HDFC Bank: ನಾಳೆ ವಿಲೀನವಾಗಲಿದೆ HDFC ಬ್ಯಾಂಕ್, ಗ್ರಾಹಕರ ಮೇಲೆ ಬೀಳಲಿದೆ ಈ 5 ಪರಿಣಾಮಗಳು.

HDFC ಬ್ಯಾಂಕ್ ವಿಲೀನದಿಂದಾಗಿ ಗ್ರಾಹಕರ ಮೇಲೆ ಕೆಲವು ಪರಿಣಾಮಗಳು ಬೀರಲಿದೆ.

HDFC Bank Merge: ಇದೀಗ ಮತ್ತೆ ಹೆಚ್ ಡಿ ಎಫ್ ಸಿ ಬ್ಯಾಂಕ್ ವಿಲೀನದ ಬಗ್ಗೆ ಸುದ್ದಿ ಆಗಿದೆ. ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಆಗಿರುವ ಹೆಚ್ ಡಿಎಫ್ ಸಿ ಬ್ಯಾಂಕ್ (HDFC Bank) ಇತ್ತೀಚಿಗೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಇದೀಗ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ಹೊರಡಿಸಿದೆ. ಜುಲೈ 1 ರಿಂದ ಹೆಚ್ ಡಿಎಫ್ ಸಿ ಬ್ಯಾಂಕ್ ನಿಯಮಗಳು ಬದಲಾಗಲಿವೆ. ನೀವು ಹೆಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಾಗಿದ್ದರೆ ಈ ಮಾಹಿತಿ ತಿಳಿದುಕೊಳ್ಳಿ.

ನಾಳೆ ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನ
ಜುಲೈ 1 ರಿಂದ ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಆರಂಭವಾಗಲಿದೆ ಎಂದು  ಸ್ಪಷ್ಟಪಡಿಸಲಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗು ಎಚ್ ಡಿ ಎಫ್ ಸಿ ವಿಲೀನದಿಂದಾಗಿ ಅತಿ ದೊಡ್ಡ ಸ್ಟಾಕ್ ಆಗುವ ಸಾಧ್ಯತೆ ಇದೆ.

What are the implications of HDFC Bank merger
Image Credit: Timesnownews

ನಾಳೆ ಶನಿವಾರದಂದು ಭಾರತದ ಆರ್ಥಿಕ ಜಗತ್ತಿನಲ್ಲಿ ದೊಡ್ಡ ಬದಲಾವಣೆ ಸಂಭವಿಸಲಿದೆ. ಭಾರತದ ಎರಡು ಅತ್ಯಮೂಲ್ಯ ಕಂಪನಿಗಳಾದ ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಎಚ್ ಡಿ ಎಫ್ ಸಿ ಲಿಮಿಟೆಡ್ ನ ವಿಲೀನ ಪ್ರಕ್ರಿಯೆಯು ಜುಲೈ 1 ರಿಂದ ಜಾರಿಗೆ ಬರಲಿದೆ.

HDFC ಬ್ಯಾಂಕ್ ವಿಲೀನದಿಂದಾಗಿ ಆಗುವ ಪರಿಣಾಮಗಳೇನು
ದೇಶದ ಅತಿದೊಡ್ಡ ಖಾಸಗಿ ವಲಯದ ಹೆಚ್ ಡಿ ಎಫ್ ಸಿ ಬ್ಯಾಂಕ್ ವಿಲೀನಾದಿಂದಾಗಿ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. HDFC ಲಿಮಿಟೆಡ್ ಯಿಂದ ಸಾಲ ಪಡೆಯುವ ಗ್ರಾಹಕರಿಗೆ ಬದಲಾವಣೆಯಾಗಬಹುದು. HDFC ಲಿಮಿಟೆಡ್ ಭಾರತದ ಅತಿ ದೊಡ್ಡ ಖಾಸಗಿ ಗೃಹ ಸಾಲ ನೀಡುವ ಸಂಸ್ಥೆಯಾಗಿದೆ. ವಿಲೀನದ ನಂತರ, HDFC ಯ ಸಂಪೂರ್ಣ ಹೋಮ್ ಲೋನ್ ಪೋರ್ಟ್‌ಫೋಲಿಯೊವನ್ನು HDFC ಗೆ ವರ್ಗಾಯಿಸಲಾಗುತ್ತದೆ.

Join Nadunudi News WhatsApp Group

ಗ್ರಾಹಕರು ಹೋಮ್ ಲೋನನ್ನು ಬಾಹ್ಯ ಬೆಂಚ್‌ಮಾರ್ಕ್ ಲೆಂಡಿಂಗ್ ದರಗಳಿಗೆ ಅಂದರೆ EBLR ಗೆ ಲಿಂಕ್ ಮಾಡಲು ಬಯಸಿದರೆ, ಅವರು ಈ ಆಯ್ಕೆಯನ್ನು ಪಡೆಯುತ್ತಾರೆ. ಎನ್‌ ಬಿಎಫ್‌ ಸಿ ಕಂಪನಿಯಾಗಿರುವುದರಿಂದ ಎಚ್‌ ಡಿಎಫ್‌ ಸಿ ಗ್ರಾಹಕರು ಈ ಸೌಲಭ್ಯವನ್ನು ಪಡೆಯುವುದಿಲ್ಲ. ಈಗ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿಮೆ ಮಾಡಿದರೆ, ಸಾಲದ ಇಎಂಐ ಕೂಡ ಕಡಿಮೆಯಾಗುತ್ತದೆ.

What are the implications of HDFC Bank merger
Image Credit: Moneycontrol

HDFC ಲಿಮಿಟೆಡ್ ನ ಒಂದು NBFC ಆಗಿದೆ. ಸಾಮಾನ್ಯವಾಗಿ ಎಫ್ ಡಿ ಹೂಡಿಕೆದಾರರಿಗೆ ಹೆಚ್ಚಿನಹೆಚ್ಚಿನ ಬಡ್ಡಿಯನ್ನ ನೀಡುವ ಸಾಧ್ಯತೆ ಇದೆ. ಕೆಲವು ಸಮಯಗಳಲ್ಲಿ ಈ ವೀಲಿನ ಪ್ರಕ್ರಿಯೆಯು ಇಲ್ಲಿ ನಷ್ಟವನ್ನು ಉಂಟುಮಾಡಬಹುದು. HDFC ಲಿಮಿಟೆಡ್ 12 ರಿಂದ 120 ತಿಂಗಳ FD ಗಳ ಮೇಲೆ 6 .56 ರಿಂದ 7 .21 ಪರ್ಸೆಂಟ್ ವರೆಗಿನ ಬಡ್ಡಿಯನ್ನು ನೀಡುತ್ತವೆ.

Join Nadunudi News WhatsApp Group