎಚ್‌ ಡಿ ಎಫ್‌ ಸಿ ಬ್ಯಾಂಕ್‌ನ ಅಸುರಕ್ಷಿತ ಸಾಲಗಳ ಪ್ರಮಾಣ ಕಡಿಮೆ ಆಗಲಿದೆ.

ಅದೇ ರೀತಿಯಲ್ಲಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಜನರು ಹಾಗೆ ಹೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಜನರಿಗೆ ಈ ವಿಲೀನ ಬಹಳ ಲಾಭವನ್ನ ತಂದುಕೊಡಲಿದೆ.

Join Nadunudi News WhatsApp Group

Join Nadunudi News WhatsApp Group