HDFC Bank: HDFC ಬ್ಯಾಂಕ್ ಖಾತೆ ಇದ್ದವರಿಗೆ ಹೊಸ ರೂಲ್ಸ್, ಈ ಗ್ರಾಹಕರಿಗೆ ಇನ್ಮುಂದೆ ಈ ಸೇವೆ ಲಭ್ಯವಿಲ್ಲ.

ಇನ್ನುಮುಂದೆ HDFC Bank ಗ್ರಾಹಕರು ಈ ಸೌಲಭ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ

HDFC Bank Mobile Application: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಇನ್ನು ಜನರ ವಹಿವಾಟನ್ನು ಸುಲಭಗೊಳಿಸಲು ಬ್ಯಾಂಕುಗಳು ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯವನ್ನು ನೀಡುತ್ತದೆ.

ಎಲ್ಲ ಬ್ಯಾಂಕ್ ಗಳಂತೆಯೇ ದೇಶದ ಜನಪ್ರಿಯ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ತನ್ನ ಗ್ರಹಕರಿಗೆ Mobile Banking Application ಅನ್ನು ಪರಿಚಯಿಸಿದೆ. ಸದ್ಯ HDFC Bank ಇದೀಗ ಈ ಸೌಲಭ್ಯದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಇನ್ನುಮುಂದೆ HDFC Bank ಗ್ರಾಹಕರು ಈ ಸೌಲಭ್ಯವನ್ನು ಬಳಸಲು ಸಾಧ್ಯವಾಗುವುದಿಲ್ಲ.

HDFC Bank Latest Update
Image Credit: Economictimes

HDFC ಬ್ಯಾಂಕ್ ಖಾತೆ ಇದ್ದವರಿಗೆ ಹೊಸ ರೂಲ್ಸ್
HDFC Bank ಇದೀಗ ಗ್ರಾಹಕರ ಸುರಕ್ಷತೆಗಾಗಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. HDFC ಬ್ಯಾಂಕ್ ತನ್ನ ಗ್ರಾಹಕರಿಗೆ ಸಂದೇಶ ಮತ್ತು ಇ-ಮೇಲ್ ಕಳುಹಿಸುತ್ತಿದೆ. ಈ ಇಮೇಲ್‌ನಲ್ಲಿ, ಸೈಬರ್ ಸುರಕ್ಷತೆಯನ್ನು ಹೆಚ್ಚಿಸಲು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

HDFC ಗ್ರಾಹಕರಿಗೆ ಇನ್ಮುಂದೆ ಈ ಸೇವೆ ಲಭ್ಯವಿಲ್ಲ
ಈ ಬದಲಾವಣೆಯಿಂದಾಗಿ, ಈಗ ಗ್ರಾಹಕರು App ಅನ್ನು ಬಳಸುವ ಮೊದಲು HDFC ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಅನ್ನು ನವೀಕರಿಸಬೇಕು ಮತ್ತು ಪರಿಶೀಲಿಸಬೇಕು. ಮೊಬೈಲ್ ಅಪ್ಲಿಕೇಶನ್‌ ನ ಹೊಸ ಆವೃತ್ತಿಯು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು HDFC ಬ್ಯಾಂಕ್ ತನ್ನ ಗ್ರಾಹಕರಿಗೆ ಮೇಲ್‌ ನಲ್ಲಿ ತಿಳಿಸುತ್ತಿದೆ. ಬ್ಯಾಂಕ್‌ ನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್ ಹೊಂದಿರುವ ಮೊಬೈಲ್‌ ನಲ್ಲಿ ಅಪ್ಲಿಕೇಶನ್ ಅನ್ನು ಬಳಸಬಹುದು.

HDFC Bank Mobile Application
Image Credit: Fortuneindia

ಹೊಸ ಆವೃತ್ತಿಯು ಇನ್ನು ಮುಂದೆ ಬ್ಯಾಂಕ್‌ ನ ಮೊಬೈಲ್ ಅಪ್ಲಿಕೇಶನ್‌ ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ನೀವು HDFC Bank ನ ಗ್ರಾಹಕರಾಗಿದ್ದರೆ, ನೀವು ಮೊಬೈಲ್ ಅಪ್ಲಿಕೇಶನ್‌ ನ ಹಳೆಯ ಆವೃತ್ತಿಯ ಮೂಲಕ ಯಾವುದೇ ವಹಿವಾಟು ಮಾಡಲು ಸಾಧ್ಯವಿಲ್ಲ. ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಈ ಆವೃತ್ತಿಯನ್ನು ತರಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಇದರಲ್ಲಿ ಹೆಚ್ಚಿನ ಸೈಬರ್ ಭದ್ರತೆಯನ್ನು ಒದಗಿಸಲಾಗುವುದು. ಇದರಿಂದ ಗ್ರಾಹಕರ ಬ್ಯಾಂಕಿಂಗ್ ಡೇಟಾ ಸುರಕ್ಷಿತವಾಗಿ ಉಳಿಯುತ್ತದೆ.

Join Nadunudi News WhatsApp Group

Join Nadunudi News WhatsApp Group